ಮತ್ತೆ ಮೋಡಿ ಮಾಡಲಿದೆ ಸಲ್ಮಾನ್ ಕತ್ರಿನಾ ಜೋಡಿ : ಮುಂದಿನ ವರ್ಷ ಟೈಗರ್ 3 ತೆರೆಗೆ

ಬಾಲಿವುಡ್ ಸೂಪರ್ ಹಿಟ್ ಜೋಡಿ ಸಲ್ಮಾನ್ ಖಾನ್ ಕತ್ರಿನಾ ಅಭಿನಯದ ಟೈಗರ್ 3 ಮುಂದಿನ ವರ್ಷ ತೆರೆಕಾಣಲಿದೆ.

Last Updated : Dec 23, 2020, 01:37 PM IST
  • 2021ರಲ್ಲಿ ಟೈಗರ್ 3 ತೆರೆಗೆ
  • ಈಗಾಗಲೇ ಆರಂಭವಾಗಿರುವ ಚಿತ್ರ ನಿರ್ಮಾಣ ಕಾರ್ಯ
  • ಸಲ್ಮಾನ್ ಕತ್ರಿನಾ ಜೋಡಿಯ 9ನೇ ಚಿತ್ರವಾಗಲಿದೆ ಟೈಗರ್ 3
ಮತ್ತೆ ಮೋಡಿ ಮಾಡಲಿದೆ ಸಲ್ಮಾನ್ ಕತ್ರಿನಾ ಜೋಡಿ : ಮುಂದಿನ ವರ್ಷ ಟೈಗರ್ 3 ತೆರೆಗೆ title=
file photoe

ನವದೆಹಲಿ : ಸಲ್ಮಾನ್ ಖಾನ್ ಕತ್ರಿನಾ ಕೈಫ್ ಬಾಲಿವುಡ್ ನ ಸೂಪರ್ ಹಿಟ್ ಜೋಡಿಗಳ್ಲಲಿ ಒಂದು. ಈ ಜೋಡಿ ಕಳೆದ ಕೆಲ ವರ್ಷಗಳಿಂದ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಈ ಜೋಡಿಯನ್ನು ಪರದೆ ಮೇಲೆ ನೋಡ ಬಯಸುವ ಅಭಿಮಾನಿಗಳಿಗೇನೂ ಕೊರತೆಯಿಲ್ಲ. ಇದೀಗ ಸಲ್ಮಾನ್ ಕತ್ರಿನಾ ಅಭಿಮಾನಿಗಳಿಗೆ  ಇಲ್ಲಿದೆ ಸಿಹಿ ಸುದ್ದಿ.

ಇದನ್ನೂ ಓದಿ:VIDEO: ರಿಲೀಸ್ ಆಗುತ್ತಲೇ ಇಂಟರ್‌ನೆಟ್‌ನಲ್ಲಿ ಹವಾ ಸೃಷ್ಟಿಸಿದೆ ಸಲ್ಮಾನ್ ಖಾನ್ ಅವರ ಈ ಗೀತೆ

2012ರಲ್ಲಿ ಬಿಡುಗಡೆಯಾದ ಏಕ್ ತಾ ಟೈಗರ್, (ek tha tiger) 2017ರಲ್ಲಿ ತೆರೆ ಕಂಡ ಟೈಗರ್ ಜಿಂದಾ ಹೈ (tiger zinda hai) ಬಾಲಿವುಡ್ ನಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಪ್ರೇಕ್ಷಕರ ಬಹು ನಿರೀಕ್ಷೆಯ ಟೈಗರ್ 3 (tiger 3) ಚಿತ್ರ ಶೀಘ್ರದಲ್ಲೇ  ಪರದೆ ಮೇಲೆ ಮೂಡಿ ಬರಲಿದೆ. ಮೂಲಗಳ ಪ್ರಕಾರ ಏಕ್ ತಾ ಟೈಗರ್ 3 ಸಿನೆಮಾದ (cinema) ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಅಲ್ಲದೆ ಚಿತ್ರೀಕರಣದ ದಿನಾಂಕವೂ ನಿಗದಿಯಾಗಿದೆ. 2021ರಲ್ಲಿ ಚಿತ್ರ ತೆರೆಕಾಣುವ ನಿರೀಕ್ಷೆಯಿದೆ.

ಇದನ್ನೂ ಓದಿ:ಲಾಕ್ ಡೌನ್ ಸಮಯದಲ್ಲಿ ಶೂಟ್ ಮಾಡಿದ್ದ ಸಲ್ಮಾನ್ ಖಾನ್ 'ತೇರೆ ಬಿನಾ' ಟೀಸರ್' ಬಿಡುಗಡೆ

ಟೈಗರ್ 3 ಸಲ್ಮಾನ್ ಖಾನ್ (salman khan) ಕತ್ರಿನಾ ಕೈಫ್ (katreena kaif) ಜೋಡಿಯ 9ನೇ ಚಿತ್ರವಾಗಲಿದೆ. ಈ ಚಿತ್ರವನ್ನು ಕೂಡಾ ಅಲಿ ಅಬ್ಬಾಸ್ ಜಫರ್ (ali abbas zafar) ನಿರ್ದೇಶಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ Android Link - https://bit.ly/3hDyh4G iOS Link - https://apple.co/3loQYe ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News