Rashmika Mandanna : "ಅದರಲ್ಲಿ ತಪ್ಪೇನಿದೇ.." ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಹೀಗಂದ್ರು

Rashmika Mandanna : ರಶ್ಮಿಕಾ ಮಂದಣ್ಣ ತನ್ನ ಇತ್ತೀಚಿಗೆ ದಲಪತಿ ವಿಜಯ್ ಜೊತೆಗೆ ವಾರಿಸು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕೂಡ ಕಂಡಿತು. ಪುಷ್ಪ: ದಿ ರೈಸ್ ಎಂಬ ಹಿಟ್ ಆಕ್ಷನ್ ಡ್ರಾಮಾದಲ್ಲಿ ಶ್ರೀವಲ್ಲಿ ಪಾತ್ರದ ನಂತರ ರಶ್ಮಿಕಾಗೆ ನ್ಯಾಷನಲ್‌ ಕ್ರಶ್‌ ಎಂದೇ ಕರೆಯಲಾಗುತ್ತಿದೆ. ರಶ್ಮಿಕಾಗೆ ಹೆಚ್ಚಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಲಾಗಿದೆ. 

Written by - Chetana Devarmani | Last Updated : Jan 30, 2023, 07:42 AM IST
  • ವಿಜಯ್‌ ದೇವರಕೊಂಡ ಜೊತೆ ಡೇಟಿಂಗ್‌ ವದಂತಿ
  • "ಅದರಲ್ಲಿ ತಪ್ಪೇನಿದೇ.."
  • ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಹೀಗಂದ್ರು
Rashmika Mandanna : "ಅದರಲ್ಲಿ ತಪ್ಪೇನಿದೇ.." ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಹೀಗಂದ್ರು  title=
Rashmika Mandanna

Rashmika Mandanna : ರಶ್ಮಿಕಾ ಮಂದಣ್ಣ ತನ್ನ ಇತ್ತೀಚಿಗೆ ದಲಪತಿ ವಿಜಯ್ ಜೊತೆಗೆ ವಾರಿಸು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕೂಡ ಕಂಡಿತು. ಪುಷ್ಪ: ದಿ ರೈಸ್ ಎಂಬ ಹಿಟ್ ಆಕ್ಷನ್ ಡ್ರಾಮಾದಲ್ಲಿ ಶ್ರೀವಲ್ಲಿ ಪಾತ್ರದ ನಂತರ ರಶ್ಮಿಕಾಗೆ ನ್ಯಾಷನಲ್‌ ಕ್ರಶ್‌ ಎಂದೇ ಕರೆಯಲಾಗುತ್ತಿದೆ. ರಶ್ಮಿಕಾಗೆ ಹೆಚ್ಚಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಲಾಗಿದೆ. ಆದರೆ ಅನೇಕ ಬಾರಿ ರಶ್ಮಿಕಾ ನೆಗೆಟಿವ್‌ ಆಗಿ ಟ್ರೋಲ್‌ ಆಗುತ್ತಾರೆ. ಈ ಹಿಂದೆ ಕೂಡ ವಿಜಯ್‌ ದೇವರಕೊಂಡ ವಿಚಾರದಲ್ಲಿ ಸಖತ್‌ ಟ್ರೋಲ್‌ ಆಗಿದ್ದರು. ಅವರು ವಿಜಯ್‌ ದೇವರಕೊಂಡ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. 

ಇತ್ತೀಚೆಗೆ, ರಶ್ಮಿಕಾ ಮಂದಣ್ಣ ತನ್ನ ಗೆಳೆಯ ವಿಜಯ್ ದೇವರಕೊಂಡ ಅವರೊಂದಿಗೆ ಮಾಲ್ಡೀವ್ಸ್‌ಗೆ ವಿಹಾರಕ್ಕೆ ತೆರಳಿದ್ದರು. ಅಂದಿನಿಂದ ನೆಟಿಜನ್‌ಗಳು ಇಬ್ಬರೂ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ರಶ್ಮಿಕಾ, ಇದೆಲ್ಲ ಸುಳ್ಳು. ವಿಜಯ್ ನನ್ನ ಉತ್ತಮ ಸ್ನೇಹಿತ ಮತ್ತು ಅವರೊಂದಿಗೆ ಪ್ರವಾಸಕ್ಕೆ ಹೋಗುವುದು ತಪ್ಪಲ್ಲ ಎಂದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ರಶ್ಮಿಕಾ ಈ ಬಗ್ಗೆ ಮಾತನಾಡಿದ್ದಾರೆ. ವಿಜಯ್‌ ಜೊತೆ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ರಶ್ಮಿಕಾ, 'ಅವರ ಜೊತೆ ಪ್ರವಾಸಕ್ಕೆ ಹೋಗುವುದರಲ್ಲಿ ತಪ್ಪೇನಿದೆ' ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ : CCL 2023 : ʼಸೆಲೆಬ್ರಿಟಿ ಕ್ರಿಕೆಟ್ ಲೀಗ್‌ʼ ಶುರು.. ಸುದೀಪ್‌ ʼಕರ್ನಾಟಕ ಬುಲ್ಡೋಜರ್ಸ್ʼ ತಂಡ ಸೇರಿ 8 ಟೀಂ ಭಾಗಿ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದುವರೆಗೆ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 2018 ರಲ್ಲಿ ಗೀತಾ ಗೋವಿಂದಂ ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರೂ ತೆರೆ ಹಂಚಿಕೊಂಡರು. ಆ ಬಳಿಕ ಇವರಿಬ್ಬರ ಡೇಟಿಂಗ್‌ ವದಂತಿ ಶುರುವಾದವು. ಇದೇ ವಿಚಾರದಲ್ಲಿ ನಟಿ ರಶ್ಮಿಕಾ ಅನೇಕ ಬಾರಿ ಕೆಟ್ಟದಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ. ಇದಕ್ಕೆ ಅವರು ಬೇಸರವನ್ನು ಸಹ ವ್ಯಕ್ತಪಡಿಸಿದ್ದಾರೆ. 

ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಚಿತ್ರ ಮಿಷನ್ ಮಜ್ನು ಉತ್ತಮ ವಿಮರ್ಶೆಗಳನ್ನು ಪಡೆಯಿತು. ಇದು ಅವರ ಎರಡನೇ ಬಾಲಿವುಡ್ ಚಿತ್ರವಾಗಿದ್ದು, ಸಿದ್ದಾರ್ಥ್ ಮಲ್ಹೋತ್ರಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 2023 ರ ಜನವರಿ 20 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಇದಲ್ಲದೇ ಪುಷ್ಪಾ 2: ದಿ ರೂಲ್‌ನಲ್ಲಿಯೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. 

ಇದನ್ನೂ ಓದಿ : Pathaan : ಪಠಾಣ್‌ ಅಬ್ಬರ..! ವಿವಾದದ ನಡುವೆಯೂ 429 ಕೋಟಿ ಬಾಚಿದ ಕಿಂಗ್‌ ಖಾನ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News