ದೇವರ ಸಿನಿಮಾದಲ್ಲಿ 'ಭೈರ' ಪಾತ್ರದಲ್ಲಿ ಸೈಫ್‌ ಅಲಿ ಖಾನ್‌, ಲುಕ್‌ ಕಂಡು ಬೆರಗಾದ ಫ್ಯಾನ್ಸ್‌

Devara Movie Saif Ali Khan: ದಕ್ಷಿಣದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ದೇವರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ. ಇದರಲ್ಲಿ ಸೈಫ್ ಅಲಿ ಖಾನ್ ಕೂಡ ಇದ್ದಾರೆ.   

Written by - Chetana Devarmani | Last Updated : Aug 16, 2023, 06:02 PM IST
  • ದೇವರ ಸಿನಿಮಾದಲ್ಲಿ ಸೈಫ್‌ ಅಲಿ ಖಾನ್‌
  • ದೇವರ ಸಿನಿಮಾದ ಸೈಫ್‌ ಅಲಿ ಖಾನ್‌ ಲುಕ್‌ ರಿವೀಲ್‌
  • ದೇವರ ಸಿನಿಮಾದಲ್ಲಿ 'ಭೈರ' ಪಾತ್ರದಲ್ಲಿ ಸೈಫ್‌ ಅಲಿ ಖಾನ್‌
ದೇವರ ಸಿನಿಮಾದಲ್ಲಿ 'ಭೈರ' ಪಾತ್ರದಲ್ಲಿ ಸೈಫ್‌ ಅಲಿ ಖಾನ್‌, ಲುಕ್‌ ಕಂಡು ಬೆರಗಾದ ಫ್ಯಾನ್ಸ್‌   title=

Devara Movie : ಸೈಫ್ ಅಲಿ ಖಾನ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ವಿಶೇಷ ದಿನದಂದು ಜೂನಿಯರ್ ಎನ್‌ಟಿಆರ್ ಅವರು ದೇವರ ಚಿತ್ರದ ಫಸ್ಟ್ ಲುಕ್ ಅನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದೇವರ ಚಿತ್ರತಂಡ ಸೈಫ್ ಅಲಿ ಖಾನ್‌ ಅವರ ನೋಟವನ್ನು ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ: ಜೈಲರ್‌ ಹೊಸ ದಾಖಲೆ, ಗಲ್ಲಾಪೆಟ್ಟಿಗೆಯಲ್ಲಿ ತಲೈವಾ ಕಮಾಲ್‌! ಒಟ್ಟು ಕಲೆಕ್ಷನ್‌ ಎಷ್ಟು ಕೋಟಿ?

ಉದ್ದ ಕೂದಲು, ಇಂಟೆನ್ಸ್ ಲುಕ್... ಇದರೊಂದಿಗೆ ಪಾತ್ರದ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಚಿತ್ರದಲ್ಲಿ ಅವರು ಭೈರ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಫಸ್ಟ್ ಲುಕ್ ತುಂಬಾ ಸ್ಟ್ರಾಂಗ್ ಆಗಿದೆ. ಆದರೂ ಚಿತ್ರದ ಕಥೆ ಏನಾಗಲಿದೆ ಎಂಬ ಬಗ್ಗೆ ಸಾಕಷ್ಟು ಸಸ್ಪೆನ್ಸ್ ಇದೆ. ನಟರ ಫಸ್ಟ್ ಲುಕ್ ಬಿಟ್ಟರೆ ಬೇರೇನೂ ರಿವೀಲ್ ಆಗಿಲ್ಲ. ಅಂದಹಾಗೆ ಜಾನ್ವಿ ಕಪೂರ್ ಕೂಡ ಈ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

 

 

ಮತ್ತೊಂದೆಡೆ ಸೈಫ್ ಅಲಿ ಖಾನ್ ಕಳೆದ ಕೆಲವು ವರ್ಷಗಳಿಂದ ತನ್ನ ಪಾತ್ರಗಳಿಂದಾಗಿ ಜನರ ಮನಸೆಳೆದಿದ್ದಾರೆ. ಸೈಫ್ ಅಲಿ ಖಾನ್‌ ಏನೇ ಮಾಡಿದರೂ ಅದರಲ್ಲಿ ಮಿಂಚುತ್ತಾರೆ. ಸೈಫ್ ಯಾವಾಗಲೂ ಪ್ರತಿ ಪಾತ್ರದಿಂದ ಹೃದಯವನ್ನು ಗೆದ್ದಿದ್ದಾರೆ. ದೇವರ ಮುಂದಿನ ವರ್ಷ ಬಿಡುಗಡೆಯಾಗಬಹುದು. ಜಾನ್ವಿ-ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. 

ಇದನ್ನೂ ಓದಿ: ಸಮಂತಾ ನನ್ನ ಕ್ರಷ್‌ ಎಂದ ರೌಡಿಬಾಯ್‌; ಹಾಗಿದ್ರೆ ನ್ಯಾಷನಲ್‌ ಕ್ರಷ್ ಕಥೆ ಏನು ಎಂದ ನೆಟಿಜನ್ಸ್‌!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News