ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಈ ಇಬ್ಬರಿಗೆ ಅರ್ಪಣೆ ಎಂದ ರಿಷಬ್ ಶೆಟ್ಟಿ

ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಈ ಪ್ರಶಸ್ತಿ ಇನ್ನಷ್ಟು ಸಿನೆಮಾ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದಿದ್ದಾರೆ. 

Written by - Ranjitha R K | Last Updated : Feb 21, 2023, 12:28 PM IST
  • ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಪ್ರಶಸ್ತಿ ಸ್ವೀಕರಿಸಿದ ರಿಷಬ್
  • ಇನ್ನಷ್ಟು ಸಿನೆಮಾ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸಿದೆ - ರಿಷಬ್
  • ಪತ್ನಿ ಪ್ರಗತಿ ಶೆಟ್ಟಿ ಮತ್ತು ತಂಡಕ್ಕೆ ಧನ್ಯವಾದ ಸಲ್ಲಿಸಿದ ಡಿವೈಸ್ ಸ್ಟಾರ್
ದಾದಾಸಾಹೇಬ್ ಫಾಲ್ಕೆ  ಪ್ರಶಸ್ತಿ ಈ ಇಬ್ಬರಿಗೆ ಅರ್ಪಣೆ ಎಂದ ರಿಷಬ್  ಶೆಟ್ಟಿ  title=

ಬೆಂಗಳೂರು : ಸೋಮವಾರ ನಡೆದ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಅತ್ಯಂತ ಭರವಸೆಯ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಡಿವೈನ್ ಸ್ಟಾರ್ ಕಪ್ಪು ಶರ್ಟ್ ಮತ್ತು ಬಿಳಿ ಪಂಚೆ ತೊಟ್ಟಿದ್ದರು.  ತನ್ನ ಈ ಪ್ರಶಸ್ತಿಯನ್ನು ರಿಷಬ್ ಪುನೀತ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಎಸ್‌ಕೆ ಭಗವಾನ್ ಅವರಿಗೆ ಅರ್ಪಿಸಿದ್ದಾರೆ.

ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ. ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದ ಹೊಂಬಾಳೆ ಫಿಲಂಸ್ ಮತ್ತು ವಿಜಯ್ ಕಿರಂಗಂದೂರು ಅವರಿಗೆ ಆಭಾರಿಯಾಗಿರುವುದಾಗಿ ಹೇಳಿದ್ದಾರೆ. ಈ ಪ್ರಶಸ್ತಿ ಇನ್ನಷ್ಟು ಸಿನೆಮಾ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದಿದ್ದಾರೆ. 

ಇದನ್ನೂ ಓದಿ : Comedy Khiladigalu - 4 : 'ಕಾಮಿಡಿ ಕಿಲಾಡಿಗಳು ಸೀಸನ್ 4 ರ ವಿನ್ನರ್ ಹಿರಿಯೂರಿನ ಹರೀಶ್!​

ಪತ್ನಿ ಪ್ರಗತಿ ಶೆಟ್ಟಿ ಮತ್ತು ತಂಡಕ್ಕೆ ಕೂಡಾ ರಿಷಬ್ ಧನ್ಯವಾದ ಹೇಳಿದ್ದಾರೆ. ನನ್ನ ಈ ಸಣ್ಣ ಕನಸನ್ನು ಬೆಂಬಲಿಸಿದ ನಮ್ಮ ಕಾಂತಾರ ತಂಡ ಮತ್ತು ತಂತ್ರಜ್ಞರು ಮತ್ತು ನನ್ನ ಜೀವನದ ಆಧಾರ ಸ್ತಂಭವಾದ ಪ್ರಗತಿ ಶೆಟ್ಟಿ  ಇರದಿದ್ದರೆ ಈ ಸಾಧನೆ ಮಾಡುವುದು ಸಾಧ್ಯವಿರುತ್ತಿರಲಿಲ್ಲ ಎಂದಿದ್ದಾರೆ. 

 

ಇದನ್ನೂ ಓದಿ :  Kangana Ranut : ʼರಾಹುಲ್‌ ಗಾಂಧಿʼಯನ್ನು ʼಮಗುʼ ಅಂತ ಕರೆದು ಸೋ ಸ್ವೀಟ್‌ ಎಂದ ನಟಿ ಕಂಗನಾ..!

ಅವರು ಪ್ರಶಸ್ತಿಯನ್ನು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಎಸ್‌ಕೆ ಭಗವಾನ್ ಅವರಿಗೆ ಅರ್ಪಿಸಿದ್ದಾರೆ.“ನಾನು ಈ ಪ್ರಶಸ್ತಿಯನ್ನು ನಮ್ಮ ದೈವ ನರ್ತಕರು, ಕರ್ನಾಟಕದ ಜನತೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಲೆಜೆಂಡರಿ ಭಗವಾನ್ ಸರ್ ಅವರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News