ಗೂಗಲ್ ನಲ್ಲಿ ಇಂಡಿಯಾದ ಬೆಸ್ಟ್ ಡೈರೆಕ್ಟರ್ ಯಾರು ಅಂತ ಕೇಳಿದ್ರೆ ಗೂಗಲ್ ಮೂಲಾಜಿಲ್ಲದೆ ಹೇಳುತ್ತೆ ಸ್ಯಾಂಡಲ್ ವುಡ್ ನ ಬುದ್ದಿವಂತ ಉಪ್ಪಿ ಅಂತ.. ಈಗ ಈ ಬುದ್ದಿವಂತನ ಬತ್ತಳಿಕೆಯಿಂದ ಬರ್ತಿರೋ ಮತ್ತೊಂದು ಬಾಣ ಯುಐ. ಸದಾ ಹೊಸತನ.. ತಂತ್ರಜ್ಞಾನ.. ನೈಜತೆಗೆ ಒತ್ತು ಕೊಡೊ ಉಪ್ಪಿ ಯುಐ ಚಿತ್ರದಲ್ಲೂ ತನ್ನ ಚಮತ್ಕಾರ ತೋರೊಕೆ
ಸಜ್ಜಾಗಿದ್ದಾರೆ.. ಹಾಗಾದ್ರೆ ಉಪ್ಪಿ ಯುಐನಲ್ಲಿ ಅಡಗಿರೋ ನಿಗೂಢ ಏನು ಅನ್ನೋದನ್ನ ಹೇಳ್ತಿವಿ ನೋಡಿ.
ಉಪ್ಪಿ ಸಿನಿಮಾಗಳಂದ್ರೆ ಹಾಗೆ ಅಲ್ಲಿ ಒಂದು ವಿಚಾರ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸಮಾಚರ ಎರಡನ್ನೂ ಸೇರಿಸಿ ಸಿನಿಮಾ ಮಾಡಿ ಅಭಿಮಾನಿಗಳಿಗೆ ಅರ್ಪಿಸ್ತಾರೆ. ತರ್ಲೆ ನನ್ನ ಮಗ ಚಿತ್ರದಿಂದ ಉಪ್ಪಿ 2 ಚಿತ್ರದವರೆಗೂ ಉಪ್ಪಿ ತಲೆಯಿಂದ ಹೊಸ ಹೊಸ ಬಾಣಗಳನ್ನು ಬಿಟ್ಟು ಗೆದ್ದಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ಅದೇ ರೀತಿ ಉಪ್ಪಿ ಏಳು ವರ್ಷಗಳ ಅಲೋಚನೆಯನ್ನ ಯುಐ ಚಿತ್ರದ ಮೂಲಕ ತೆರೆ ಮೇಲೆ ಕಟ್ಟಿಕೊಡೋಕೆ ಉಪ್ಪಿ ಸಕಲ ಸಿದ್ದತೆ ಮಾಡಿಕೊಂಡು ಶೂಟಿಂಗ್ ಅಖಾಡಕ್ಕಿಳಿದಿದ್ದಾರೆ.
ಇದನ್ನೂ ಓದಿ- ರಿಷಬ್ ಮೇಲೆ ನವಾಜುದ್ದೀನ್ ಸಿದ್ದಿಕಿಗೆ ಅಸೂಯೆ : ದೊಡ್ಡ ಸ್ಟಾರ್ಗೆ ಏಕೆ ಇಂತ ಬುದ್ಧಿ..!
ಹೌದು, ಉಪ್ಪಿ 2 ಆದ ಮೇಲೆ ತನ್ನ ಬುರುಡೆಗೆ ಸಾಕಷ್ಟು ಕೆಲಸ ಕೊಟ್ಟು ಈಗಿನ ಟ್ರೆಂಡ್ ಗೆ ತಕ್ಕಂತೆ ಕಥೆ ಮಾಡಿ ಮತ್ತೊಮ್ಮೆ ತೆರೆಮೇಲೆ ರೆವಲ್ಯೂಶನ್ ಮಾಡೋಕೆ ಕನಸು ಕಂಡಿದ್ದಾರೆ.. ಕಥೆ ಅಷ್ಟೇ ಅಲ್ಲ ಉಪ್ಪಿ ಯುಐ ಚಿತ್ರದಲ್ಲೂ ಹೊಸ ಹೊಸ ತಂತ್ರಜ್ಞಾನ ಬಳಕೆ ಮಾಡಿ ಶೂಟಿಂಗ್ ಮಾಡ್ತಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಈಗ ಚರ್ಚೆ ಆಗ್ತಿದೆ. ಬಾಲಿವುಡ್ ಕಾಲಿವುಡ್ ನಲ್ಲಿ ಪ್ರಯೋಗ ಮಾಡೋ ಹಾಗೇ ಉಪ್ಪಿ ಯುಐನಲ್ಲಿ ಒಂದೇ ಸೀನ್ ಗಾಗಿ 400 ಕ್ಯಾಮರಾಗಳನ್ನು ಬಳಸಿ ಅದ್ದೂರಿಯಾಗಿ ಶೂಟ್ ಮಾಡಿದ್ದಾರೆ ಅನ್ನೋ ವಿಚಾರ ಈಗ ಗಾಂಧಿ ನಗರದಲ್ಲಿ ಹವಾ ಕ್ರಿಯೇಟ್ ಮಾಡಿದೆ.
ಇದನ್ನೂ ಓದಿ- Pathaan : ಪಠಾಣ್ ʼಬೇಷರಮ್ ರಂಗ್ʼ ಸಾಂಗ್ ಔಟ್.. ಸಖತ್ತಾಗಿದೆ ಕಿಂಗ್ ಖಾನ್, ದೀಪ್ಸ್ ಲುಕ್
ಸೂಪರ್ ಚಿತ್ರದಲ್ಲಿ ಭಾರತ ಮೂವತ್ತು ವರ್ಷಗಳ ನಂತ್ರ ಹೇಗಿರುತ್ತೆ ಎಂದು ತೆರೆ ಮೇಲೆ ತೋರಿಸಿದ್ದ ಉಪ್ಪಿ, UI ಚಿತ್ರದಲ್ಲಿ ತಂತ್ರಜ್ಞಾನ ಅನ್ನೋದು ಮುಂದಿನ ದಿನಗಳಲ್ಲಿ ಹೇಗಿರುತ್ತೆ, ಅದರಿಂದದಾಗೋ ಲಾಭ-ನಷ್ಟ ಎಲ್ಲಾ ವಿಚಾರಗಳನ್ನು ತೋರಿಸೋ ಸಲುವಾಗಿ ಸಖತ್ ಕಸರತ್ ಮಾಡ್ತಿದ್ದಾರೆ. ಅಲ್ಲದೆ ಮೊದಲ ಬಾರಿಗೆ ಉಪ್ಪಿ ಯುಐ ಚಿತ್ರವನ್ನು ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾಡ್ತಿರೋ ಕಾರಣ ಭರ್ತಿ ನೂರು ಕೋಟಿ ಬಜೆಟ್ ನಲ್ಲಿ ಯುಐ ಚಿತ್ರವನ್ನು ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.