The Kerala Story : ದಿ ಕೇರಳ ಸ್ಟೋರಿ ಕುರಿತು ರಾಮ್‌ ಗೋಪಾಲ್‌ ವರ್ಮಾ ಟ್ವೀಟ್.. ಚಿತ್ರದ ಮೂಲ ಕಥೆ ಏನು?

The Kerala Story Movie: ಸಾಕಷ್ಟು ವಿವಾದಗಳನ್ನು ಸಷ್ಟಿಸಿದ್ದ, ದಿ ಕೇರಳ ಸ್ಟೋರಿ ಸಿನಿಮಾ ಈಗ ಅನೇಕರ ಮೆಚ್ಚುಗೆ ಗಳಿಸುತ್ತಿದೆ. ದಾಖಲೆಯ ಕಲೆಕ್ಷನ್‌ ಮಾಡುತ್ತಿದೆ. ದಿ ಕೇರಳ ಸ್ಟೋರಿ ಕುರಿತು ರಾಮ್‌ ಗೋಪಾಲ್‌ ವರ್ಮಾ ಟ್ವೀಟ್ ಮಾಡಿದ್ದು, ಇದು ಎಲ್ಲರ ಗಮನ ಸೆಳೆದಿದೆ.   

Written by - Chetana Devarmani | Last Updated : May 8, 2023, 11:12 AM IST
  • ಭರ್ಜರಿ ಪ್ರದರ್ಶನ ಕಾಣುತ್ತಿರುವ ʻದಿ ಕೇರಳ ಸ್ಟೋರಿʼ
  • ದಿ ಕೇರಳ ಸ್ಟೋರಿ ಕುರಿತು ರಾಮ್‌ ಗೋಪಾಲ್‌ ವರ್ಮಾ ಟ್ವೀಟ್
  • ಇದು ಎಲ್ಲರ ಗಮನ ಸೆಳೆದ ರಾಮ್‌ ಗೋಪಾಲ್‌ ವರ್ಮಾ ಮಾತು
The Kerala Story : ದಿ ಕೇರಳ ಸ್ಟೋರಿ ಕುರಿತು ರಾಮ್‌ ಗೋಪಾಲ್‌ ವರ್ಮಾ ಟ್ವೀಟ್.. ಚಿತ್ರದ ಮೂಲ ಕಥೆ ಏನು?  title=
The Kerala Story

The Kerala Story Movie: ದಿ ಕೇರಳ ಸ್ಟೋರಿ ಸಿನಿಮಾ ದೇಶಾದ್ಯಂತ ಟ್ರೆಂಡ್ ಹುಟ್ಟು ಹಾಕಿದೆ. ಕೆಲವೆಡೆ ನಿಷೇಧಾಜ್ಞೆ ಕೂಡ ಹೇರಲಾಗಿದೆ. ಕೋಮುಗಲಭೆಯನ್ನು ಪ್ರಚೋದಿಸುವ ಉದ್ದೇಶದಿಂದ ಸಿನಿಮಾ ಮಾಡಲಾಗಿದೆ ಎಂದು ಹಲವೆಡೆ ಆಕ್ರೋಶ ವ್ಯಕ್ತವಾಯಿತು. ಕೆಲವೆಡೆ ನಿರ್ಬಂಧಗಳ ನಡುವೆಯೇ ಚಿತ್ರ ಬಿಡುಗಡೆಯಾಗಿದೆ. ಆದರೆ ಈ ಸಿನಿಮಾ ಮೊದಲ ದಿನವೇ ದಾಖಲೆಯ ಕಲೆಕ್ಷನ್‌ ಮಾಡಿತು. ಎಲ್ಲೆಲ್ಲಿ ಪ್ರದರ್ಶನಗೊಂಡಿದೆ ಅಲ್ಲೆಲ್ಲ ಹೌಸ್ ಫುಲ್. ಆದರೆ ಇತ್ತೀಚಿಗೆ ಈ ಸಿನಿಮಾದ ಬಗ್ಗೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಮಾಡಿರುವ ಕಾಮೆಂಟ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ದಿ ಕೇರಳ ಸ್ಟೋರಿ ʼಹೊಸ ರೀತಿಯ ಭಯೋತ್ಪಾದನೆʼಯನ್ನು ಬಹಿರಂಗಪಡಿಸುತ್ತಿದೆ

ತಮಿಳು ಮತ್ತು ಮಲಯಾಳಿ ಹುಡುಗಿ ನಟಿಸಿರುವ.. ಗುಜರಾತಿ ನಿರ್ಮಾಪಕ.. ಬೆಂಗಾಲಿ ನಿರ್ದೇಶಕ.. ಹಿಂದಿ ಸಿನಿಮಾ.. ಈಗ ಎಲ್ಲಾ ಭಾಷೆಗಳಲ್ಲಿಯೂ ಬ್ಲಾಕ್ ಬಸ್ಟರ್.. ಟ್ರೂ ಪ್ಯಾನ್ ಇಂಡಿಯನ್ ಸಿನಿಮಾ ಎಂದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಟ್ವೀಟ್ ಮಾಡಿದ್ದಾರೆ. ಈ ಕಾಮೆಂಟ್‌ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದೀಗ ದಿ ಕೇರಳ ಸ್ಟೋರಿ ಕುರಿತು ವರ್ಮಾ ಮಾಡಿರುವ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ.

 

 

ಹಿಂದೂ ಹುಡುಗಿಯರನ್ನು ಮುಸ್ಲಿಂ ಹುಡುಗರು ಪ್ರೀತಿಯ ಹೆಸರಲ್ಲಿ ಮತಾಂತರ ಮಾಡಿ ಮದುವೆ ಮಾಡಿಕೊಂಡು ನಂತರ ಅಫ್ಘಾನಿಸ್ತಾನಕ್ಕೆ ಕರೆದೊಯ್ದು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುತ್ತಾರೆ ಎಂಬುದು ದಿ ಕೇರಳ ಸ್ಟೋರಿ ಸಿನಿಮಾದ ಮೂಲ ಕಥೆ. ಇವೆಲ್ಲ ಕೇರಳದಲ್ಲಿ ನಡೆದ ನೈಜ ಘಟನೆಗಳು. ಎಲ್ಲದಕ್ಕೂ ಸಾಕ್ಷಿ ಇದೆ ಎನ್ನುತ್ತಾರೆ ನಿರ್ಮಾಪಕರು.

ಇದನ್ನೂ ಓದಿ: ಸರಳತೆಗೆ ಇನ್ನೊಂದು ಹೆಸರೇ ಲವ್ಲಿ ಸ್ಟಾರ್‌ ಎಂದ ಫ್ಯಾನ್ಸ್‌: ಪೋಟೋಸ್‌ ನೋಡಿ

ಈ ಸಿನಿಮಾವನ್ನು ಬ್ಯಾನ್ ಮಾಡಿ, ಥಿಯೇಟರ್ ನಲ್ಲಿ ತೋರಿಸಬೇಡಿ ಎಂದು ಅಸಮಾಧಾನ ವ್ಯಕ್ತವಾಗಿತ್ತು. ಅಲ್ಲದೇ ಬ್ಯಾನ್ ಮಾಡುವಂತೆ ಕೋರ್ಟ್ ಗಳಲ್ಲಿ ಕೇಸುಗಳೂ ದಾಖಲಾಗುತ್ತಿವೆ. ಆದರೆ ಈ ಸಿನಿಮಾ ಈಗ ಜನಸಾಮಾನ್ಯರ ಬಳಿ ಹೋಗಿದೆ. ವರದಿಗಳ ಪ್ರಕಾರ, ಚಿತ್ರ ಬ್ಲಾಕ್ ಬಸ್ಟರ್ ಹಿಟ್‌ ಆಗುವ ಲಕ್ಷಣಗಳು ಕಾಣುತ್ತಿವೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದೆ. ಈ ಸಿನಿಮಾ ಭವಿಷ್ಯದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಲಿದೆ ಎಂದು ಅನೇಕರು ಊಹಿಸಿದ್ದಾರೆ. 

ಇದನ್ನೂ ಓದಿ: Aishwarya Rai : ನಟಿ ಐಶ್ವರ್ಯ ರೈ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

Trending News