Sai Pallavi: ನ್ಯಾಚುರಲ್‌ ಬ್ಯೂಟಿ ಸಿನಿಮಾ ಮಾಡಲು ಹಾಕುವ ಷರತ್ತುಗಳೇನು ಗೊತ್ತಾ?

Sai Pallavi: ಸಾಯಿ ಪಲ್ಲವಿ ಬಹುದಿನಗಳ ನಂತರ ಮತ್ತೊಂದು ತೆಲುಗು ಚಿತ್ರದ ಮೂಲಕ ಸದ್ದು ಮಾಡಲಿದ್ದಾರೆ. ಆದರೆ ಇದೀಗ ಆಕೆ ಸಿನಿಮಾ ಮಾಡುವಾಗ ಹಾಕುವ ಕಂಡೀಷನ್ಸ್‌ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..   

Written by - Savita M B | Last Updated : Dec 10, 2023, 11:42 AM IST
  • ಸಾಯಿ ಪಲ್ಲವಿ ತೆಲುಗಿನಲ್ಲಿ ಲೇಡಿ ಪವರ್ ಸ್ಟಾರ್ ರೇಂಜ್ ಕ್ರೇಜ್ ಹೊಂದಿದ್ದಾರೆ.
  • ತಮ್ಮ ಸಹಜ ನಟನೆ ಮತ್ತು ಅತ್ಯುತ್ತಮ ನೃತ್ಯಗಳಿಂದ ಅಭಿಮಾನಿಗಳ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ.
  • ಸಾಯಿ ಪಲ್ಲವಿ ಸದ್ಯ ಭಾರೀ ಬೇಡಿಕೆಯಿರುವ ನಟಿ.
Sai Pallavi: ನ್ಯಾಚುರಲ್‌ ಬ್ಯೂಟಿ ಸಿನಿಮಾ ಮಾಡಲು ಹಾಕುವ ಷರತ್ತುಗಳೇನು ಗೊತ್ತಾ? title=

Natural Beauty Sai Pallavi: ಸಾಯಿ ಪಲ್ಲವಿ ತೆಲುಗಿನಲ್ಲಿ ಲೇಡಿ ಪವರ್ ಸ್ಟಾರ್ ರೇಂಜ್ ಕ್ರೇಜ್ ಹೊಂದಿದ್ದಾರೆ. ತಮ್ಮ ಸಹಜ ನಟನೆ ಮತ್ತು ಅತ್ಯುತ್ತಮ ನೃತ್ಯಗಳಿಂದ ಅಭಿಮಾನಿಗಳ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ.. ಇವರು ಬರೀ ಕಂಟೆಂಟ್‌ ಆಧಾರಿತ ಸಿನಿಮಾಗಳನ್ನು ಮಾಡುತ್ತಿದ್ದು.. ಹೀಗಾಗಿ ಬಹುತೇಕ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ.. 

ಸಾಯಿ ಪಲ್ಲವಿ ಸದ್ಯ ಭಾರೀ ಬೇಡಿಕೆಯಿರುವ ನಟಿ.. ಆದರೆ ಆಕೆಯ ಜತೆ ಸಿನಿಮಾ ಮಾಡಬೇಕಾದರೆ ಹಲವು ಷರತ್ತುಗಳನ್ನು ಪಾಲಿಸಬೇಕು. ಆದರೆ ಆ ಷರತ್ತುಗಳು ಎಂದರೆ ಹಣದ ಅಥವಾ ಐಷಾರಾಮಿ ಬೇಡಿಕೆಯಲ್ಲ. ಅವರ ಜೊತೆ ಸಿನಿಮಾ ಅಂದರೆ ನಿರ್ದೇಶಕರಿಗೆ ಒಂದಷ್ಟು ಫಾಲೋವರ್ಸ್ ಇರಲೇಬೇಕು. 

ಇದನ್ನೂ ಓದಿ-ವೀಕೆಂಡ್‌ ಎಪಿಸೋಡ್‌ನಲ್ಲಿ ಸುಂಟರಾಳಿ; ಮನೆಗೆ ವಾಪಸ್ಸಾದ್ರು ಪ್ರತಾಪ್-ಸಂಗೀತಾ

ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡಬೇಕೆಂದರೆ ಮೊದಲು ಬೇಕಿರುವುದು ಪಾತ್ರಕ್ಕೆ ಆದ್ಯತೆ ನೀಡುವುದು. ಚಿತ್ರದಲ್ಲಿ ಅವರ ಪಾತ್ರ ತುಂಬಾ ಪ್ರಭಾವಶಾಲಿಯಾಗಿರಬೇಕು. ಅಂದಾಗ ಮಾತ್ರ ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ.. ಅಲ್ಲದೆ, ವಿಷಯವು ಉತ್ತಮವಾಗಿರಬೇಕು. ತನ್ನ ಪಾತ್ರಕ್ಕೆ ಮಾತ್ರವಲ್ಲ ಚಿತ್ರದ ಕಥೆಗೂ ನಟಿ ಆದ್ಯತೆ ನೀಡುತ್ತಾಳೆ. ಈ ನಿಯಮವನ್ನು ಮೊದಲಿನಿಂದಲೂ ಈ ಸಾಯಿ ಪಲ್ಲವಿ ಪಾಲಿಸುತ್ತಾರೆ.. ಇನ್ನು ಇದೆಲ್ಲವೂ ಚಿತ್ರದ ಒಳಿತಿಗಾಗಿ ಎಂದು ಸಾಯಿ ಪಲ್ಲವಿ ಹೇಳುತ್ತಾರೆ... ಇಷ್ಟೆಲ್ಲಾ ಷರುತ್ತಗಳನ್ನು ಒಪ್ಪಿಕೊಂಡಾಗ ಮಾತ್ರ ಸಾಯಿ ಪಲ್ಲವಿ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ನೀಡುತ್ತಾರಂತೆ.. 

ಸಾಯಿ ಪಲ್ಲವಿ ಸದ್ಯ ನಾಗ ಚೈತನ್ಯ ಜೊತೆ `ತಾಂಡೇಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. `ಲವ್ ಸ್ಟೋರಿ' ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದೆ.. ಈ ಸಿನಿಮಾವನ್ನು ಗೀತಾ ಆರ್ಟ್ಸ್ ನಿರ್ಮಾಣ ಮಾಡಲಿದೆ. 

ಇದನ್ನೂ ಓದಿ-Sapthami Gowda : ಸೀರೆಯಲ್ಲಿ ಚಂದನವನದ ಸಿಂಗಾರ ಸಿರಿ..! ಎಷ್ಟು ಕ್ಯೂಟ್‌ ಅಲ್ವಾ ಸಪ್ತಮಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News