ನನಗೆ ಈಗಾಗಲೇ ಮದುವೆಯಾಗಿದೆ, ಮನಸಲ್ಲಿರೋದು ಅವನೊಬ್ಬನೇ : ರಶ್ಮಿಕಾ ಮಂದಣ್ಣ

Rashmika Mandanna : ಅನೇಕ ಬಾರಿ ನಟಿಯರ ಮದುವೆ ವದಂತಿಗಳು ಹಬ್ಬುತ್ತವೆ. ಇದು ಸಹಜ. ಆದರೆ ಇದೀಗ ಖುದ್ದು ರಶ್ಮಿಕಾ ಅವರೇ ತಮಗೆ ಮದುವೆ ಆಗಿದೆ ಎಂದು ಹೇಳಿದ್ದಾರೆ ಎಂಬ ಸಂಗತಿ ವೈರಲ್‌ ಆಗಿದೆ.   

Written by - Chetana Devarmani | Last Updated : Aug 3, 2023, 10:25 PM IST
  • ನನಗೆ ಈಗಾಗಲೇ ಮದುವೆಯಾಗಿದೆ
  • ಮನಸಲ್ಲಿರೋದು ಅವನೊಬ್ಬನೇ
  • ರಶ್ಮಿಕಾ ಮದುವೆ ಕುರಿತ ಸುದ್ದಿ ವೈರಲ್‌
ನನಗೆ ಈಗಾಗಲೇ ಮದುವೆಯಾಗಿದೆ, ಮನಸಲ್ಲಿರೋದು ಅವನೊಬ್ಬನೇ : ರಶ್ಮಿಕಾ ಮಂದಣ್ಣ title=
Rashmika

Rashmika Mandanna about her secret wedding : ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವಾರು ಊಹಾಪೋಹಗಳಿವೆ. ಇದೀಗ ಮತ್ತೊಂದು ವಿಚಾರ ವೈರಲ್‌ ಆಗುತ್ತಿದೆ. ಅದು ಅವರ ಮದುವೆ ವಿಚಾರ. ಅನೇಕ ಬಾರಿ ನಟಿಯರ ಮದುವೆ ವದಂತಿಗಳು ಹಬ್ಬುತ್ತವೆ. ಇದು ಸಹಜ. ಆದರೆ ಇದೀಗ ಖುದ್ದು ರಶ್ಮಿಕಾ ಅವರೇ ತಮಗೆ ಮದುವೆ ಆಗಿದೆ ಎಂದು ಹೇಳಿದ್ದಾರೆ ಎನ್ನಲಾದ ವಿಚಾರ ವೈರಲ್‌ ಆಗುತ್ತಿದೆ. 

ನಟಿ ರಶ್ಮಿಕಾ ಕರ್ನಾಟಕದ ಕೊಡಗಿನ ಬೆಡಗಿ. ಇವರು ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ತೆಲಗು, ತಮಿಳು ಸೇರಿದಂತೆ ಹಿಂದಿ ಚಿತ್ರಗಳಲ್ಲಿಯೂ ನಟಿಸಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ರಶ್ಮಿಕಾ ಅವರ ವಿವಾಹ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

ಇದನ್ನೂ ಓದಿ: ಶೀಘ್ರದಲ್ಲೇ ಬೆಳ್ಳಿತೆರೆಗೆ ಇಳಯರಾಜ ಬಯೋಪಿಕ್.. ನಾಯಕ ಯಾರು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಬಾಲಿವುಡ್ ಚಿತ್ರರಂಗದತ್ತ ಗಮನ ಹರಿಸುತ್ತಿದ್ದಾರೆ ಮತ್ತು ಪ್ರಸ್ತುತ ನಟ ರಣಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಇತ್ತಿಚೆಗೆ ರಶ್ಮಿಕಾ ನಟ ಟೈಗರ್ ಶ್ರಾಫ್ ಜೊತೆಗೆ ಸಂದರ್ಶನದಲ್ಲಿ ಭಾಗವಹಿಸಿದ್ದರಂತೆ. ಈ ವೇಳೆ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಭಾರೀ ವೈರಲ್ ಆಗಿದೆ.

ನೀವು ಮಂಗಾ ನಾಯಕ ನರುಟೊ ಉಜುಮಕಿಯನ್ನು ರಹಸ್ಯವಾಗಿ ಮದುವೆಯಾದದ್ದು ನಿಜವೇ? ಎಂದು ರಶ್ಮಿಕಾ ಅವರನ್ನು ಕೇಳಿದರಂತೆ. ರಶ್ಮಿಕಾ ಮಂದಣ್ಣ ಕಣ್ಣು ರೆಪ್ಪೆ ಮಿಟುಕಿಸದೆ ತಮ್ಮ ಎಂದಿನ ಹಾಸ್ಯಮಯ ಸ್ವರದಲ್ಲಿ ಉತ್ತರಿಸಿದ್ದಾರೆ, "ನರುಟೊಗೆ ನನ್ನ ಹೃದಯ ಮೀಸಲು. ಅದು ನನ್ನ ನೆಚ್ಚಿನ ಪಾತ್ರ. ಆ ಪಾತ್ರವನ್ನು ನಾನು ಸಂಪೂರ್ಣವಾಗಿ ಮದುವೆಯಾಗಿದ್ದೇನೆ" ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. ರಶ್ಮಿಕಾ ತಾವು ನರುಟೊನ ಪ್ರೀತಿಯ 'ಹಿನಾಟಾ' ಆಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅನಿಮೆ ನಾಯಕಿಯಂತೆ ನೇರಳೆ ಬಣ್ಣದ ಕೂದಲನ್ನು ಹೊಂದುವ ತನ್ನ ಆಸೆಯನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ಪಬ್ಜಿ ಲವರ್‌ಗಾಗಿ ಪಾಕ್‌ನಿಂದ ಬಂದಿದ್ದ ಸೀಮಾ ಈಗ ನಟಿ..! 6 ಲಕ್ಷ ಸಂಭಾವನೆ

ವಿಡಿಯೋ ಜೊತೆಗೆ ನರುಟೊ ನಿಂಜಾ ವಾರಿಯರ್‌ನಂತೆ ಕಾಣುವ ಗೊಂಬೆಯೊಂದಿಗೆ ನಟಿಯ ಚಿತ್ರವೂ ವೈರಲ್ ಆಗುತ್ತಿದೆ. ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ಕಾರ್ಟೂನ್ ಪಾತ್ರಗಳಲ್ಲಿ ಆಸಕ್ತಿ ತೋರಿಸುತ್ತಿದ್ದರೆ, ನಟಿ ರಶ್ಮಿಕಾ ಅವರು ಕಾರ್ಟೂನ್‌ ಪಾತ್ರವಾದ ನರುಟೊ ವನ್ನೇ ರಹಸ್ಯವಾಗಿ ಮದುವೆಯಾಗಿರುವುದಾಗಿ ಹೇಳಿದ್ದಾರೆ ಎಂಬ ವಿಚಾರ ಈಗ ಎಲ್ಲೆಡೆ ಸಖತ್‌ ವೈರಲ್‌ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News