ʼಪದ್ಮಾವತಿʼ ವಿರುದ್ಧ ಗೆದ್ದ ʼಹಾಸ್ಟೆಲ್‌ ಹುಡುಗರುʼ..! ಕೋಟಿ ಪರಿಹಾರ ಕೇಳಿದ್ದ ನಟಿ ರಮ್ಯಾಗೆ ಮುಖಭಂಗ

Hostel hudugaru bekagiddare : ಅನುಮತಿ ಇಲ್ಲದೆ ತಮ್ಮ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡಿದ್ದಾರೆ ಎಂದು ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರತಂಡದ ವಿರುದ್ಧ ಕೋರ್ಟ್‌ ಮೇಟ್ಟಿಲೇರಿದ್ದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾಗೆ ಹಿನ್ನೆಡೆಯಾಗಿದೆ. ಕೋರ್ಟ್‌ ಮೋಹಕ ತಾರೆ ಅರ್ಜಿಯನ್ನೇ ವಜಾಗೊಳಿಸಿದೆ.

Written by - Krishna N K | Last Updated : Jul 20, 2023, 04:23 PM IST
  • ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ವಿರುದ್ಧ ಕೋರ್ಟ್‌ ಮೇಟ್ಟಿಲೇರಿದ್ದ ನಟಿ ರಮ್ಯಾಗೆ ಹಿನ್ನೆಡೆ.
  • ಹಾಸ್ಟೆಲ್‌ ಹುಡುಗರ ಪರ ನ್ಯಾಯಾಲಯ ಆದೇಶ ಹೊರಡಿಸಿದೆ.
  • ಕೋರ್ಟ್‌ ಸಿನಿಮಾ ಬಿಡುಗಡೆ ಅನುಮತಿ ನೀಡಿದೆ.
ʼಪದ್ಮಾವತಿʼ ವಿರುದ್ಧ ಗೆದ್ದ ʼಹಾಸ್ಟೆಲ್‌ ಹುಡುಗರುʼ..! ಕೋಟಿ ಪರಿಹಾರ ಕೇಳಿದ್ದ ನಟಿ ರಮ್ಯಾಗೆ ಮುಖಭಂಗ title=

Ramya vs Hostel hudugaru bekagiddare : ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ವಿರುದ್ಧ ಕೋರ್ಟ್‌ ಮೇಟ್ಟಿಲೇರಿದ್ದ ನಟಿ, ಮಾಜಿ ಸಂಸದೆ ರಮ್ಯಾಗೆ ಹಿನ್ನಡೆಯಾಗಿದೆ. ಇಂದು ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್‌ ಸಿನಿಮಾ ಬಿಡುಗಡೆ ಅನುಮತಿ ನೀಡಿದೆ. ಹಾಸ್ಟೆಲ್‌ ಹುಡುಗರ ಪರ ನ್ಯಾಯಾಲಯ ಆದೇಶ ಹೊರಡಿಸಿದೆ.

ಯಸ್‌... ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರತಂಡ ವರ್ಸೆಸ್ ರಮ್ಯಾ ಫೈಟ್ ಕೋರ್ಟ್‌ ಮೆಟ್ಟಿಲೇರಿದ್ದ ಸುದ್ದಿ ಎಲ್ಲರಿಗೂ ತಿಳಿದಿದೆ. ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಅಂತಿಮವಾಗಿ ಹಾಸ್ಟರ್‌ ಹುಡುಗರಿಗೆ ಜಯ ಲಭಿಸಿದೆ. ಅಲ್ಲದೆ, ನಾಳೆ ಯಾವುದೇ ತಡೆ ಇಲ್ಲದೆ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: 'ಸಂಜು' ಗಾಗಿ ಹಾಡಿದ ವಾಸುಕಿ ವೈಭವ್ ಮತ್ತು ಐಶ್ವರ್ಯ ರಂಗ ರಾಜನ್

ಹಾಸ್ಟೆಲ್ ಹುಡುಗರ ಪರ ಲಾಯರ್ ವೇಲನ್ ಅವರು ವಾದ ಮಂಡಿಸಿದರು. ನಾಳೆ ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಆಗಲಿದ್ದು, ಹಾಸ್ಟಲ್ ಹುಡುಗರಿಗೆ ಕೋರ್ಟ್‌ ಬಿಡುಗಡೆ ಭಾಗ್ಯ ಕರುಣಿಸಿದದೆ. ಈ ಚಿತ್ರದ ವಿರುದ್ದ ದೂರು ನೀಡಿದ್ದ ರಮ್ಯಾಗೆ ಹಿನ್ನಡೆಯಾಗಿದೆ.

ಹೌದು.. ತಮ್ಮ ಅನುಮತಿಯಿಲ್ಲದೆ ಚಿತ್ರದಲ್ಲಿ ತಮ್ಮ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡಿದ್ದು, ಚಿತ್ರದಿಂದ ಸೀನ್ ತೆಗೆಯುವಂತೆ ರಮ್ಯಾ ಕಮರ್ಶಿಯಲ್ ಕೋರ್ಟ್ ನಲ್ಲಿ ಕೇಸ್ ಹಾಕಿದ್ದರು. ಅಲ್ಲದೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ದೂರು ನೀಡಿದ್ದರು. ಆದ್ರೆ ರಮ್ಯಾ ಹಾಕಿದ್ದ ಕೇಸ್ ಕೋರ್ಟ್ ತೆರವುಗೊಳಿಸಿದೆ. ಇದರಿಂದ ಹಾಸ್ಟೆಲ್ ಹುಡುಗರಿಗೆ ಜಯ ಲಭಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News