ಆಲಿಯಾ-ರಣ್‌ಬೀರ್ ಮದುವೆಗೆ ಕೇವಲ 28 ಅತಿಥಿಗಳಿಗೆ ಮಾತ್ರ ಆಹ್ವಾನ!?

ಬಾಲಿವುಡ್‌ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಕೇವಲ 28 ಅತಿಥಿಗಳು ಮಾತ್ರ ಹಾಜರಿರುತ್ತಾರೆ ಎಂದು ಆಲಿಯಾ ಸಹೋದರ ರಾಹುಲ್ ಭಟ್ ಬಹಿರಂಗಪಡಿಸಿದ್ದಾರೆ. 

Written by - Chetana Devarmani | Last Updated : Apr 12, 2022, 02:03 PM IST
  • ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್‌
  • ಆಲಿಯಾ-ರಣ್‌ಬೀರ್ ಮದುವೆಗೆ ಕೇವಲ 28 ಅತಿಥಿಗಳಿಗೆ ಮಾತ್ರ ಆಹ್ವಾನ!
  • ಮದುವೆಯ ಸಿದ್ಧತೆ ಬಗ್ಗೆ ಆಲಿಯಾ ಅವರ ಸಹೋದರ ರಾಹುಲ್ ಭಟ್ ಹೇಳಿಕೆ
ಆಲಿಯಾ-ರಣ್‌ಬೀರ್ ಮದುವೆಗೆ ಕೇವಲ 28 ಅತಿಥಿಗಳಿಗೆ ಮಾತ್ರ ಆಹ್ವಾನ!? title=
ರಣಬೀರ್ ಕಪೂರ್

ಬಾಲಿವುಡ್‌ನ ಕ್ಯೂಟ್‌ ಕಪಲ್‌ ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಬ್ಯಾಚ್ಯುಲರ್‌ ಪಾರ್ಟಿಗೂ ರಣಬೀರ್ ಕಪೂರ್ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಮದುವೆಗೆ ಯಾರನ್ನೆಲ್ಲ ಕರೆಯಬಹುದೆಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಇದನ್ನೂ ಓದಿ: ರಾಜಧಾನಿ ಖ್ಯಾತಿಯ ಚೇತನ್ ಚಂದ್ರ ʼಸಿ-15ʼ ಸಿನಿಮಾ ಅನೌನ್ಸ್

ಬಾಲಿವುಡ್‌ನ ಗಲ್ಲಿ ಗಲ್ಲಿಯಲ್ಲೂ ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆ ಮಾತು ಜೋರಾಗಿ ಹಬ್ಬಿದೆ.  ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸೆಟ್‌ನಲ್ಲಿ ಇಬ್ಬರಿಗೂ ಪ್ರೀತಿ ಮೂಡಿದೆ ಎನ್ನಲಾಗಿತ್ತು. ಬಳಿಕ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಇಬ್ಬರೂ ಮದುವೆ ಆಗೋದು ಪಕ್ಕಾ ಆಗಿತ್ತು. ಆದರೆ ಮದುವೆ ದಿನಾಂಕ ಮಾತ್ರ ಫೈನಲ್‌ ಆಗಿರಲಿಲ್ಲ. ಇದೀಗ ಏಪ್ರಿಲ್‌ 2ನೇ ವಾರದಲ್ಲಿ ಇಬ್ಬರೂ ಸಪ್ತಪದಿ ತುಳಿದು, ಹೊಸ ಬದುಕಿಗೆ ಕಾಲು ಇಡೋದು ಪಕ್ಕಾ ಆಗಿದೆ.

ಈಗ, ಆಲಿಯಾ ಅವರ ಸಹೋದರ ರಾಹುಲ್ ಭಟ್ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮದುವೆಯ ಸಿದ್ಧತೆ ಬಗ್ಗೆ ಮಾತನಾಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿವಾಹವು ಕುಟುಂಬ ಸದಸ್ಯರು, ಎರಡು ಕುಟುಂಬದ ಅತ್ಯಾಪ್ತರನ್ನು ಸೇರಿ ಒಟ್ಟು ಕೇವಲ 28 ಅತಿಥಿಗಳು ಮಾತ್ರ ಮದುವೆಗೆ ಹಾಜರಾಗುತ್ತಾರೆ ಎಂದು ರಾಹುಲ್ ಭಟ್ ಹೇಳಿದ್ದಾರೆ. 

ಇದನ್ನೂ ಓದಿ: 'ಬೆಂಗಳೂರು ಬಾಯ್ಸ್' ಟೀಸರ್ ರಿಲೀಸ್‌.. ಅಂತ, ರಣಧೀರ, ಓಂ ಸಿನಿಮಾ ನೆನಪಿಸಿದ ಫಸ್ಟ್‌ ಲುಕ್‌!

ಆಲಿಯಾ ಹಾಗೂ ರಣಬೀರ್ ಭಾರಿ ಭದ್ರತೆಯೊಂದಿಗೆ ಚೆಂಬೂರಿಗೆ ಬಸ್‌ನಲ್ಲಿ ಬರಲಿದ್ದಾರೆ. ಮದುವೆ ನಡೆಯುತ್ತಿರುವ ಕಪೂರ್‌ ಕುಟುಂಬ ಒಡೆತನದ ಆರ್‌ಕೆ ಸ್ಟುಡಿಯೋ ಹೌಸ್ ಮುಂಬೈನ ಚೆಂಬೂರ್‌ನಲ್ಲಿದೆ. ಈ ಹಿಂದೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ರಾಜಸ್ತಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ನಂತರ, ಮುಂಬೈನ ಚೆಂಬೂರ್‌ನಲ್ಲಿರುವ ರಣಬೀರ್‌ ಕಪೂರ್ ಪೂರ್ವಜರ ಮನೆ ಆರ್‌ಕೆ ಹೌಸ್‌ನಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News