/kannada/photo-gallery/anjeer-fruit-for-high-blood-sugar-control-249311 ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! 249311

'ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆ... ಒಂಟಿಯಾಗಿರಲು ಸಾಧ್ಯವಿಲ್ಲ'... ಜೈಲು ಅಧಿಕಾರಿಗಳಿಗೆ ದರ್ಶನ್ ದೂರು!

Actor Darshan: ಜಲ್ಸಾ ಜೀವನಕ್ಕೆ ಒಗ್ಗಿಕೊಂಡಿರುವ ನಾಯಕ ದರ್ಶನ್ ಜೈಲಿನಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ.  

Written by - Savita M B | Last Updated : Oct 6, 2024, 09:22 AM IST
  • ಜಲ್ಸಾ ಜೀವನಕ್ಕೆ ಒಗ್ಗಿಕೊಂಡಿರುವ ನಾಯಕ ದರ್ಶನ್‌
  • ದರ್ಶನ್‌ಗೆ ಜೈಲಿನಲ್ಲಿ ಇರಲು ಸಾಧ್ಯವಾಗುತ್ತಿಲ್ಲ
'ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆ... ಒಂಟಿಯಾಗಿರಲು ಸಾಧ್ಯವಿಲ್ಲ'... ಜೈಲು ಅಧಿಕಾರಿಗಳಿಗೆ ದರ್ಶನ್ ದೂರು! title=

Darshan: ಸ್ಯಾಂಡಲ್‌ವುಡ್ ಸ್ಟಾರ್ ಹೀರೋ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಮಾರು 5 ತಿಂಗಳಿನಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಈ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ದರ್ಶನ್ ಅವರನ್ನು ಎ2, ನಟಿ, ಪವಿತ್ರಾ ಗೌಡ ಅವರನ್ನು ಎ1 ಎಂದು ಹೆಸರಿಸಿದ್ದಾರೆ. ಈ ನಡುವೆ ಜಲ್ಸಾ ಜೀವನಕ್ಕೆ ಒಗ್ಗಿಕೊಂಡಿರುವ ನಾಯಕ ದರ್ಶನ್‌ಗೆ ಜೈಲಿನಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ. 

ಕೆಲ ತಿಂಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕರೆತರಲಾಗಿತ್ತು. ಆದರೆ ಇಲ್ಲಿ ದರ್ಶನ್ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.. ಕಳೆದ ಕೆಲವು ದಿನಗಳಿಂದ ಅವರು ಜೈಲಿನಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಎನ್ನಲಾಗಿದ್ದು, ರೇಣುಕಾಸ್ವಾಮಿಯ ಆತ್ಮ ತನ್ನನ್ನು ಕಾಡುತ್ತಿದೆ ಎಂದು ದರ್ಶನ್ ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಮಲಗಿರುವಾಗ ಕನಸಿನಲ್ಲಿ ರೇಣುಕಾಸ್ವಾಮಿಯ ಬಿಂಬ ಕಾಣಿಸಿಕೊಳ್ಳುತ್ತಿದೆ ಎಂದು ನಟ ತಿಳಿಸಿದ್ದಾರೆ... ಇಲ್ಲಿ ಒಂಟಿಯಾಗಿ ಇರಲು ಸಾಧ್ಯವಿಲ್ಲದ ಕಾರಣ ಬೆಂಗಳೂರು ಜೈಲಿಗೆ ವರ್ಗಾಯಿಸುವಂತೆ ಅಧಿಕಾರಿಗಳಲ್ಲಿ ಮೊರೆ ಹೋಗುತ್ತಿದ್ದಾರೆ. ಮಧ್ಯರಾತ್ರಿ ನಿದ್ದೆಯಲ್ಲೂ ದರ್ಶನ್ ಜೋರಾಗಿ ಕಿರುಚುತ್ತಿದ್ದಾರೆ ಎನ್ನುತ್ತಾರೆ ಸಹ ಕೈದಿಗಳು. ಆದರೆ, ಈ ಬಗ್ಗೆ ಜೈಲು ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ-ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?

ಮತ್ತೊಂದೆಡೆ ದರ್ಶನ್ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಇದರಿಂದ ಕೂರಲು, ನಿಲ್ಲಲು ಸಾಧ್ಯವಾಗುತ್ತಿಲ್ಲ. ಮಾತ್ರೆಗಳನ್ನು ನುಂಗಿದರೂ ನೋವು ಕಡಿಮೆಯಾಗುತ್ತಿಲ್ಲವಂತೆ.. ಆದ್ರೆ ದರ್ಶನ್ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕು, ಇಲ್ಲವಾದರೆ ಕಷ್ಟ ಎಂದು ವೈದ್ಯರು ಹೇಳಿದ್ದಾರೆ. ಆದರೆ ದರ್ಶನ್ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯಬೇಕು ಎಂದು ಹಠ ಹಿಡಿದಿದ್ದಾರೆ. ಈ ಸಂಬಂಧ ದರ್ಶನ್ ಹೇಳಿಕೆಯನ್ನು ಜೈಲು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. 

ದರ್ಶನ್ ಒಪ್ಪಿದರೆ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಲು ಸಿದ್ಧತೆ ನಡೆದಿದೆ. ಮತ್ತೊಂದೆಡೆ ದರ್ಶನ್ ಪರ ವಕೀಲರು ಜಾಮೀನಿಗಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾರೆ. ಎಲ್ಲಾ ಸಾಕ್ಷಿಗಳ ಮೇಲೆ ಕಟ್ಟುಕಥೆಯ ಆರೋಪವಿದೆ. ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ದರ್ಶನ್ ಅವರನ್ನು ಬಂಧಿಸುವ ಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ದರ್ಶನ್ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ವಕೀಲರು ಅದನ್ನು ನ್ಯಾಯಾಲಯದ ಮುಂದೆ ಕೊಂಡೊಯ್ಯುವ ಸಾಧ್ಯತೆಯಿದೆ. ಇದರ ಪ್ರಕಾರ ಜಾಮೀನಿಗೆ ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ-ಗೃಹ ಸಾಲವನ್ನು ಕಡಿಮೆ ಸಮಯದಲ್ಲಿ ತೀರಿಸಲು ಇಲ್ಲಿದೆ ಸರಳ ಉಪಾಯ..! ತಕ್ಷಣ ಹೀಗೆ ಮಾಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.