‘ವಿಕ್ರಾಂತ್ ರೋಣ’ಗೆ ಸಲ್ಮಾನ್ ಸಾಥ್ : ಬಾಲಿವುಡ್ ಅಂಗಳದಲ್ಲಿ ಕಿಚ್ಚನ ಹವಾ!

ವಿಕ್ರಾಂತ್ ರೋಣ’ ರಿಲೀಸ್ ಗೆ ರೆಡಿಯಾಗಿದ್ದು, ಬಾಲಿವುಡ್ ಅಂಗಳದಲ್ಲಿ ‘ವಿಕ್ರಾಂತ್ ರೋಣ’ನಿಗೆ ಬಲ ತುಂಬಲು ಖುದ್ದು ನಟ ಸಲ್ಮಾನ್ ಖಾನ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ‌.

Written by - Malathesha M | Last Updated : May 16, 2022, 08:27 PM IST
  • ಕನ್ನಡ ಸಿನಿಮಾಗಳು ಅಂದ್ರೆ ಬಾಲಿವುಡ್ ಬೆಚ್ಚಿ ಬೀಳುತ್ತಿದೆ
  • ರಿಲೀಸ್ ಗೆ ರೆಡಿಯಾಗಿದೆ ‘ವಿಕ್ರಾಂತ್ ರೋಣ’
  • ಹಿಂದ ರಿಲೀಸ್ ಮಾಡುವ ಜವಾಬ್ದಾರಿಯನ್ನ ಸಲ್ಮಾನ್ ಹೊತ್ತಿದ್ದಾರೆ
‘ವಿಕ್ರಾಂತ್ ರೋಣ’ಗೆ ಸಲ್ಮಾನ್ ಸಾಥ್ : ಬಾಲಿವುಡ್ ಅಂಗಳದಲ್ಲಿ ಕಿಚ್ಚನ ಹವಾ! title=

ಬೆಂಗಳೂರು : ಕನ್ನಡ ಸಿನಿಮಾಗಳು ಅಂದ್ರೆ ಬಾಲಿವುಡ್ ಬೆಚ್ಚಿ ಬೀಳುತ್ತಿದೆ. ಅದರಲ್ಲೂ ನಟ ಕಿಚ್ಚ ಸುದೀಪ್ ಅವರ ಜೊತೆ ಭಾಷೆ ವಾರ್ ನಡೆಸಿದ್ದ ಬಾಲಿವುಡ್ ನಟ ಅಜಯ್ ದೇವಗನ್, ಈ ಜ್ವಾಲೆ ಮತ್ತಷ್ಟು ಧಗಧಗಿಸುವಂತೆ ಮಾಡಿದ್ದರು. ನಟ ಕಿಚ್ಚ ಸುದೀಪ್ ಅವರ ಪರ ಕೋಟ್ಯಂತರ ಭಾರತೀಯರು ಧ್ವನಿಗೂಡಿಸಿದ್ದಾರೆ. ಈ ಹೊತ್ತಲ್ಲೇ ‘ವಿಕ್ರಾಂತ್ ರೋಣ’ ರಿಲೀಸ್ ಗೆ ರೆಡಿಯಾಗಿದ್ದು, ಬಾಲಿವುಡ್ ಅಂಗಳದಲ್ಲಿ ‘ವಿಕ್ರಾಂತ್ ರೋಣ’ನಿಗೆ ಬಲ ತುಂಬಲು ಖುದ್ದು ನಟ ಸಲ್ಮಾನ್ ಖಾನ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ‌.

ನಟ ಸಲ್ಮಾನ್ ಖಾನ್ ಹಾಗೂ ಕನ್ನಡಿಗ ಕಿಚ್ಚ ಸುದೀಪ್ ಅವರ ಬಾಂಧವ್ಯ ಎಷ್ಟು ಗಾಢವಾಗಿದೆ ಅನ್ನೋದು ಇಡೀ ಜಗತ್ತಿಗೇ ಗೊತ್ತು. ಹೀಗೆ ಇವರಿಬ್ಬರ ಸ್ನೇಹ ಇದೀಗ ಮತ್ತಷ್ಟು ಗಾಢವಾಗಿದೆ. ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್  ರೋಣ’ ಸಿನಿಮಾಗೆ ಸಲ್ಮಾನ್ ಸಾಥ್ ನೀಡಿದ್ದಾರೆ. ಹಿಂದಿಯಲ್ಲಿ ‘ವಿಕ್ರಾಂತ್​ ರೋಣ’ ರಿಲೀಸ್ ಮಾಡುವ ಜವಾಬ್ದಾರಿಯನ್ನ ನಟ ಸಲ್ಮಾನ್ ಖಾನ್ ಅವರೇ ಹೊತ್ತಿದ್ದಾರೆ. ಈ ಮೂಲಕ ಹೊಸ ಸಂಚಲನ ಸೃಷ್ಟಿಯಾಗಿದ್ದು , ‘ವಿಕ್ರಾಂತ್ ರೋಣ’ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ.

ಇದನ್ನೂ ಓದಿ : ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..!

ಸಲ್ಮಾನ್-ಸುದೀಪ್ ಸ್ನೇಹ ಸಂಬಂಧ

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಅಭಿನಯ ಚಕ್ರವರ್ತಿ ನಟ ಸುದೀಪ್ ಅವರ ನಡುವೆ ಗಾಢವಾದ ಸ್ನೇಹ ಬಾಂಧವ್ಯವಿದೆ. ಅದರಲ್ಲೂ ‘ದಬಾಂಗ್ 3’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದು, ಈ ಜೋಡಿ ಜಗತ್ತಿ‌ನ ಬೆಳ್ಳಿತೆರೆ ಮೇಲೆ ದೊಡ್ಡ ಕಮಾಲ್ ಮಾಡಿತ್ತು. ಇದೀಗ ನಟ ಸುದೀಪ್ ಅವರ ಸಿನಿಮಾಗೆ ಸಲ್ಮಾನ್ ಸಾಥ್ ನೀಡುತ್ತಿದ್ದು, ಬಾಲಿವುಡ್ ಇಂಡಸ್ಟ್ರಿಯನ್ನೇ ಶೇಕ್ ಮಾಡಲು ಕನ್ನಡ ಸಿನಿಮಾ ‘ವಿಕ್ರಾಂತ್ ರೋಣ’ ಸಜ್ಜಾಗಿದೆ.

ಅಂದಹಾಗೆ ಈ ಹಿಂದೆ 'ವಿಕ್ರಾಂತ್‌ ರೋಣ' ಸಿನಿಮಾದ  ಟೀಸರ್ ಅನ್ನ ವಿವಿಧ ಭಾಷೆಗಳಲ್ಲಿ ರಿಲೀಸ್‌ ಮಾಡಲಾಗಿತ್ತು. ಒಂದು ಕಡೆ ತೆಲುಗು ಟೀಸರ್‌ ರಿಲೀಸ್‌ಗೆ ಟಾಲಿವುಡ್ ‘ಮೆಗಾಸ್ಟಾರ್’ ಚಿರಂಜೀವಿ ಸಾಥ್‌ ನೀಡಿದ್ದರು, ಹಾಗೇ ಮಲಯಾಳಂ ಟೀಸರ್‌ಗೆ ನಟ ಮೋಹನ್ ಲಾಲ್, ತಮಿಳು ಭಾಷೆಯಲ್ಲಿ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ಗೆ ನಟ ಸಿಂಬು ಕೈಜೋಡಿಸಿದ್ದರು. ಇದರ ಜೊತೆಗೆ ಡಬಲ್ ಧಮಾಖಾ ಎಂಬಂತೆ 'ವಿಕ್ರಾಂತ್‌ ರೋಣ' ಹಿಂದಿ ವರ್ಷನ್ ಟೀಸರ್‌ ಅನ್ನ ನಟ ಸಲ್ಮಾನ್‌ ಖಾನ್‌ ರಿಲೀಸ್‌ ಮಾಡಿದ್ದರು. ಇದೀಗ ಹಿಂದಿಯಲ್ಲಿ ‘ವಿಕ್ರಾಂತ್​ ರೋಣ’ ಸಿನಿಮಾವನ್ನ ರಿಲೀಸ್ ಮಾಡುವ ಹೊಣೆಯನ್ನು ಖುದ್ದು ಸಲ್ಮಾನ್ ಖಾನ್ ಅವರ ಸಂಸ್ಥೆಯೇ ವಹಿಸಿಕೊಂಡಿದೆ.

ಇದನ್ನೂ ಓದಿ : ನೀನಾಸಂ ಸತೀಶ್ ಅಭಿನಯದ "ಅಶೋಕ ಬ್ಲೇಡ್​"... ಇದರ ಕಥೆ ಏನು ಗೊತ್ತಾ!?

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News