Samantha in Pushpa:'ಪುಷ್ಪ' ಐಟಮ್​ ಸಾಂಗ್​ನಲ್ಲಿ ಸಮಂತಾ ಲುಕ್ ನೋಡಿ ಬೆರಗಾದ ಅಭಿಮಾನಿಗಳು

Samantha in Pushpa item song: 'ಪುಷ್ಪ' ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿರುವ ಸಮಂತಾ ಲುಕ್ ಈಗ ವೈರಲ್ ಆಗಿದೆ. ಇವರ ಲುಕ್ ನೋಡಿಅಭಿಮಾನಿಗಳು ಫಿದಾ ಆಗಿದ್ದಾರೆ.

Edited by - Zee Kannada News Desk | Last Updated : Dec 9, 2021, 02:45 PM IST
  • 'ಪುಷ್ಪ' ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿರುವ ಸಮಂತಾ
  • ಸಮಂತಾ ಲುಕ್ ನೋಡಿ ಬೆರಗಾದ ಅಭಿಮಾನಿಗಳು
Samantha in Pushpa:'ಪುಷ್ಪ' ಐಟಮ್​ ಸಾಂಗ್​ನಲ್ಲಿ ಸಮಂತಾ ಲುಕ್ ನೋಡಿ ಬೆರಗಾದ ಅಭಿಮಾನಿಗಳು title=
ಸಮಂತಾ

ನಟ ಅಲ್ಲು ಅರ್ಜುನ್ (Allu Arjun) ಅಭಿನಯದ, ಸುಕುಮಾರ್ ನಿರ್ದೇಶನದ 'ಪುಷ್ಪ' (Pushpa) ಸಿನಿಮಾ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.  ಇತ್ತೀಚಿಗೆ ಬಿಡುಗಡೆಯಾದ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಾಗಿಸಿದೆ. 

ಅಲ್ಲು ಅರ್ಜುನ್ ಅವರ ರಾ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಈ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿರುವ ಸಮಂತಾ ಲುಕ್ (Samantha in Pushpa item song) ಈಗ ವೈರಲ್ ಆಗಿದೆ. ಇವರ ಲುಕ್ ನೋಡಿಅಭಿಮಾನಿಗಳು ಫಿದಾ ಆಗಿದ್ದಾರೆ.

ನಾಗ ಚೈತನ್ಯ (Naga Chaitanya) ಜೊತೆ ವಿಚ್ಛೇದನದ ನಂತರ ಸಮಂತಾ (Samantha) ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.  'ಪುಷ್ಪ' ಸಿನಿಮಾದ ಐಟಮ್ ಸಾಂಗ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.  ಇದೀಗ ಸಮಂತಾ ಇರುವ ಈ ಹಾಡಿನ ಪೋಸ್ಟರ್ ಬಿಡುಗಡೆಯಾಗಿದೆ.

 

 

ಈ ಫೋಟೋದಲ್ಲಿ ನೀಲಿ ಬಣ್ಣದ ಡ್ರೆಸ್ ತೊಟ್ಟಿರುವ  ಸಮಂತಾ ಆಕೆಯ ಲುಕ್ ನಿಜಕ್ಕೂ ಅಭಿಮಾನಿಗಳ ಮನಸೆಳೆಯುತ್ತಿದೆ. ನಾಳೆ (ಡಿ.10) ರಂದು ಈ ವಿಶೇಷ ಹಾಡನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದನ್ನು ಕೇಳಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 
ಫೋಟೋದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರು ಹೆಜ್ಜೆ ಹಾಕುತ್ತಿರುವ ಹಾಡು ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಖ್ಯಾತ ನಿರ್ದೇಶಕ ಸುಕುಮಾರ್ ಅವರು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಇದನ್ನೂ ಓದಿ: Google Search 2021:ಅಗ್ರಸ್ಥಾನದಲ್ಲಿ 'ಜೈ ಭೀಮ್', ಟ್ರೆಂಡ್ ಸೃಷ್ಟಿಸಿದ್ದ ಸೆಲೆಬ್ರಿಟಿಗಳಿವರು

Trending News