ಈ ಸ್ಟಾರ್‌ ನಟನ ಮೊದಲ ಸಿನಿಮಾಗೆ ಕೇವಲ 250 ರೂ. ಹಣ ನೀಡಿದ್ದರಂತೆ..! ಇಂದು ಕೋಟಿಗಟ್ಟಲೆ..

Ranbir Kapoor remuneration : ಬಾಲಿವುಡ್‌ನ ಅನೇಕ ತಾರೆಯರು ಒಂದು ಚಿತ್ರಕ್ಕೆ ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ. ಇಂದಿನ ಕಾಲದಲ್ಲಿ ಹಣಕ್ಕೆ ಅಷ್ಟು ಮಹತ್ವವಿಲ್ಲ ಬಿಡಿ ಅದು ಬೇರೆ ವಿಚಾರ. ಆದ್ರೆ ಈ ಹಿಂದೆ ಸಂಪಾದನೆ ಎಂಬುವುದು ಹೆಸರಿಗಷ್ಟೇ ಇತ್ತು. ಅಂದಿನ ಕಾಲದಲ್ಲಿ ನಟರೊಬ್ಬರ ಮೊದಲ ಸಿನಿಮಾಗೆ ಕೇವಲ 250 ರೂ. ಸಂಭಾವನೆ ಪಡೆದಿದ್ದರಂತೆ.

Written by - Krishna N K | Last Updated : Jul 24, 2023, 10:04 PM IST
  • ಬಾಲಿವುಡ್‌ನ ಅನೇಕ ತಾರೆಯರು ಒಂದು ಚಿತ್ರಕ್ಕೆ ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ.
  • ಅಂದಿನ ಕಾಲದಲ್ಲಿ ನಟರೊಬ್ಬರ ಮೊದಲ ಸಿನಿಮಾಗೆ ಕೇವಲ 250 ರೂ. ಸಂಭಾವನೆ ಪಡೆದಿದ್ದರಂತೆ.
  • ಇದೀಗ ಸ್ಟಾರ್‌ ಹೀರೋಗಳಲ್ಲಿ ಒಬ್ಬರಾಗಿರುವ ಅವರು ಒಂದು ಸಿನಿಮಾಗೆ ಕೋಟಿಗಟ್ಟಲೇ ಹಣ ಪಡೆಯುತ್ತಿದ್ದಾರೆ.
ಈ ಸ್ಟಾರ್‌ ನಟನ ಮೊದಲ ಸಿನಿಮಾಗೆ ಕೇವಲ 250 ರೂ. ಹಣ ನೀಡಿದ್ದರಂತೆ..! ಇಂದು ಕೋಟಿಗಟ್ಟಲೆ.. title=

Ranbir kapoor first movie remuneration : ಇಂದು ಸಿನಿಮಾ ಬಜೆಟ್‌ಗಿಂತಲೂ ನಟರ ಸಂಭಾವನೆ ಹೆಚ್ಚಾಗಿದೆ. ಭಾರತೀಯ ಚಿತ್ರರಂಗದಲ್ಲಿಂದು ಅನೇಕ ತಾರೆಯರು ಒಂದು ಚಿತ್ರಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ಸ್ಟಾರ್‌ ಹೀರೋಗಳಲ್ಲಿ ಒಬ್ಬರು ತಮ್ಮ ಮೊದಲ ಸಿನಿಮಾಗೆ ಕೇವಲ 250 ರೂ. ಸಂಭಾವನೆ ಪಡೆದಿದ್ದಾಗಿ ತಿಳಿಸಿದ್ದು, ಅವರ ಫ್ಯಾನ್ಸ ಶಾಕ್‌ ಆಗಿದ್ದಾರೆ.

ಹೌದು.. ಈ ನಟ ಇಂದು ತಮ್ಮ ಅತ್ಯುತ್ತಮ ಅಭಿನಯದಿಂದ ದೇಶದ ತುಂಬಾ ಚಿರಪರಿಚಿತರಾಗಿದ್ದಾರೆ. ಇವರ ಕೆಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿವೆ. ʼಸಂಜಯ್ ದತ್ʼ ಅವರ ಜೀವನಾಧಾರಿತ 'ಸಂಜು' ಕೂಡ ಸೇರಿದೆ. ಇವಾಗ ನಿಮ್ಗೆ ಅರ್ಥವಾಗಿರುತ್ತದೆ.. ಯಸ್‌.. ಆ ನಟ ಬೇರೆ ಯಾರೂ ಅಲ್ಲ ರಣಬೀರ್ ಕಪೂರ್. 

ಇದನ್ನೂ ಓದಿ: ನಟನಾಗಿ ಸಿನಿರಂಗಕ್ಕೆ ಕ್ಯಾಪ್ಟನ್‌ ಕೂಲ್‌ ಎಂಟ್ರಿ..! ಎಂಎಸ್‌ಡಿ ಫಸ್ಟ್‌ ಸಿನಿಮಾ ಇದೆ ನೋಡಿ..?

ಈ ಹಿಂದೆ, ರಣಬೀರ್ ಕಪೂರ್ ತಮ್ಮ ಸಂದರ್ಶನದಲ್ಲಿ ತಮ್ಮ ಮೊದಲ ಸಂಭಾವನೆಯನ್ನು ಬಹಿರಂಗಪಡಿಸಿದರು. ರಣಬೀರ್ ಕಪೂರ್ ತಮ್ಮ ಮೊದಲ ಸಂಭಾವನೆ 250 ರೂ. ‘ಪ್ರೇಮಗ್ರಂಥ’ ಸಿನಿಮಾದಲ್ಲಿ ಪೋಷಕ ಕಲಾವಿದನಾಗಿ ನಟಿಸಲು ಈ ಹಣ ಪಡೆದಿದ್ದರಂತೆ. ಈ ಚಿತ್ರದಲ್ಲಿ ರಿಷಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆ ಹಣವನ್ನು ತಾಯಿ ನೀತು ಕಪೂರ್‌ಗೆ ನೀಡಿರುವುದಾಗಿ ನಟ ಹೇಳಿದ್ದಾರೆ.

ಇಂದು ಶಾರುಖ್ ಮತ್ತು ಸಲ್ಮಾನ್ ಖಾನ್ ನಂತರದ ಪೀಳಿಗೆಯ ಯಶಸ್ವಿ ನಟರ ಪಟ್ಟಿಯಲ್ಲಿ ರಣಬೀರ್ ಕಪೂರ್ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ. ರಣಬೀರ್ ಕಪೂರ್ ಇತ್ತೀಚೆಗೆ ಬಿಡುಗಡೆಯಾದ 'ತೂ ಜೂಟಿ ಮೇ ಮಕ್ಕರ್' ಚಿತ್ರಕ್ಕಾಗಿ ಸುಮಾರು 25 ರಿಂದ 30 ಕೋಟಿ ರೂ. ಸಂಭಾವನೆ ಪಡೆದಿದ್ದಾಗಿ ತಿಳಿದು ಬಂದಿತ್ತು. ಅಲ್ಲದೆ, ಈ ಚಿತ್ರ ಹಿಟ್ ಆದ ತಕ್ಷಣ ನಟ ತನ್ನ ಶುಲ್ಕವನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಿಶ್ವದ 5ನೇ ಅತಿ ದೊಡ್ಡ ವಜ್ರದ ಉಂಗುರ ತಮನ್ನಾ ಕೈಯಲ್ಲಿ..! ನಟಿಗೆ ರಾಮ್‌ ಚರಣ್‌ ಪತ್ನಿ ಗಿಫ್ಟ್‌ 

ರಣಬೀರ್ ಕಪೂರ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಅನಿಮಲ್' ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಚಿತ್ರ ಆಗಸ್ಟ್ 11 ರಂದು ಬಿಡುಗಡೆಯಾಗಬೇಕಿತ್ತು ಆದರೆ ಈಗ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆಯಾಗಿ ರಶ್ಮಿಕಾ ಮಂದನಾ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News