ಬೆಂಗಳೂರು: ಎಸ್.ಎಸ್.ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ನಟನೆಯ ತ್ರಿಬಲ್ ಆರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದು, ಈಗ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಇದೇ ತಿಂಗಳ 20ರಂದು ತಾರಕ್ ಹುಟ್ಟುಹಬ್ಬದಂದು ಒಟಿಟಿಗೆ ಲಗ್ಗೆ ಇಟ್ಟ ತ್ರಿಬಲ್ ಆರ್ ಸಿನಿಮಾ ಹೊಸದೊಂದು ರೆಕಾರ್ಡ್ ಬರೆದಿದೆ.
1 ನಿಮಿಷಕ್ಕೆ 1000 ಮಿಲಿಯನ್ಸ್
ಆರ್ ಆರ್ ಆರ್ ಸಿನಿಮಾ ಜೀ5 ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ದೃಶ್ಯ ವೈಭವ ತ್ರಿಬಲ್ ಆರ್ ಸಿನಿಮಾ, ಜಸ್ಟ್ ಒಂದೇ ಒಂದು ನಿಮಿಷದಲ್ಲಿ 1000 ಮಿಲಿಯನ್ಸ್ ಸ್ಟ್ರೀಮಿಂಗ್ ಪಡೆದುಕೊಂಡಿದ್ದು, ಜೊತೆಗೆ ಜೀ5ಯಲ್ಲಿ ನಾಲ್ಕು ಭಾಷೆಯಲ್ಲಿಯೂ ಟ್ರೇಡಿಂಗ್ ಕಮಾಲ್ ಮಾಡ್ತಿದೆ.
ಫ್ಯಾನ್ಸ್ ಗೆ ರಾಮ್-ಭೀಮ್ ಧನ್ಯವಾದ
ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿರುವ RRR ಸಿನಿಮಾಕ್ಕೆ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಕೃತಜ್ಞ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲಿಯೂ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು,ನಿಮ್ಮ ಅದ್ಭುತ ಪ್ರತಿಕ್ರಿಯೆ ಧನ್ಯವಾದ ಎಂದು ಜೂನಿಯರ್ ಎನ್ ಟಿಆರ್ ಟ್ವೀಟ್ ಮಾಡಿದ್ದಾರೆ.
Drum roll🥁! Our favorite actors & even more favorite film is here at your home screen.
Time to turn your living room into a theatre with @rrrmovie in 4K Dolby Atmos. #RRRNowStreamingOnZEE5 #RRROnZEE5@ssrajamouli @tarak9999 @AlwaysRamCharan @mmkeeravaani @ajaydevgn @aliaa08 pic.twitter.com/G6NdmVagHB— ZEE5 Telugu (@ZEE5Telugu) May 19, 2022
ಜೀ5ನಲ್ಲಿ ರಿಲೀಸ್ ಆಗಿರುವ ತ್ರಿಬಲ್ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದ್ದು, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಸೇರಿ ನಾಲ್ಕು ಭಾಷೆಯಲ್ಲಿಯೂ ಒಳ್ಳೆ ರೀತಿ ಸ್ಪಂದನೆ ವ್ಯಕ್ತವಾಗ್ತಿದ್ದು, ನೀವು ಚಿತ್ರವನ್ನು ಮೆಚ್ಚಿದಕ್ಕೆ ಧನ್ಯವಾದ ಎಂದಿದ್ದಾರೆ.
ರಾಜಮೌಳಿ ಸಿನಿಮಾ ಎಂದರೆ ಅಭಿಮಾನಿಗಳು ಸಹಜವಾಗಿಯೇ ಅದ್ದೂರಿತನ ಬಯಸುತ್ತಾರೆ. ಅದಕ್ಕೆ ತಕ್ಕಂತೆಯೇ ‘ಆರ್ಆರ್ಆರ್’ ಸಿನಿಮಾ ಮೂಡಿಬಂದಿದೆ. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಆ್ಯಕ್ಷನ್ ಖದರ್ ನಲ್ಲಿ ಮೆರೆದಿದ್ದರು. ಜೊತೆಗೆ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.