Salman Khan : ಲುಂಗಿ ಧರಿಸಿ ಸುತ್ತಾಡಿದ ಸಲ್ಲು ಭಾಯ್‌! ಸೌತ್​ ಸಿನಿಮಾ ಪ್ರಭಾವವೇ ಎಂದ ನೆಟ್ಟಜನ್‌

Salman Khan : ನಟ ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಕಪ್ಪು ಲುಂಗಿಯಲ್ಲಿ ಕಾಣಿಸಿಕೊಂಡಿದ್ದರು. Instagramನಲ್ಲಿ ಪಾಪರಾಜಿ ಖಾತೆಯೊಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಸಲ್ಮಾನ್‌ ಖಾನ್‌ ಕಪ್ಪು ಬಣ್ಣದ ಲುಂಗಿ ಧರಿಸಿದ್ದಾರೆ. 

Written by - Chetana Devarmani | Last Updated : Dec 1, 2022, 06:53 PM IST
  • ಲುಂಗಿ ಧರಿಸಿ ಸುತ್ತಾಡಿದ ಸಲ್ಲು ಭಾಯ್‌!
  • ಸೌತ್​ ಸಿನಿಮಾ ಪ್ರಭಾವವೇ ಎಂದ ನೆಟ್ಟಜನ್‌
Salman Khan : ಲುಂಗಿ ಧರಿಸಿ ಸುತ್ತಾಡಿದ ಸಲ್ಲು ಭಾಯ್‌! ಸೌತ್​ ಸಿನಿಮಾ ಪ್ರಭಾವವೇ ಎಂದ ನೆಟ್ಟಜನ್‌  title=
ನಟ ಸಲ್ಮಾನ್ ಖಾನ್

Salman Khan : ನಟ ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಕಪ್ಪು ಲುಂಗಿಯಲ್ಲಿ ಕಾಣಿಸಿಕೊಂಡಿದ್ದರು. Instagramನಲ್ಲಿ ಪಾಪರಾಜಿ ಖಾತೆಯೊಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಸಲ್ಮಾನ್‌ ಖಾನ್‌ ಕಪ್ಪು ಬಣ್ಣದ ಲುಂಗಿ ಧರಿಸಿದ್ದಾರೆ. ಈ ವಿಡಿಯೋ ಕ್ಲಿಪ್‌ನಲ್ಲಿ, ಸಲ್ಮಾನ್ ತನ್ನ ತಂಡ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಅನೇಕರು ಈ ವಿಡಿಯೋವನ್ನು ಲೈಕ್‌ ಮಾಡಿದ್ದಾರೆ. ಅಲ್ಲದೇ ಕೆಲವರು ಕಾಮೆಂಟ್‌ ಕೂಡ ಮಾಡಿದ್ದಾರೆ. 

ಇದನ್ನೂ ಓದಿ : ರಾಮ್ ಚರಣ್ ಜೊತೆ ಜಾನ್ವಿ ಕಪೂರ್ ಡೂಯೆಟ್‌? ಟಾಲಿವುಡ್‌ ಸಿನಿಮಾದಲ್ಲಿ ಬಾಲಿವುಡ್‌ ಬೆಡಗಿ!

"ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಕಪ್ಪು ಬಣ್ಣವು ಸೂಟ್‌ ಆಗುತ್ತೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಇದು ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಶೂಟಿಂಗ್‌ಗಾಗಿಯೇ?" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. "ಊರಿನಲ್ಲಿರುವ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌" ಎಂದು ಕೆಲವರು ಹೇಳಿದ್ದಾರೆ. 

 

 

ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ 23 ನೇ IIFA ಪ್ರಶಸ್ತಿ ಸುದ್ದಿಗೋಷ್ಠಿಯಿಂದ ಹಿಂತಿರುಗಿದ ನಂತರ ಸಲ್ಮಾನ್ ಈ ರೀತಿ ಕಾಣಿಸಿಕೊಂಡಿದ್ದಾರೆ. ಈವೆಂಟ್‌ನ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡವು, ಇದರಲ್ಲಿ ನಟ ಫರ್ಹಾನ್ ಅಖ್ತರ್, ಫರಾ ಖಾನ್, ವರುಣ್ ಧವನ್, ಕರಣ್ ಜೋಹರ್, ಸುನಿಧಿ ಚೌಹಾನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರು ಬೂದು ಬಣ್ಣದ ಜಾಕೆಟ್ ಜೊತೆ ಆಲಿವ್ ಹಸಿರು ಶರ್ಟ್ ಧರಿಸಿದ್ದರು. ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಹಾಕಿದ್ದರು.

ಇದನ್ನೂ ಓದಿ : ಕಬ್ಜ ಹಿಂದಿ ಟೀಸರ್ ರಿಲೀಸ್, ಬಾಲಿವುಡ್‌ನಲ್ಲಿ ಮತ್ತೆ ಕನ್ನಡ ಸಿನಿಮಾ ಹವಾ!

ಸಲ್ಮಾನ್ ಪ್ರಸ್ತುತ ರಿಯಾಲಿಟಿ ಶೋ ಬಿಗ್ ಬಾಸ್ 16 ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ ಪೂಜಾ ಹೆಗ್ಡೆ ಜೊತೆಗೆ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಅವರು ಕತ್ರಿನಾ ಕೈಫ್ ಜೊತೆ ಟೈಗರ್ 3 ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 2023 ರ ದೀಪಾವಳಿಯ ಸಂದರ್ಭದಲ್ಲಿ ಥಿಯೇಟರ್‌ಗಳಲ್ಲಿ ಬರಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News