ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸಲಾರ್‌ ವಿಲನ್‌ : ಅಕ್ಕಿ, ಟೈಗರ್ ಜೊತೆ ಪೃಥ್ವಿರಾಜ್‌ ನಟನೆ

ಮಾಲಿವುಡ್‌ ಸ್ಟಾರ್‌ ನಟ ಪೃಥ್ವಿರಾಜ್ ಸುಕುಮಾರ್ ಅವರು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರಭಾಸ್‌ ನಟನೆಯ ಸಲಾರ್‌ನಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿರುವ ಪೃಥ್ವಿರಾಜ್‌ ಸದ್ಯ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದು, ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ʼಬಡೆ ಮಿಯಾ ಚೋಟೆ ಮಿಯಾʼ ಚಿತ್ರದಲ್ಲಿ ವಿಲನ್ ಆಗಿ ನಟಿಸಲಿದ್ದಾರೆ.

Written by - Krishna N K | Last Updated : Dec 8, 2022, 11:13 AM IST
  • ಪ್ರಭಾಸ್‌ ನಟನೆಯ ಸಲಾರ್‌ನಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿರುವ ಪೃಥ್ವಿರಾಜ್‌ ಸದ್ಯ ಬಾಲಿವುಡ್‌ನಲ್ಲಿ ಮಿಂಚಲು ರೆಡಿ
  • ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ʼಬಡೆ ಮಿಯಾ ಚೋಟೆ ಮಿಯಾʼ ಚಿತ್ರದಲ್ಲಿ ಪೃಥ್ವಿ ವಿಲನ್
  • ಅಲಿ ಅಬ್ಬಾಸ್ ಜಾಫರ್ ಈ ಮೂರು ಸ್ಟಾರ್‌ಗಳಿಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ
ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸಲಾರ್‌ ವಿಲನ್‌ : ಅಕ್ಕಿ, ಟೈಗರ್ ಜೊತೆ ಪೃಥ್ವಿರಾಜ್‌ ನಟನೆ title=

BadeMiyanChoteMiyan : ಮಾಲಿವುಡ್‌ ಸ್ಟಾರ್‌ ನಟ ಪೃಥ್ವಿರಾಜ್ ಸುಕುಮಾರ್ ಅವರು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರಭಾಸ್‌ ನಟನೆಯ ಸಲಾರ್‌ನಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿರುವ ಪೃಥ್ವಿರಾಜ್‌ ಸದ್ಯ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದು, ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ʼಬಡೆ ಮಿಯಾ ಚೋಟೆ ಮಿಯಾʼ ಚಿತ್ರದಲ್ಲಿ ವಿಲನ್ ಆಗಿ ನಟಿಸಲಿದ್ದಾರೆ.

ಮಲಯಾಳಂ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಪೃಥ್ವಿರಾಜ್‌ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇಷ್ಟು ದಿನ ಹೀರೋ ಪಾತ್ರದಲ್ಲಿ ಮಿಂಚುತ್ತಿದ್ದ ನಟ, ನಿರ್ದೇಶಕ ಇದೀಗ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಸೌತ್‌ ಸಿನಿಮಾರಂಗದಲ್ಲಿ ಉತ್ತಮ ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಸಿನಿಮಾ ನಿರ್ದೇಶನ ಅಷ್ಟೇ ಅಲ್ಲದೆ, ಸಿನಿಮಾ ನಿರ್ಮಾಣದ ಜೊತೆ ಸಿನಿಮಾ ಹಂಚಿಕೆಯಲ್ಲೂ ಸಹ ಪೃಥ್ವಿರಾಜ್‌ ಮುಂದೆ ಇದ್ದಾರೆ. 

ಇದನ್ನೂ ಓದಿ: ನಟಿಯ ಕಾಲು ನೆಕ್ಕಿದ RGV : ಭಾರತೀಯ ಸಿನಿರಂಗದ ಅದ್ಭುತ ನಿರ್ದೇಶಕ ಹಿಗ್ಯಾಕೆ ಮಾಡಿದ್ರು..!

ಇದೀಗ ಬಾಲಿವುಡ್‌ ಸ್ಟಾರ್‌ ನಟ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ʼಬಡೆ ಮಿಯಾ ಚೋಟೆ ಮಿಯಾʼ ಚಿತ್ರದಲ್ಲಿ ಪೃಥ್ವಿರಾಜ್‌ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ಪೃಥ್ವಿರಾಜ್ ನ್ಯೂ ಲುಕ್‌ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ಬಡೆ ಮಿಯಾ ಚೋಟೆ ಮೀಯಾ ಸಿನಿಮಾದಲ್ಲಿ ಪೃಥ್ವಿರಾಜ್ ʼಕಬೀರʼ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಡಿಸೆಂಬರ್ 2023 ರಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ. 'ಗೂಂಡೆ', 'ಸುಲ್ತಾನ್', 'ಏಕ್ ಥಾ ಟೈಗರ್' ಮುಂತಾದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಲಿ ಅಬ್ಬಾಸ್ ಜಾಫರ್ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. 1998 ರಲ್ಲಿ ಅಮಿತಾಬ್ ಬಚ್ಚನ್ ಮತ್ತು ಗೋವಿಂದ ಒಟ್ಟಿಗೆ ಬಡೆ ಮಿಯಾ ಚೋಟೆ ಮಿಯಾ ಎಂಬ ಶೀರ್ಷಿಕೆಯೊಂದಿಗೆ ಸಿನಿಮಾವನ್ನು ಮಾಡಿದರು. ಇನ್ನು ಈ ಸಿನಿಮಾ ಹಳೆ ಬಡೆ ಮಿಯಾ ಚೋಟೆ ಮಿಯಾದ ಭಾಗ 2 ಆಗಲಿದೆಯಾ ಅಥವಾ ರೀಮೇಕ್‌ ಎಂಬುವುದರ ಬಗ್ಗೆ ಚಿತ್ರತಂಡ ಸ್ಪಷ್ಟಪಡಿಸಬೇಕಿದೆ.

ಇದನ್ನೂ ಓದಿ: ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ನಾಳೆ ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ 'ವಿಜಯಾನಂದ'

ಇನ್ನು ನಟ ಪೃಥ್ವಿರಾಜ್ ಸುಕುಮಾರನ್ ಅಭಿನಯದ ʼಕಡುವಾʼ  ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಿ ಉತ್ತಮ ಯಶಸ್ಸು ಕಂಡಿದೆ. ಒಂದೆಡೆ ಹೀರೋ ಆಗಿ ಸಿನಿಮಾ ಮಾಡುತ್ತಿರುವ ಪೃಥ್ವಿರಾಜ್ ಪರಭಾಷೆ ಸಿನಿಮಾಗಳಲ್ಲಿ ವಿಲನ್‌ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಪ್ರಭಾಸ್ ಅಭಿನಯದ 'ಸಾಲಾರ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯ ಪೃಥ್ವಿರಾಜ್ ಬಾಲಿವುಡ್‌ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News