"ನನ್ನ ನೆಚ್ಚಿನ ನಟಿ ಅನುಷ್ಕಾ ಶರ್ಮಾ": ಆತ್ಮೀಯ ಸ್ನೇಹಿತೆಯ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು?

Ranbir Kapoor: ನಟ ರಣಬೀರ್ ಕಪೂರ್ ಸದ್ಯ ಶಂಶೇರಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಣಬೀರ್ ಕಪೂರ್, ಸಂಜಯ್ ದತ್ ಮತ್ತು ವಾಣಿ ಕಪೂರ್ ಅಭಿನಯದ ಈ ಚಿತ್ರದ ಟ್ರೈಲರ್‌ ನಿನ್ನೆ ಬಿಡುಗಡೆಯಾಗಿದೆ. 

Written by - Chetana Devarmani | Last Updated : Jun 26, 2022, 11:39 AM IST
  • ಶಂಶೇರಾ ಪ್ರಚಾರದಲ್ಲಿ ನಿರತರಾಗಿರುವ ರಣಬೀರ್‌
  • "ನನ್ನ ನೆಚ್ಚಿನ ನಟಿ ಅನುಷ್ಕಾ ಶರ್ಮಾ"
  • ಆತ್ಮೀಯ ಸ್ನೇಹಿತೆಯ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು?
"ನನ್ನ ನೆಚ್ಚಿನ ನಟಿ ಅನುಷ್ಕಾ ಶರ್ಮಾ": ಆತ್ಮೀಯ ಸ್ನೇಹಿತೆಯ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು? title=
ಅನುಷ್ಕಾ ಶರ್ಮಾ

Ranbir Kapoor: ನಟ ರಣಬೀರ್ ಕಪೂರ್ ಸದ್ಯ ಶಂಶೇರಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಣಬೀರ್ ಕಪೂರ್, ಸಂಜಯ್ ದತ್ ಮತ್ತು ವಾಣಿ ಕಪೂರ್ ಅಭಿನಯದ ಈ ಚಿತ್ರದ ಟ್ರೈಲರ್‌ ನಿನ್ನೆ ಬಿಡುಗಡೆಯಾಗಿದೆ. ಸಿನಿಮಾದ ಪ್ರಚಾರದ ಮಧ್ಯೆ ಮಾದ್ಯಮಗಳಿಗೆ ಸಂದರ್ಶನ ನೀಡುವ ರಣಬೀರ್‌ ಬಾಲಿವುಡ್‌ನ ತಮ್ಮ ನೆಚ್ಚಿನ ನಟಿ ಯಾರೆಂಬುದನ್ನು ತಿಳಿಸಿದ್ದಾರೆ. ರಣಬೀರ್ ತನ್ನ ನೆಚ್ಚಿನ ಸಹ ನಟ ಮತ್ತು ನೆಚ್ಚಿನ ನಾಯಕಿ ಯಾರು ಎಂದು ಸುದ್ದಿ ಪೋರ್ಟಲ್‌ ಜೊತೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ಸಿಕ್ತು ಮತ್ತೊಂದು ಸರ್‌ಪ್ರೈಸ್‌! ಕಪಿಲ್‌ ದೇವ್‌ ಕೊಟ್ಟ ಗಿಫ್ಟ್‌ ಏನು ಗೊತ್ತಾ?

ಅವರ ನೆಚ್ಚಿನ ಸಹನಟ ಸೌರಭ್ ಶುಕ್ಲಾ ಮತ್ತು ನೆಚ್ಚಿನ ನಾಯಕಿ ನಟಿ ಅನುಷ್ಕಾ ಶರ್ಮಾ ಎಂದು ತಿಳಿಸಿದ್ದಾರೆ. ರಣಬೀರ್-ಸೌರಭ್ ಒಟ್ಟಾಗಿ ಬರ್ಫಿ, ಜಗ್ಗ ಜಾಸೂಸ್ ಮತ್ತು ಈಗ ಮುಂಬರುವ ಚಿತ್ರ ಶಂಶೇರಾದಲ್ಲಿ ನಟಿಸಿದ್ದಾರೆ. ಅದೇ ಸಮಯದಲ್ಲಿ, ಅವರು ಏ ದಿಲ್ ಹೈ ಮುಷ್ಕಿಲ್, ಬಾಂಬೆ ವೆಲ್ವೆಟ್ ಮತ್ತು ಸಂಜು ಚಿತ್ರದಲ್ಲಿ ಅನುಷ್ಕಾ ಜೊತೆ ರಣಬೀರ್‌ ಕೆಲಸ ಮಾಡಿದ್ದಾರೆ.

ನಾಲ್ಕು ವರ್ಷಗಳ ವಿರಾಮದ ನಂತರ ರಣಬೀರ್ ಕಪೂರ್ ಮತ್ತೆ ಬಿಗ್‌ ಸ್ಕ್ರೀನ್‌ ಮೇಲೆ ಮಿಂಚಲು ಬರಲಿದ್ದಾರೆ. ಅವರು ಕೊನೆಯದಾಗಿ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕರಣ್ ಮಲ್ಹೋತ್ರಾ ನಿರ್ದೇಶನದ ‘ಶಂಶೇರಾ’ ಜುಲೈ 22 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ.  ಇದಲ್ಲದೇ ರಣಬೀರ್‌ ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ'ದಲ್ಲಿ ಸಹ ಅಭಿನಯಿಸಿದ್ದಾರೆ. ಇದರಲ್ಲಿ ಆಲಿಯಾ ಭಟ್ ಅವರ ಜೊತೆ ನಟಿಸಲಿದ್ದು, ಮೊದಲ ಬಾರಿಗೆ ಇವರಿಬ್ಬರು ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: Pathaan: ‘ಕನ್ನಡ’ ಕಡೆಗಣಿಸಿದ ಶಾರುಖ್ ಖಾನ್‌ಗೆ ಕನ್ನಡಿಗರಿಂದ ತಿರುಗೇಟು..!

ಅನುಷ್ಕಾ ಶರ್ಮಾ ಕೂಡ ನಾಲ್ಕು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿದ್ದು, ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ನಟಿಸಿದ ಆನಂದ್ ಎಲ್ ರೈ ಅವರ 'ಝೀರೋ' ಚಿತ್ರದಲ್ಲಿ ಅವರು ಕೊನೆಯ ಬಾರಿಗೆ ಅಭಿನಯಿಸಿದ್ದರು. ಭಾರತದ ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನವನ್ನು ಆಧರಿಸಿದ ನೆಟ್‌ಫ್ಲಿಕ್ಸ್‌ನ 'ಚಕ್ಡಾ ಎಕ್ಸ್‌ಪ್ರೆಸ್' ನಲ್ಲಿ ಅನುಷ್ಕಾ ಇದೀಗ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News