ರಾಕಿಂಗ್ ಸ್ಟಾರ್‌ ಹುಟ್ಟುಹಬ್ಬದಂದೇ ದುರಂತ: ಯಶ್‌ ಬ್ಯಾನರ್‌ ಕಟ್ಟುವಾಗ 3 ಅಭಿಮಾನಿಗಳ ಸಾವು!

Yash Fans Death: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌  ಹುಟ್ಟು ಹಬ್ಬದಂದು, ಗದಗದಲ್ಲಿ ಯಶ್  ಮೂವರು ಅಭಿಮಾನಿಗಳು ಬ್ಯಾನರ್‌ ಕಟ್ಟುವಾಗ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.   

Written by - Zee Kannada News Desk | Last Updated : Jan 8, 2024, 09:38 AM IST
  • ಯಶ್‌ ಕೊರೊನಾ ಹಾವಳಿಗೂ ಮುನ್ನ ಬಹಳ ಅದ್ದೂರಿಯಾಗಿ ಒಮ್ಮೆ ಅಭಿಮಾನಿಗಳ ಜೊತೆ ಸಂಭ್ರಮಿಸಿದ್ದು, ಆದರೆ ಈ ವರ್ಷ ಸಿನಿಮಾಗಳ ಕೆಲಸಗಳ ಕಾರಣ ವಿದೇಶದಕ್ಕೆ ತರಳಿದ್ದಾರೆ.
  • ರಾಕಿಂಗ್‌ ಸ್ಟಾರ್‌ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದು, ಆದರೆ ಗದಗ ಜಿಲ್ಲೆಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ.
  • ರಾಕಿಂಗ್‌ ಸ್ಟಾರ್‌ ಅಭಿಮಾನಿಗಳು ಮಧ್ಯರಾತ್ರಿಯೇ ಬರ್ತ್ ಡೇ ಸೆಲೆಬ್ರೇಷನ್‌ಗೆ ಮುಂದಾಗಿದ್ದು, ಆಗ ಯಶ್ ದೊಡ್ಡ ಫೋಟೊ ಇರುವ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿದೆ.
ರಾಕಿಂಗ್ ಸ್ಟಾರ್‌ ಹುಟ್ಟುಹಬ್ಬದಂದೇ ದುರಂತ: ಯಶ್‌ ಬ್ಯಾನರ್‌ ಕಟ್ಟುವಾಗ 3 ಅಭಿಮಾನಿಗಳ ಸಾವು!  title=

Yash Fans Death On His Birthday: ಚಂದನವನದ ರಾಕಿಭಾಯ್‌ ನಟ ಯಶ್‌ ಕಳೆದ ನಾಲ್ಕು ವರ್ಷಗಳಿಂದ ಫ್ಯಾನ್ಸ್‌ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ಸ್ಟಾರ್‌ ಕೊರೊನಾ ಹಾವಳಿಗೂ ಮುನ್ನ ಬಹಳ ಅದ್ದೂರಿಯಾಗಿ ಒಮ್ಮೆ ಅಭಿಮಾನಿಗಳ ಜೊತೆ ಸಂಭ್ರಮಿಸಿದ್ದು, ಆದರೆ ಈ ವರ್ಷ ಸಿನಿಮಾಗಳ ಕೆಲಸಗಳ ಕಾರಣ ವಿದೇಶದಕ್ಕೆ ತರಳಿದ್ದಾರೆ. ಇತ್ತೀಚೆಗೆ ಪತ್ರ ಬರೆದು ಈ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. 

ರಾಜ್ಯದೆಲ್ಲೆಡೆ ರಾಕಿಂಗ್‌ ಸ್ಟಾರ್‌ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದು, ಆದರೆ ಗದಗ ಜಿಲ್ಲೆಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನೆಚ್ಚಿನ ಹೀರೋ ಬರ್ತ್‌ಡೇ ವಿಶೇಷವಾಗಿ ಯಶ್‌ ಬ್ಯಾನರ್ ಕಟ್ಟುವ ವೇಳೆ ಮೂವರಿಗೆ ವಿದ್ಯುತ್ ಶಾಕ್ ತಗುಲಿದೆ. 

ಇದನ್ನೂ ಓದಿ: ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರೂ ವೈಯಕ್ತಿಕ ಜೀವನದಲ್ಲಿ ಒಂಟಿ ಈಕೆ!

ನಟ ಯಶ್‌ ಬ್ಯಾನರ್‌ ಕಟ್ಟುವಾಗ ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ಎಂಬ ಮೂವರಯ ಯುವಕರು ಸ್ಥಳದಲ್ಲೇ ಕೊನೆಯುರಿರೆಳೆದಿದ್ದಾರೆ. ಇವರ ಜೊತೆಗಿದ್ದ ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 

ರಾಕಿಂಗ್‌ ಸ್ಟಾರ್‌ ಅಭಿಮಾನಿಗಳು ಮಧ್ಯರಾತ್ರಿಯೇ ಬರ್ತ್ ಡೇ ಸೆಲೆಬ್ರೇಷನ್‌ಗೆ ಮುಂದಾಗಿದ್ದು, ಆಗ ಯಶ್ ದೊಡ್ಡ ಫೋಟೊ ಇರುವ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿರುವ ಪ್ರಕರಣ, ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News