Roopa Rayappa: ದೊಡ್ಡ ಚಿತ್ರಗಳನ್ನು ತಿರಸ್ಕರಿಸಿದ KGF ಶಾಂತಿ..! ಆ ಚಿತ್ರದಲ್ಲಿ ನಟಿಸಿದ್ದೇ ಇವರ ಕರಿಯರ್‌ಗೆ ಕಂಟಕವಾಯ್ತಾ?

KGF Roopa Rayappa: ಬ್ಲಾಕ್‌ಬಸ್ಟರ್ ಚಿತ್ರ KGFನ ನಟಿಯೊಬ್ಬರು ತಮ್ಮ ಪಾತ್ರದಿಂದಾಗಿ ತುಂಬಾ ಅಸಮಾಧಾನಗೊಂಡು ಹಲವಾರು ಚಿತ್ರಗಳನ್ನು ಒಂದೊಂದಾಗಿ ತಿರಸ್ಕರಿಸಿರುವ ಕಹಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ..   

Written by - Savita M B | Last Updated : Dec 6, 2023, 12:34 PM IST
  • 2018 ರಲ್ಲಿ ಬಿಡುಗಡೆಯಾದ ನಟ ಯಶ್ ಅಭಿನಯದ 'ಕೆಜಿಎಫ್ʼ ಚಿತ್ರ ಎಲ್ಲೆಡೆ ಸಂಚಲನ ಮೂಡಿಸಿತ್ತು
  • ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದಾಗ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು...
  • ಕೆಜಿಎಫ್‌ನ ಎರಡೂ ಭಾಗಗಳಲ್ಲಿ ಕಾಣಿಸಿಕೊಂಡ ರೂಪಾ
Roopa Rayappa: ದೊಡ್ಡ ಚಿತ್ರಗಳನ್ನು ತಿರಸ್ಕರಿಸಿದ KGF ಶಾಂತಿ..! ಆ ಚಿತ್ರದಲ್ಲಿ ನಟಿಸಿದ್ದೇ ಇವರ ಕರಿಯರ್‌ಗೆ ಕಂಟಕವಾಯ್ತಾ? title=

Roopa Rayappa: 2018 ರಲ್ಲಿ ಬಿಡುಗಡೆಯಾದ ನಟ ಯಶ್ ಅಭಿನಯದ 'ಕೆಜಿಎಫ್ʼ ಚಿತ್ರ ಎಲ್ಲೆಡೆ ಸಂಚಲನ ಮೂಡಿಸಿತ್ತು. ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದಾಗ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು... ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಯಶಸ್ವಿಯಾಯಿತು ಎಂದರೆ 80 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಕೆಜಿಎಫ್ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

ಇದರ ನಂತರ, ಚಿತ್ರದ ಎರಡನೇ ಭಾಗವನ್ನು ಸಹ ಘೋಷಿಸಲಾಗಿತ್ತು.. ಆದು ಕೂಡ ವಿಶ್ವಾದ್ಯಂತ 1,200 ಕೋಟಿ ರೂಪಾಯಿಗಳ ದೊಡ್ಡ ಕಲೆಕ್ಷನ್ ಮಾಡಿದ್ದು.. ಚಿತ್ರದ ಭಾರೀ ಗಳಿಕೆ ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಈ ಚಿತ್ರದಲ್ಲಿ ಯಶ್ ಅವರಲ್ಲದೆ, ಶ್ರೀನಿಧಿ, ಅರ್ಚನಾ ಜೋಯಿಸ್, ಅನಂತ್ ನಾಗ್ ಮತ್ತು ರಾಮಚಂದ್ರರಾಜು, ರವೀನಾ ಟಂಡನ್ ಮತ್ತು ಸಂಜಯ್ ದತ್ ಮುಂತಾದ ನಟರು ಕಾಣಿಸಿಕೊಂಡಿದ್ದಾರೆ. ಆದರೆ, ಕೆಜಿಎಫ್‌ನ ಎರಡೂ ಭಾಗಗಳಲ್ಲಿ ಕಾಣಿಸಿಕೊಂಡ ಇನ್ನೊಬ್ಬ ನಟಿ ಇದ್ದಾರೆ. ಅವರೇ ನಟಿ ರೂಪಾ ರಾಯಪ್ಪ.. 

ಇದನ್ನೂ ಓದಿ-Animal Box Office Collection: ಕೇವಲ 5 ದಿನಗಳಲ್ಲಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ರಣಬೀರ್‌ ಸಿನಿಮಾ! 14 ಚಿತ್ರಗಳ ರೆಕಾರ್ಡ್‌ ಬ್ರೇಕ್‌

ಕೆಜಿಎಫ್‌ನ ಎರಡೂ ಭಾಗಗಳಲ್ಲಿ ಕಾಣಿಸಿಕೊಂಡ ರೂಪಾ ನಿಜ ಜೀವನದಲ್ಲಿ ಸಾಕಷ್ಟು ಗ್ಲಾಮರಸ್ ಆಗಿದ್ದಾರೆ. ರೂಪಾ ದಕ್ಷಿಣ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು.. ಆದರೆ, ಕೆಜಿಎಫ್‌ನಲ್ಲಿ ಭಯಭೀತ, ಸರಳ ಮತ್ತು ನೀರಸವಾಗಿ ಕಾಣುವ ಮಹಿಳೆಯ ಪಾತ್ರವನ್ನು ಈಕೆ ನಿರ್ವಹಿಸಿರುವುದು ಗಮನಾರ್ಹ.. ಆದರೆ ತಮ್ಮ ಪಾತ್ರವನ್ನು ತಾವೇ ತೆರೆಮೇಲೆ ನೋಡಿದಾಗ ನಟಿ ರೂಪ ಅವರ ಮನಸ್ಸಿನಲ್ಲಿ ತಮ್ಮ ಬಗ್ಗೆಯೇ ಭಯ ಹುಟ್ಟಿಕೊಂಡಿತ್ತಂತೆ.. ಏಕೆಂದರೆ, ನಟಿಗೆ ತೆರೆಯ ಮೇಲೆ ತನ್ನನ್ನು ಗುರುತಿಸಿಕೊಳ್ಳಲೂ ಸಾಧ್ಯವಾಗದಂತಹ ಪಾತ್ರ ಅದಾಗಿತ್ತು.. 

ಕೆಜಿಎಫ್‌ನಲ್ಲಿ ರೂಪ ರಾಯಪ್ಪ ಮನಮುಟ್ಟುವ ಪಾತ್ರದಲ್ಲಿ ನಟಿಸಿದ್ದಾರೆ. ಆಳದ ಗಣಿಯಲ್ಲಿ ಬದುಕುತ್ತಿರುವ ಹೆಣ್ಣು ಒಂದು ಮಗುವಿಗೆ ಜನ್ಮ ನೀಡುವ ಪಾತ್ರದಲ್ಲಿ ರೂಪಾ ರಾಯಪ್ಪ ಕಾಣಿಸಿಕೊಂಡಿದ್ದಾರೆ... ಚಿತ್ರದಲ್ಲಿ ಈ ದೃಶ್ಯ ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸಿತ್ತು.. ಅಲ್ಲದೇ ರೂಪ ರಾಯಪ್ಪ ಅವರ ಅಭಿನಯಕ್ಕೆ ಸಾಕಷ್ಟು ಪ್ರಶಂಸೆ ಸಿಕ್ಕಿತು. ಆದರೆ ಮತ್ತೆ ತಮಗೆ ಅಂತಹದ್ದೇ ಪಾತ್ರಗಳು ಬರುತ್ತವೆಯೋ ಎಂಬ ಭಯ ಅವರಲ್ಲಿ ಮೂಡಿದ್ದರಿಂದ.. ರೂಪಾ ಈ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಟಿಸಿದ್ದಾರೆ.. 

ಇದನ್ನೂ ಓದಿ-ಅಂತು ಇಂತು ಓಟಿಟಿಗೆ ಬರ್ತಾಯಿದೆ ʻಟಗರು ಪಲ್ಯʼ: ಏನಂದ್ರು ಚಿತ್ರದ ನಿರ್ಮಾಪಕ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News