ತಮ್ಮ ಸಿನಿಮಾಗಳನ್ನು ತಾವೇ ನಿರ್ದೇಶಿಸಿಕೊಂಡ ಸ್ಯಾಂಡಲ್‌ವುಡ್‌ ನಟರಿವರು..!

Sandalwood Directors : ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ನಟನೆ ಮತ್ತು ನಿರ್ದೇಶನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನಟನೆಯ ಜೊತೆಗೆ ತಮ್ಮದೇ ಶೈಲಿಯಲ್ಲಿ ಸಿನಿಮಾ ನಿರ್ದೇಶನ ಮಾಡಿ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯವಾಗಿದ್ದಾರೆ. ಜೊತೆಗೆ ಹಲವಾರು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.   

Written by - Zee Kannada News Desk | Last Updated : May 16, 2023, 02:37 PM IST
  • ಕನ್ನಡ ಸಿನಿರಂಗದಲ್ಲಿ ಹಲವಾರು ನಟರು ನಟನೆಯ ಜೊತೆಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ.
  • ಅನೇಕ ನಟರು ಇಂದಿಗೂ ಸೂಪರ್‌ ಹಿಟ್‌ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.
  • ಅವರ ಲಿಸ್ಟ್‌ ಇಲ್ಲಿದೆ ನೋಡಿ
ತಮ್ಮ ಸಿನಿಮಾಗಳನ್ನು ತಾವೇ ನಿರ್ದೇಶಿಸಿಕೊಂಡ ಸ್ಯಾಂಡಲ್‌ವುಡ್‌ ನಟರಿವರು..!  title=

Sadalwood Actors : ಕನ್ನಡದಲ್ಲಿ ಇನ್ನೂ ಕೆಲವು ನಟರು ತಮ್ಮ ಸಿನಿಮಾವನ್ನು ತಾವೇ ನಿರ್ದೇಶಿಸಿ ನಟಿಸಿದ್ದಾರೆ. ಅಂತಹ ಪ್ರತಿಭಾನಿವತ ನಟರ ಪಟ್ಟಿ ಇಲ್ಲಿದೆ ನೋಡಿ.

ಕಿಚ್ಚ ಸುದೀಪ್‌

ಕಿಚ್ಚ ಸುದೀಪ್‌ ಅವರು ಬಹುಮಖ ಹಾಗೂ ಬಹುಭಾಷಾ ನಟ. ಇವರು ಕೇವಲ ನಟ ಮಾತ್ರವಲ್ಲ ಪ್ರತಿಭಾನ್ವಿತ ನಿರ್ದೇಶಕನು ಹೌದು. ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಳ್ಳುವ ಕಿಚ್ಚ ನಿರ್ದೇಶನ ಮಾಡಿದ ಮೊದಲ ಸಿನಿಮಾ ಎಂದರೇ ಅದು ಮೈ ಆಟೋಗ್ರಾಫ್.‌ ಕೇವಲ ನಿರ್ದೇಶನ ಅಲ್ಲದೇ ಕಿಚ್ಚ ಕ್ರಿಯೆಷನ್‌ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದರು. 

ಈ ಸಿನಿಮಾ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಅಲ್ಲದೇ 175 ದಿನಗಳ ಕಾಲ ಸಿನಿಮಾ ಪ್ರದರ್ಶನ ಕಂಡಿತ್ತು. ಜೊತೆಗೆ ವೀರ ಮದಕರಿ, ಜಸ್ಟ್‌ ಮಾತ್‌ ಮಾತಲ್ಲಿ, ಕೆಂಪೇಗೌಡ ಮತ್ತು ಮಾಣಿಕ್ಯ ಸಿನಿಮಾಗಳನ್ನು ನಿರ್ದೇಶಿ ನಟಿಸಿದ್ದರು.

ಇದನ್ನೂ ಓದಿ-ʼದಿ ಕೇರಳ ಸ್ಟೋರಿʼ ನಾಯಕಿ ತಮ್ಮ ಹೆಸರನ್ನು ಬದಲಾಯಿಸಿಕೊಂಡ್ರಾ? ಕಾರಣವೇನು

ಕಾಶೀನಾಥ್‌ 

ಚಿತ್ರರಂಗದಲ್ಲಿ ಕಾಶೀನಾಥ್‌ ಅವರು ತಮ್ಮ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರನಿರ್ಮಾಣದಲ್ಲಿ ತಮ್ಮ ಪ್ರತಿಭೆಯನ್ನು ತೋರಿ, ಸ್ಯಾಂಡಲ್‌ವುಡ್‌ನಲ್ಲಿ ವಿಶೇಷ ನಿರ್ದೇಶಕರಾಗಿ ಗುರುತಿಸಿಕೊಂಡವರು. ಇವರ ವಿಭಿನ್ನ ಶೈಲಿಯ ಚಿತ್ರಗಳು ಕನ್ನಡ ಸಿನಿರಂಗದಲ್ಲಿ ಯಶಸ್ಸು ಕಂಡಿವೆ. ಇವರ ಅಡಿಯಲ್ಲಿ ಕಲಿತ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಯಶಸ್ವಿಯಾಗಿದ್ದಾರೆ. 

ಕಾಶೀನಾಥ್‌ ಅವರು ಅನುಭವ ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ತಾವೇ ನಟನಾಗಿಯೂ ಕಾಣಿಸಿಕೊಂಡರು. ಈ ಸಿನಮಾ ಯಶಸ್ಸನ್ನು ಕಂಡಿತು. ಇವರು ಹೆಚ್ಚಾಗಿ ಹಾಸ್ಯ ಚಿತ್ರಗಳಿಂದಲೇ ಗುರುತಿಸಿಕೊಂಡವರು.

ಇದನ್ನೂ ಓದಿ-ರಾಜಕೀಯದಲ್ಲಿ ಸೋತ ಸ್ಯಾಂಡಲ್‌ವುಡ್‌ ನಟ ನಟಿಯರಿವರು..!

ಶಂಕರ್‌ನಾಗ್‌ 

ವಿಭಿನ್ನವಾಗಿ ನಡೆಯುವ ಶೈಲಿ, ಕಂಚಿನ ಕಂಠ, ಆಕರ್ಷಕ ನೋಟದಿಂದ ಎಲ್ಲರ ಗಮನ ಸೆಳೆದ ನಟ ಶಂಕರ್‌ ನಾಗ್.‌ ಇವರ ಮೊದಲ ನಿರ್ದೇಶನದ ಸಿನಿಮಾ ಮಿಂಚಿನ ಓಟ. ಈ ಸಿನಿಮಾದಲ್ಲಿ ಅನಂತ್‌ನಾಗ್‌ ಹಾಗೂ ಶಂಕರ್‌ನಾಗ್‌ ಇಬ್ಬರು ಮುಖ್ಯ ಪಾತ್ರದಲ್ಲಿ  ನಟಿಸಿದ್ದರು. ಈ ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ಸಹ ಪಡೆಯಿತು. ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ನಟನೆ ಮತ್ತು ನಿರ್ದೇಶನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಅತ್ಯುತ್ತಮ ನಟನೆಯ ಜೊತೆಗೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಸಿನಿಮಾವನ್ನು ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ಎಂದು ಅಳಿಸಲಾಗದ ನೆನಪಾಗಿ ಉಳಿದಿದ್ದಾರೆ. ಅಲ್ಲದೇ ತಾವೇ ಸಖತ್‌ ಸೂಪರ್‌ ಹಿಟ್‌ ಸಿನಿಮಾಗಳನ್ನು ಸಿನಿರಸಿಕರಿಗೆ ನೀಡಿದ್ದಾರೆ. 

ರಿಷಭ್‌ ಶೆಟ್ಟಿ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಿಷಭ್‌ ಶೆಟ್ಟಿ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿ ನಟಿಸಿರುವ ಮೊದಲ ಸಿನಿಮಾ ಬೆಲ್‌ ಬಾಟಮ್‌. ಬಳಿಕ ಕಾಂತಾರ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದರು. ಈ ಸಿನಿಮಾ ಭಾರತೀಯ ಸಿನಿರಂಗದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಜೊತೆಗೆ ರಿಷಭ್‌ ಅವರು ಫ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News