ಚಂದನವನದಲ್ಲಿ 'ಸುನಾಮಿ' ಎಬ್ಬಿಸಿದ ರಾಕಿಂಗ್ ಸ್ಟಾರ್'ನ 'ಕೆಜಿಎಫ್' ಟೀಸರ್

ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ, ವಿಜಯ್ ಕಿರಗಂದುರ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ.

Last Updated : Jan 9, 2018, 01:36 PM IST
ಚಂದನವನದಲ್ಲಿ 'ಸುನಾಮಿ' ಎಬ್ಬಿಸಿದ ರಾಕಿಂಗ್ ಸ್ಟಾರ್'ನ 'ಕೆಜಿಎಫ್' ಟೀಸರ್ title=

ನಿನ್ನಿಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟುಹಬ್ಬದ ಕೊಡುಗೆಯಾಗಿ ಅಭಿಮಾನಿಗಳು ಭಾರಿ ಉದುಗೊರೆಯನ್ನೇ ನೀಡಿದ್ದಾರೆ. ಅದೇನು ಅಂತೀರ..? ಕಳೆದ ವರ್ಷದಿಂದಲೂ ರಾಕಿಂಗ್ ಸ್ಟಾರ್'ನ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗಾಗಿ 'ಕೆಜಿಎಫ್' ಚಿತ್ರತಂಡ ನಿನ್ನೆ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಟೀಸರ್ ಚಂದನವನದಲ್ಲಿ 'ಸುನಾಮಿ'ಯನ್ನೇ ಎಬ್ಬಿಸಿದೆ. 

ಹೌದು, ಈ ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ 18 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರನ್ನು ಪಡೆದಿದೆ. 

ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ, ವಿಜಯ್ ಕಿರಗಂದುರ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ರವಿ ಬಸೂರ್ ಸಂಗೀತ ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಯಶ್ ಗೆ ಜೋಡಿಯಾಗಿ ನಟಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ.

ಅನಂತ್ ನಾಗ್, ಅಚ್ಯುತ್ ಕುಮಾರ್, ವಶಿಷ್ಠ ಎನ್. ಸಿಂಹ, ಅಯ್ಯಪ್ಪ ಪಿ ಶರ್ಮಾ, ಬೇಸು ಸುರೇಶಾ, ಶ್ರೀನಿವಾಸ್ ಮೂರ್ತಿ, ರಾಮಚಂದ್ರ ರಾಜು, ಬಿ.ಎಸ್. ಅವಿನಾಶ್ ಸೇರಿದಂತೆ ಬಹುದೊಡ್ಡ ತಾರಾ ಬಳಗವೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ.

Trending News