"ನನಗೆ ಒಂದೇ ಹುಡುಗಿಯ ಜೊತೆ ಬೋರ್‌ ಆಗುತ್ತೆ".. ಸಲ್ಮಾನ್ ಖಾನ್ ರಹಸ್ಯ ಬಯಲು ಮಾಡಿದ ನಟಿ

Bhagyashree on Salman Khan: 'ಮೈನೆ ಪ್ಯಾರ್ ಕಿಯಾ' ಚಿತ್ರ 1989 ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬ್ಲಾಕ್ ಬಸ್ಟರ್ ಆಯಿತು ಮತ್ತು ಇಬ್ಬರೂ ಕೂಡ ರಾತ್ರೋರಾತ್ರಿ ಸ್ಟಾರ್ ಆದರು.  

Written by - Chetana Devarmani | Last Updated : Feb 24, 2023, 01:46 PM IST
  • "ನನಗೆ ಒಂದೇ ಹುಡುಗಿಯ ಜೊತೆ ಬೋರ್‌ ಆಗುತ್ತೆ"
  • ಸಲ್ಮಾನ್ ಖಾನ್ ರಹಸ್ಯ ಬಯಲು ಮಾಡಿದ ನಟಿ
  • ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ ಬೆಡಗಿ
"ನನಗೆ ಒಂದೇ ಹುಡುಗಿಯ ಜೊತೆ ಬೋರ್‌ ಆಗುತ್ತೆ".. ಸಲ್ಮಾನ್ ಖಾನ್ ರಹಸ್ಯ ಬಯಲು ಮಾಡಿದ ನಟಿ title=
Salman Khan

Bhagyashree on Salman Khan: 'ಮೈನೆ ಪ್ಯಾರ್ ಕಿಯಾ' ಚಿತ್ರ 1989 ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬ್ಲಾಕ್ ಬಸ್ಟರ್ ಆಯಿತು ಮತ್ತು ಇಬ್ಬರೂ ಕೂಡ ರಾತ್ರೋರಾತ್ರಿ ಸ್ಟಾರ್ ಆದರು. ಆದರೆ, ಆರಂಭದಲ್ಲಿ ಭಾಗ್ಯಶ್ರೀ ಅವರು ಸಲ್ಮಾನ್ ಖಾನ್ ಅವರನ್ನು ಒಳ್ಳೆಯ ವ್ಯಕ್ತಿ ಎಂದು ಪರಿಗಣಿಸಲಿಲ್ಲ. ವಾಸ್ತವವಾಗಿ, ಸಲ್ಮಾನ್ ಭಾಗ್ಯಶ್ರೀಗೆ ತಾನು ಒಳ್ಳೆಯ ಹುಡುಗನಲ್ಲ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಈ ವಿಷಯವನ್ನು ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ : Kiccha Sudeep: ಅಭಿಮಾನಿಗಳಿಗೆ ಬಂತು ಕಿಚ್ಚನ ವಿಶೇಷ ಕರೆಯೋಲೆ: ಏನದು ಗೊತ್ತಾ..!

ಸಲ್ಮಾನ್ ಯಾವುದೇ ಹುಡುಗಿಯ ಹಿಂದೆ ಹೋಗಲ್ಲ, ಆದರೆ ಹುಡುಗಿಯರು ಮಾತ್ರ ಅವರ ಹಿಂದೆ ಬೀಳುತ್ತಾರೆ ಎಂದು ಭಾಗ್ಯಶ್ರೀ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. 'ಮೈನೇ ಪ್ಯಾರ್ ಕಿಯಾ' ಚಿತ್ರದ ಶೂಟಿಂಗ್ ಅನ್ನು ನೆನಪಿಸಿಕೊಂಡ ನಟಿ, ಮೈನೇ ಪ್ಯಾರ್ ಕಿಯಾ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ನನಗೆ ಒಳ್ಳೆಯ ಹುಡುಗಿಯರು ಪ್ರೀತಿಸಲು ಬಯಸುವುದಿಲ್ಲ ಎಂದು ಹೇಳಿದ್ದರು. ಒಂದು ಹುಡುಗಿಯ ಜೊತೆ ಹೆಚ್ಚು ಕಾಲ ಒಟ್ಟಿಗೆ ಇರಲು ಸಾಧ್ಯವಿಲ್ಲ. ಏಕೆಂದರೆ ತನಗೆ ಸುಲಭವಾಗಿ ಬೇಸರವಾಗುತ್ತದೆ ಎಂದು ಸಲ್ಮಾನ್ ಹೇಳಿದ್ದರು ಎಂದು ಭಾಗ್ಯಶ್ರೀ ಹೇಳಿದ್ದಾರೆ.   

 

 

ಭಾಗ್ಯಶ್ರೀ ಅದೇ ಸಂದರ್ಶನದಲ್ಲಿ, ಜನಪ್ರಿಯ ಛಾಯಾಗ್ರಾಹಕರೊಬ್ಬರು ನನ್ನ ಮತ್ತು ಸಲ್ಮಾನ್ ಖಾನ್ ಅವರ ಕೆಲವು ಸಂವೇದನಾಶೀಲ ಚಿತ್ರಗಳನ್ನು ತೆಗೆಯಲು ಬಯಸಿದ್ದರು. ಅವರು ಇದ್ದಕ್ಕಿದ್ದಂತೆ ಸಲ್ಮಾನ್ ಅವರನ್ನು ಕಿಸ್ ಮಾಡಲು ಕೇಳಿದರು, ಆದರೆ ಅದನ್ನು ಕೇಳಿದ ಸಲ್ಮಾನ್ ನಿರಾಕರಿಸಿದರು. ಆಗ ನಾವು ಇಂಡಸ್ಟ್ರಿಗೆ ಹೊಸಬರು ಹಾಗಾಗಿ ಅವರು ಏನು ಹೇಳಿದರೂ ಮಾಡುತ್ತೇವೆ ಅನ್ನಿಸಿತು. ಆ ದಿನದಿಂದ ಸಲ್ಮಾನ್ ಬಗ್ಗೆ ನನ್ನ ಗೌರವ ಇನ್ನಷ್ಟು ಹೆಚ್ಚಿತ್ತು ಎಂದು ಸಲ್ಮಾನ್ ಖಾನ್ ಬಗ್ಗೆ ಹೇಳಿದ್ದಾರೆ. 

ಇದನ್ನೂ ಓದಿ : Flora Saini: "ನನ್ನ ಮರ್ಮಾಂಗಕ್ಕೆ ಗುದ್ದುತ್ತಿದ್ದ" ಪ್ರಸಿದ್ಧ ನಿರ್ಮಾಪಕನ ವಿಕೃತ ಮನಸ್ಥಿತಿ ಬಿಚ್ಚಿಟ್ಟ ನಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News