Hostel Hudugaru Bekagiddare : ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಕನ್ನಡದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಇಂದು ( ಜುಲೈ 21 ) ರಿಲೀಸ್ ಆಗಲಿದೆ. ವಿಭಿನ್ನವಾದ ಪ್ರಚಾರದಿಂದ ಸದ್ದು ಮಾಡಿದ್ದ ಚಿತ್ರತಂಡ ರಿಷಬ್ ಶೆಟ್ಟಿ ಸೇರಿದಂತೆ ಹಲವಾರು ಸ್ಟಾರ್ ನಟರನ್ನು ತಮ್ಮ ಚಿತ್ರದ ಪ್ರೋಮೋದಲ್ಲಿ ಹಾಕಿಕೊಂಡು ಭರ್ಜರಿ ವಿಡಿಯೋಗಳನ್ನು ರಿಲೀಸ್ ಮಾಡುವ ಮೂಲಕ ಸಿನಿಪ್ರಿಯರ ಮನಗೆದ್ದಿದೆ.
ಇನ್ನು ಈ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದ ಜೊತೆ ಕೈ ಜೋಡಿಸಿದ ರಮ್ಯಾ ಪ್ರೋಮೊ ಹಾಗೂ ಸಿನಿಮಾದಲ್ಲಿ ಪ್ರಾಧ್ಯಾಪಕಿಯ ಪಾತ್ರವನ್ನು ನಿರ್ವಹಿಸಿದ್ದರು. ಹೀಗೆ ಆರಂಭದಿಂದಲೂ ಚಿತ್ರತಂಡದ ಜೊತೆ ಇದ್ದ ನಟಿ ಚಿತ್ರ ಬಿಡುಗಡೆಗೆ ಇನ್ನು ಕೇವಲ ಎರಡೇ ದಿನಗಳು ಬಾಕಿ ಇದೆ ಎನ್ನುವಾಗ ಲೀಗಲ್ ನೋಟಿಸ್ ಕಳುಹಿಸಿದ್ದರು.
ನ್ಯಾಯ ಅಂದ್ರೆ ನ್ಯಾಯ.. ಜೈ ಆಂಜನೇಯ!!
ನಾಳೆ ಹಾಸ್ಟೆಲ್ ಹುಡುಗರು ರಿಲೀಸ್ ಆಗ್ತಿದೆ... ಥಿಯೇಟರ್ ನಲ್ಲಿ ಸಿಗೋಣ#HHBTomorrow #ComeOnBoys #HostelHudugaruBekagiddare @ParamvahStudios #Nithinkrishnamurthy #Arvindkashyap @rakshitshetty pic.twitter.com/Osxkj4nRUp
— Rishab Shetty (@shetty_rishab) July 20, 2023
ಇದನ್ನೂ ಓದಿ-Sapta Sagaradaache Yello: ‘ಸಪ್ತ ಸಾಗರದಾಚೆ ಎಲ್ಲೋ’ ಕೇಳುತ್ತಿದೆ ‘ಹೋರಾಟ’ದ ಹಾಡು
ಹೌದು ನಟಿ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ತನ್ನ ವಿಡಿಯೊ ಹಾಗೂ ಫೋಟೊಗಳನ್ನು ತನ್ನ ಅನುಮತಿ ಇಲ್ಲದೇ ಬಳಸಿದೆ ಎಂಬ ಕಾರಣ ಹೇಳಿ ಲೀಗಲ್ ನೋಟಿಸ್ ಕಳುಹಿಸಿ, ಒಂದು ಕೋಟಿ ಪರಿಹಾರ ಕೇಳಿದ್ದರು.
ನಟಿ ರಮ್ಯಾ ಅವರ ಈ ವರ್ತನೆಯಿಂದ ಸಿನಿ ಪ್ರಿಯರು ನಟಿ ವಿರುದ್ದ ಗರಂ ಆಗಿದ್ದರು. ಯುವ ಪ್ರತಿಭೆಗಳ ಒಳ್ಳೆಯ ಪ್ರಯತ್ನಕ್ಕೆ ಈ ರೀತಿ ಅಡ್ಡಿಯಾಗುವುದು ಸರಿಯಲ್ಲ ಎಂದಿದ್ರು. ಹೀಗೆ ರಮ್ಯಾ ನೀಡದ್ದ ನೋಟಿಸ್ ಕುರಿತು ತೀರ್ಪು ನೀಡ ಕೋರ್ಟ್ ರಮ್ಯಾ ಮಾಡಿದ್ದ ಆರೋಪವನ್ನು ಬದಿಗೊತ್ತಿ ಚಿತ್ರವನ್ನು ಸೆನ್ಸಾರ್ ಮಂಡಳಿ ನೀಡಿರುವ ಮಾರ್ಗದರ್ಶನದಂತೆ, ರಮ್ಯಾ ಅವರ ಸೀನ್‌ಗಳನ್ನು ಕಟ್ ಮಾಡದೆಯೇ ಬಿಡುಗಡೆ ಮಾಡಬಹುದು ಎಂದು ತೀರ್ಪನ್ನು ನೀಡಿತು.
ಇದನ್ನೂ ಓದಿ-ಹಾಟ್ ಲುಕ್ ನಲ್ಲಿ ಕಿರುತೆರೆ ನಟಿ ಜ್ಯೋತಿ ರೈ : ಫೋಟೋಸ್ ನೋಡಿ ಶಾಕ್ ಆಗ್ತೀರಾ..!
ಹೀಗೆ ಈ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ವಿವಾದ ಕೊನೆಗೊಂಡಿದ್ದು, ಹಾಸ್ಟೆಲ್ ಹುಡುಗರಿಗೆ ಜಯ ಸಿಕ್ಕಿದೆ. ತೀರ್ಪು ಹೊರಬೀಳುತ್ತಿದ್ದಂತೆಯೇ ಸೋಷಿಯಲ್ ಮಿಡಿಯಾದಲ್ಲಿ ಸಿನಿ ರಸಿಕರು ಸಂಭ್ರಮಿಸುತ್ತಿದ್ದಾರೆ.
ಇನ್ನು ಈ ನಡುವೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಪರವಾಗಿ ವಿಶೇಷ ಪೋಸ್ಟ್ ಹಂಚಿಕೊಂಡು ಚಿತ್ರತಂಡಕ್ಕೆ ಸಾತ್ ನೀಡುವುದರ ಜೊತೆಗೆ "ನ್ಯಾಯ ಅಂದ್ರೆ ನ್ಯಾಯ.. ಜೈ ಆಂಜನೇಯ! ನಾಳೆ ಹಾಸ್ಟೆಲ್ ಹುಡುಗರು ರಿಲೀಸ್ ಆಗ್ತಿದೆ. ಥಿಯೇಟರ್‌ನಲ್ಲಿ ಸಿಗೋಣ" ಎಂದು ಬರೆದುಕೊಂಡು ನಟಿ ರಮ್ಯಾಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.