Ramesh Aravind: ನಟ ರಮೇಶ್ ಅರವಿಂದ್ ರವರ ಮನಗೆದ್ದ.. ನೋಡುಗರಿಗೂ ಅಭಿಲಾಷೆಯಾದ ಆಸೆ..!

Ramesh Aravind Television Interview: ಸ್ಟಾರ್‌ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರವಾಹಿ ʻಆಸೆʼ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಸದ್ಯ ಸ್ಯಾಂಡಲ್‌ವುಡ್‌ ನಟ ರಮೇಶ್‌ ಅರವಿಂದ್‌ ಸಹ ಇಷ್ಟಪಡುತ್ತಿದ್ದಾರೆ.  

Written by - Zee Kannada News Desk | Last Updated : Jan 8, 2024, 11:56 AM IST
  • "ಆಸೆ" ಧಾರಾವಾಹಿಯು ತನ್ನ ವಿನೂತನ ಕಥಾ ಹಂದರದಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
  • ಸಾಮಾನ್ಯವಾಗಿ ಬಡಕುಟುಂಬದಲ್ಲಿ ನಡೆಯುವಂತಹ ಕಷ್ಟ, ನೋವು, ಸಂಕಟ, ಆಸೆ ಎಲ್ಲವನ್ನು ಮನಮುಟ್ಟುವಂತೆ ಈ ಧಾರಾವಾಹಿಯಲ್ಲಿ ಹೇಳಲಾಗಿದೆ.
  • "ಆಸೆ" ಧಾರಾವಾಹಿಯ ರಸಭರಿತ ಸಂಚಿಕೆಗಳು ಸೋಮ-ಶನಿ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Ramesh Aravind: ನಟ ರಮೇಶ್ ಅರವಿಂದ್ ರವರ ಮನಗೆದ್ದ.. ನೋಡುಗರಿಗೂ ಅಭಿಲಾಷೆಯಾದ ಆಸೆ..! title=

Ramesh Arvind Quote About ʻAaseʼ: ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ಪರಿವಾರಕ್ಕೆ ಸೇರ್ಪಡೆಯಾಗಿರುವ "ಆಸೆ" ಧಾರಾವಾಹಿಯು ತನ್ನ ವಿನೂತನ ಕಥಾ ಹಂದರದಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೊಂದು ಸಾಮಾನ್ಯ ಜನರ ಅಸಮಾನ್ಯ ಕಥೆ. ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ರವರು ತುಂಬಾ ಇಷ್ಟ ಪಡುತ್ತಿರುವ ಕಥೆ ಇದಾಗಿದೆ.

ಸಾಮಾನ್ಯವಾಗಿ ಬಡಕುಟುಂಬದಲ್ಲಿ ನಡೆಯುವಂತಹ ಕಷ್ಟ, ನೋವು, ಸಂಕಟ, ಆಸೆ ಎಲ್ಲವನ್ನು ಮನಮುಟ್ಟುವಂತೆ ಈ ಧಾರಾವಾಹಿಯಲ್ಲಿ ಹೇಳಲಾಗಿದೆ. ಸುಂದರ ತಾರಾ ಬಳಗವನ್ನು ಹೊಂದಿರುವ ಈ ಸೀರಿಯಲ್ ನಲ್ಲಿ ಕಲಾವಿದರಂತೂ ಅತ್ಯದ್ಭುತವಾಗಿ ನಟಿಸುತ್ತಿದ್ದಾರೆ. ಪ್ರತಿಯೊಂದು ಪಾತ್ರವು  ಅದರದ್ದೇ ಆದ ತೂಕ ಹೊಂದಿದೆ. ತಂದೆ ಪಾತ್ರದಲ್ಲಿ ನಟ ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವೇದಾಂತ್ ಪ್ರಾಣಕ್ಕೆ ಅಪಾಯ: ಅನ್ನಕ್ಕೆ ವಿಷ ಬೆರೆಸಿದ ಸುಹಾಸಿನಿ!

ಸೂರ್ಯ-ಮೀನಾರ ಕೋಳಿ ಜಗಳ ನೋಡೋದೇ ಸಿಕ್ಕಾಪಟ್ಟೆ ಮಜಾ. ಮೇಕಿಂಗ್ ವಿಚಾರದಲ್ಲಿ ಸಿನಿಮಾವನ್ನು ಮೀರಿಸುತ್ತೆ ಆಸೆ ಸೀರಿಯಲ್ ನ ಮೇಕಿಂಗ್, ಈಗಾಗಲೇ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ.

ಇದೀಗ ಕಥಾ ನಾಯಕಿ ಮೀನಾಳ ಮದುವೆ ತಯಾರಿ ನಡಿಯುತ್ತಿದೆ. ತಪ್ಪದೇ ವೀಕ್ಷಿಸಿ "ಆಸೆ" ಧಾರಾವಾಹಿಯ ರಸಭರಿತ ಸಂಚಿಕೆಗಳು ಸೋಮ-ಶನಿ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಸಂಜು weds ಗೀತಾ ಪಾರ್ಟ್ 2 ಹಾಡುಗಳಿಗೆ ಧ್ವನಿಯಾಗಲಿರುವ ಸೋನು ನಿಗಮ್‌!

'Quote from Ramesh Aravind'
"ಆಸೆ" ನನ್ನ ಮನಸಿಗೆ ತುಂಬಾ ಇಷ್ಟವಾಗಿರೋ ಧಾರಾವಾಹಿ, ಯಾಕಂದ್ರೆ ಸಾಮಾನ್ಯ ಜನರ ಅಸಮಾನ್ಯ ಕಥೆಯಂತಿರೋ ಈ ಸೀರಿಯಲ್ ನಂಗೆ ನ್ಯಾಚುರಲ್ ಫೀಲ್ ಕೊಡ್ತಿದೆ, ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ವಿಚಾರವನ್ನು ಈ ಕಥೆಯಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹೀಗಾಗಿ 'ಆಸೆ' ಸೀರಿಯಲ್ ನಂಗೆ ತುಂಬಾ ಅಚ್ಚು ಮೆಚ್ಚು.
- ನಟ ರಮೇಶ್ ಅರವಿಂದ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News