Rashmika Mandanna: ಅಮಿತಾಬ್ ಬಚ್ಚನ್ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿರಿಕ್ ಬೆಡಗಿ

ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ರಶ್ಮಿಕಾ ಬಾಲಿವುಡ್‌ಗೆ ಕಾಲಿಡಲಿದ್ದು, ಇದರೊಂದಿಗೆ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರಕ್ಕೆ ಸಹಿ ಹಾಕಿದ್ದಾರೆ.

Written by - Yashaswini V | Last Updated : Apr 3, 2021, 11:50 AM IST
  • ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ
  • ಬಿಗ್ ಬಿ ಅವರೊಂದಿಗೆ ಕಿರಿಕ್ ಬೆಡಗಿ
  • ನಿನ್ನೆಯಿಂದಲೇ ಶೂಟಿಂಗ್ ನಲ್ಲಿ ಭಾಗಿಯಾಗಿರುವ ರಶ್ಮಿಕಾ
Rashmika Mandanna: ಅಮಿತಾಬ್ ಬಚ್ಚನ್ ಜೊತೆಗೆ  ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿರಿಕ್ ಬೆಡಗಿ title=
Rashmika Mandanna (File Image)

ಮುಂಬೈ: ಕನ್ನಡದ ಹುಡುಗಿ, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ  (Rashmika Mandanna) ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ರಶ್ಮಿಕಾ ಬಾಲಿವುಡ್‌ಗೆ ಕಾಲಿಡಲಿದ್ದು, ಇದರೊಂದಿಗೆ ಅವರ ಕೈಯಲ್ಲಿ ಮತ್ತೊಂದು ದೊಡ್ಡ ಆಫರ್ ಕೂಡ ಇದೇ ಎಂದು ಹೇಳಲಾಗುತ್ತಿದೆ.

ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್ ಚೊಚ್ಚಲ ಚಿತ್ರದಲ್ಲಿ ಬಿಗ್ ಬಿ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Rashmika Mandanna (@rashmika_mandanna)

ಇದನ್ನೂ ಓದಿ - Yuvarathnaa Twitter Review: ಪವರ್ ಫುಲ್ ಸಂದೇಶ ಹೊತ್ತು ತಂದ ಯುವರತ್ನ

ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನ ಮುಂಬರುವ ಚಿತ್ರ ಗುಡ್‌ಬೈ ಚಿತ್ರೀಕರಣ ಶುಕ್ರವಾರದಿಂದ ಪ್ರಾರಂಭವಾಗಿದೆ.

ಇದನ್ನೂ ಓದಿ - Malaika Arora: ಗೋಡೆಯ ಮೇಲೆ ನಟಿಯ ಯೋಗ ಕಂಡು ಹುಬ್ಬೇರಿಸಿದ ನೆಟ್ಟಿಗರು

ಈ ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸುತ್ತಿದ್ದು, ಅಮಿತಾಬ್ ಬಚ್ಚನ್ (Amitabh Bachchan) ಮತ್ತು ಸೌತ್ ಸೆನ್ಸೇಷನ್ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿದ್ದಾರೆ. ಶುಕ್ರವಾರ ಮುಂಬೈನಲ್ಲಿ  ಚಿತ್ರದ ಮುಹೂರ್ತ ನೆರವೇರಿತು. ರಶ್ಮಿಕಾ ಶುಕ್ರವಾರದಿಂದ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ, ಬಿಗ್ ಬಿ ಏಪ್ರಿಲ್ 4 ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News