ಬಿಡುಗಡೆ ದಿನವೇ ಸಲ್ಮಾನ್‌ ʼಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್‌..!

Salman Khan : ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರ ತಮಿಳು ರಾಕರ್ಸ್, ಟೆಲಿಗ್ರಾಮ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲೀಕ್‌ ಆಗಿದೆ ಎಂದ ಸುದ್ದಿ ಕೇಳಿ ಬಂದಿದೆ. ಈ ಸಿನಿಮಾವನ್ನು ಜೀ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಸಲ್ಮಾನ್‌ ಖಾನ್‌ಗೆ ಜೊತೆಯಾಗಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. 

Written by - Krishna N K | Last Updated : Apr 21, 2023, 06:54 PM IST
  • ಬಿಡುಗಡೆ ದಿನವೇ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಆನ್‌ಲೈನ್‌ನಲ್ಲಿ ಲೀಕ್‌.
  • ಸಲ್ಮಾನ್‌ ಖಾನ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಕಿಸಿ ಕಾ ಭಾಯಿ ಕಿಸಿ ಕಿ ಜಾನ್.
  • ಪೂಜಾ ಹೆಗ್ಡೆ ಮತ್ತು ಟಾಲಿವುಡ್‌ ನಟ ವೆಂಕಟೇಶ್‌ ದಗ್ಗುಬಾಟಿ ಈ ಚಿತ್ರದಲ್ಲಿದ್ದಾರೆ.
ಬಿಡುಗಡೆ ದಿನವೇ ಸಲ್ಮಾನ್‌ ʼಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್‌..! title=

Kisi Ka Bhai Kisi Ki Jaan : ಬಾಲಿವುಡ್‌ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಹಾಗು ಪೂಜಾ ಹೆಗ್ಡೆ ನಟನೆಯ ʼಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ ಬಿಡುಗಡೆಯಾದ ಮೊದಲ ದಿನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಸಲ್ಲು ಚಿತ್ರ ಪೈರಸಿ ಭೂತಕ್ಕೆ ಬಲಿಪಶುವಾಗಿದ್ದು, ಇದು ಸಿನಿಮಾ ಬಾಕ್ಸ್‌ ಆಫೀಸ್‌ ಸಿನಿಮಾದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರ ತಮಿಳು ರಾಕರ್ಸ್, ಟೆಲಿಗ್ರಾಮ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲೀಕ್‌ ಆಗಿದೆ ಎಂದ ಸುದ್ದಿ ಕೇಳಿ ಬಂದಿದೆ. ಈ ಸಿನಿಮಾವನ್ನು ಜೀ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಹೆಚ್ಚಾಗಿ ಸಿನಿಮಾ ಬಿಡುಗಡೆಯಾದ ಕೆಲವು ದಿನಗಳ ನಂತರ ಸೋರಿಕೆಯಾಗುವುದನ್ನು ನಾವು ನೋಡಿದ್ದೇವೆ. ಅದ್ರೆ, ರಿಲೀಸ್‌ ಆದ ಮೊದಲ ದಿನವೇ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ಲೀಕ್‌ ಆಗಿದೆ. 

ಇದನ್ನೂ ಓದಿ: ಹನಿಗೆ ʼಬಾಯ್ ಫ್ರೆಂಡ್ʼ ಬೇಕು, ಆದರೆ ಮದುವೆ ಬೇಡ್ವಂತೆ..!

ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಅನ್ನು ವೀರಂ ಚಿತ್ರದ ರಿಮೇಕ್‌ ಎನ್ನಲಾಗುತ್ತಿದೆ. ಚಿತ್ರದಲ್ಲಿ, ಸಲ್ಮಾನ್ ಖಾನ್ ತನ್ನ ಸಹೋದರರೊಂದಿಗೆ ಉತ್ತರದಲ್ಲಿ ವಾಸಿಸುವ ಒಬ್ಬ ರೌಡಿಯಾಗಿರುತ್ತಾನೆ. ಆದ್ರೆ, ಒಳ್ಳೆಯ ವಿಚಾರಕ್ಕೆ ಹೊಡೆದಾಡುತ್ತಿರುತ್ತಾನೆ. ಆತನ ಮನೆಯವರು ಆತನಿಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿರುತ್ತಾರೆ. ಅಂತಿಮವಾಗಿ ಒಂದು ಹುಡುಗಿಯನ್ನು ನೋಡಿ ಒಪ್ಪಿ, ಮದುವೆ ಮಾಡಲು ನಿರ್ಧರಿಸಿರುತ್ತಾರೆ. ಆದರೆ ವಿಲನ್ ಎಂಟ್ರಿಯಿಂದ ಸಿನಿಮಾ ತಿರುವು ಪಡೆದುಕೊಳ್ಳುತ್ತದೆ.

ಚಿತ್ರದಲ್ಲಿರುವ ಬಿಲ್ಲಿ ಬಿಲ್ಲಿ ಮತ್ತು ಯೆಂಟಮ್ಮ ಹಾಡುಗಳು ಈಗಾಗಲೇ ಸಖತ್‌ ಹಿಟ್‌ ಆಗಿವೆ. ಸೋಷಿಯಲ್‌ ಮೀಡಿಯಾದಲ್ಲಿ ಸಲ್ಲು ಅಭಿಮಾನಿಗಳು ರೀಲ್ಸ್‌ ವಿಡಿಯೋ ಮಾಡಿ ಶೇರ್‌ ಮಾಡುತ್ತಿದ್ದಾರೆ. ಆದ್ರೆ, ಬಿಡುಗಡೆಯಾದ ಮೊದಲ ದಿನವೇ ಪೈರಸಿ ಭೂತಕ್ಕೆ ಸಿನಿಮಾ ಬಲಿಯಾಗಿದ್ದು, ಬಹುತೇಕ ಇದು ಚಿತ್ರದ ಕಲೇಕ್ಷನ್‌ ಮೇಲೆ ಪರಿಣಾಮ ಬೀರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News