ʼಮಹಿಳೆಯರು ದುರ್ಗೆಯ ಸ್ವರೂಪʼ : ದೀಪಿಕಾ, ರಶ್ಮಿಕಾ, ಪರ ರಮ್ಯಾ ಬ್ಯಾಟ್‌..!

Former MP Ramya on Deepika Padukone : ಪಠಾಣ್‌ ಸಿನಿಮಾದಲ್ಲಿ ಕೇಸರಿ ಬಟ್ಟೆ ತೊಟ್ಟ ಕಾರಣ ಟ್ರೋಲ್‌ಗೆ ಒಳಗಾಗಿರುವ ದೀಪಿಕಾ ಪಡುಕೋಣೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ನೆಟ್ಟಿಗರು ಪಠಾಣ್‌ ಸಿನಿಮಾ ಬಾಯ್ಕಾಟ್‌ಗೆ ಒತ್ತಾಯಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ರಶ್ಮಿಕಾ ಬ್ಯಾನ್‌ ವಿಚಾರವು ಬಹಳ ಸದ್ದು ಮಾಡಿತ್ತು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ನಟಿಯರ ಮೇಲೆ ಟ್ರೋಲ್‌ ಹೆಚ್ಚಾಗುತ್ತಿರುವ ಕುರಿತು ಗರಂ ಆಗಿದ್ದು, ಮೂಲಭೂತ ಹಕ್ಕಿನ ಬಗ್ಗೆ ಪಾಠಮಾಡಿದ್ದಾರೆ.

Written by - Krishna N K | Last Updated : Dec 17, 2022, 04:38 PM IST
  • ನಟಿಯರ ವಿರುದ್ಧ ಸಾಲು ಸಾಲು ಟ್ರೋಲ್‌
  • ದೀಪಿಕಾ, ರಶ್ಮಿಕಾ, ಸಾಯಿ ಪಲ್ಲವಿ, ಸಮಂತಾ ಪರ ರಮ್ಯಾ ಬ್ಯಾಟ್‌
  • ಸ್ತ್ರೀದ್ವೇಷಿಯಗಳ ವಿರುದ್ಧ ಹೊರಾಡಬೇಕಾಗಿದೆ ಎಂದ ಮಾಜಿ ಸಂಸದೆ
ʼಮಹಿಳೆಯರು ದುರ್ಗೆಯ ಸ್ವರೂಪʼ : ದೀಪಿಕಾ, ರಶ್ಮಿಕಾ, ಪರ ರಮ್ಯಾ ಬ್ಯಾಟ್‌..! title=

ಬೆಂಗಳೂರು : ಪಠಾಣ್‌ ಸಿನಿಮಾದಲ್ಲಿ ಕೇಸರಿ ಬಟ್ಟೆ ತೊಟ್ಟ ಕಾರಣ ಟ್ರೋಲ್‌ಗೆ ಒಳಗಾಗಿರುವ ದೀಪಿಕಾ ಪಡುಕೋಣೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ನೆಟ್ಟಿಗರು ಪಠಾಣ್‌ ಸಿನಿಮಾ ಬಾಯ್ಕಾಟ್‌ಗೆ ಒತ್ತಾಯಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ರಶ್ಮಿಕಾ ಬ್ಯಾನ್‌ ವಿಚಾರವು ಬಹಳ ಸದ್ದು ಮಾಡಿತ್ತು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ನಟಿಯರ ಮೇಲೆ ಟ್ರೋಲ್‌ ಹೆಚ್ಚಾಗುತ್ತಿರುವ ಕುರಿತು ಗರಂ ಆಗಿದ್ದು, ಮೂಲಭೂತ ಹಕ್ಕಿನ ಬಗ್ಗೆ ಪಾಠಮಾಡಿದ್ದಾರೆ.

ಹೌದು, ಸಮಂತಾ ಡೈವೋರ್ಸ್‌, ಸಾಯಿ ಪಲ್ಲವಿ ಹೇಳಿಕೆ, ರಶ್ಮಿಕಾ ಬ್ಯಾನ್‌ ವಿಚಾರ, ದೀಪಿಕಾ ಕೇಸರಿ ಬಟ್ಟೆ ಸೇರಿದಂತೆ ಇನ್ನು ಹಲವಾರು ವಿಚಾರವಾಗಿ ಭಾರತೀಯ ಸಿನಿ ರಂಗದ ನಟಿಯರು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ನಟಿಯರ ಖಾಸಗಿ ವಿಚಾರದ ಬಗ್ಗೆ ಮಾತನಾಡುವ ನೆಟ್ಟಿಗರು, ಸೋಷಿಯಲ್‌ ಮೀಡಿಯಾದಲ್ಲಿ ಮೆಮ್ಸ್‌ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸಿನಿ ನಾಯಕಿಯರಿಗೆ ಮುಜುಗರ ಉಂಟಾಗುತ್ತಿದೆ. ಅಲ್ಲದೆ, ನೋವು ಅನುಭವಿಸುವಂತಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ Avatar ಅಬ್ಬರ; ಕೆಜಿಎಫ್ ದಾಖಲೆ ಜಸ್ಟ್ ಮಿಸ್..!

ಇದೇ ವಿಚಾರವಾಗಿ ಟ್ಟೀಟ್‌ ಮೂಲಕ ಗುಡುಗಿರುವ ರಮ್ಯಾ, ʼಸಮಂತಾ ತನ್ನ ವಿಚ್ಛೇದನಕ್ಕಾಗಿ, ಸಾಯಿ ಪಲ್ಲವಿ ಅವರ ಅಭಿಪ್ರಾಯಕ್ಕಾಗಿ, ರಶ್ಮಿಕಾ ಅವರ ಪ್ರತ್ಯೇಕತೆಗೆ, ದೀಪಿಕಾ ಅವರ ಬಟ್ಟೆಗಾಗಿ ಹೀಗೆ ಅನೇಕ, ಅನೇಕ ಮಹಿಳೆಯರನ್ನು ಎಲ್ಲದಕ್ಕೂ ಟ್ರೋಲ್ ಮಾಡಲಾಗುತ್ತಿದೆ. ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಮಹಿಳೆಯರು ಮಾ ದುರ್ಗೆಯ ಮೂರ್ತರೂಪ, ಸ್ತ್ರೀದ್ವೇಷದ ವಿರುದ್ಧ ನಾವು ಹೋರಾಡಬೇಕಾಗಿದೆʼ ಎಂದು ಗುಡುಗಿದ್ದಾರೆ.

ರಮ್ಯಾ ಟ್ಟೀಟ್‌ಗೆ ನೆಟ್ಟಿಗರು ಸೇರಿದಂತೆ ನಟ ನಟಿಯರು ಸಹ ಬೆಂಬಲ ಸೂಚಿಸಿದ್ದಾರೆ. ನಟನೆ ಬಿಟ್ಟು ರಾಜಕೀಯ ರಂಗ ಪ್ರವೇಶ ಮಾಡಿದಾಗ ರಮ್ಯಾ ಅವರ ವಿರುದ್ಧ ಟ್ರೋಲ್‌ಗಳ ಮಳೆ ಸುರಿದಿತ್ತು. ಆದ್ರೂ ಸಹ ಅವುಗಳನ್ನೆಲ್ಲ ಮೆಟ್ಟಿ ನಿಂತು ಸಂಸದೆಯಾಗಿದ್ದರು. ಇದೀಗ ಸಹ ನಟಿಯರ ಮೇಲಿನ ಟ್ರೋಲ್‌ ಕುರಿತು ಗುಡುಗಿದ್ದು, ಸ್ತ್ರೀಯರನ್ನು ದ್ವೇಷಿಸುವವರ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ಸದ್ಯ ಸಿನಿರಂಗಕ್ಕೆ ಮರಳಿರುವ ದಿವ್ಯಾ ಸ್ಪಂದನ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಉತ್ತರಕಾಂಡ ಸಿನಿಮಾದಲ್ಲಿ ಡಾಲಿ ಧನಂಜಯ್‌ ಜೊತೆ ನಟಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News