ರಾಮ್ ಚರಣ್ ಸಿನಿಮಾ 'ಗೇಮ್ ಚೇಂಜರ್' ಸಾಂಗ್ ಲೀಕ್..! ಇಬ್ಬರ ಬಂಧನ ‌

Game Changer Song Leaked: ಸೆನ್ಸೇಷನಲ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ದೊಡ್ಡ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ 'ಗೇಮ್ ಚೇಂಜರ್' ಸಾಂಗ್‌ ಸದ್ಯ ಲೀಕ್‌ ಆಗಿದೆ..   

Written by - Savita M B | Last Updated : Nov 7, 2023, 11:44 AM IST
  • ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಗೇಮ್ ಚೇಂಜರ್'
  • ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಷ್ ಅವರು ಗೇಮ್ ಚೇಂಜರ್ ಅನ್ನು ನಿರ್ಮಿಸುತ್ತಿದ್ದಾರೆ.
  • ಸದ್ಯ ಈ ಚಿತ್ರದ ಸಾಂಗ್‌ ಲೀಕ್‌ ಆಗಿದ್ದು.. ಇಬ್ಬರನ್ನು ಬಂಧಿಸಲಾಗಿದೆ
ರಾಮ್ ಚರಣ್ ಸಿನಿಮಾ 'ಗೇಮ್ ಚೇಂಜರ್' ಸಾಂಗ್ ಲೀಕ್..! ಇಬ್ಬರ ಬಂಧನ ‌ title=

Game Changer: ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಗೇಮ್ ಚೇಂಜರ್' ಹಲವು ಸೂಪರ್ ಡೂಪರ್ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಣ ಸಂಸ್ಥೆ ಶ್ರೀ ವೆಂಕಟೇಶ್ವರ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. 

ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಷ್ ಅವರು ಗೇಮ್ ಚೇಂಜರ್ ಅನ್ನು ನಿರ್ಮಿಸುತ್ತಿದ್ದಾರೆ. ಆರ್‌ಆರ್‌ಆರ್‌ನಂತಹ ಸೆನ್ಸೇಷನಲ್ ಬ್ಲಾಕ್‌ಬಸ್ಟರ್ ಚಿತ್ರದ ನಂತರ ರಾಮ್ ಚರಣ್ ಅವರ ಮುಂದಿನ ಚಿತ್ರ, ಗೇಮ್ ಚೇಂಜರ್ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. 

ಇದನ್ನೂ ಓದಿ-BBK10:ʼಹುಳದ ಜೊತೆಗೆ ಮಾತನಾಡುತ್ತಿದ್ದೇನೆ’ ಎಂದ ವಿನಯ್: ರೊಚ್ಚಿಗೆದ್ದ ತನಿಷಾ!

ಮೆಗಾ ಪವರ್ ಸ್ಟಾರ್, ಸೆನ್ಸೇಷನಲ್ ಡೈರೆಕ್ಟರ್ ಮತ್ತು ಮ್ಯೂಸಿಕ್ ಸೆನ್ಸೇಷನ್ ಎಸ್.ಎಸ್.ಥಮನ್ ಜೊತೆಯಲ್ಲಿ ಮೊದಲ ಬಾರಿಗೆ ಗೇಮ್ ಚೇಂಜರ್ ಚಿತ್ರದ ಹಾಡನ್ನು ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ದೀಪಾವಳಿಯಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಚಿತ್ರತಂಡ ತಿಳಿಸಿತ್ತು. 

ಆದರೆ ಇದೀಗ ಗೇಮ್ ಚೇಂಜರ್ ಚಿತ್ರದ ಹಾಡೊಂದು ಸೋರಿಕೆಯಾಗಿದ್ದು, ಈ ಬಗ್ಗೆ ನಿರ್ಮಾಪಕ ದಿಲ್ ರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂಗ್ ಲೀಕ್ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,  ಈ ಸೋರಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಮುಂದೆ ಇಂತಹ ಸೋರಿಕೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ಓದಿ-ರಶ್ಮಿಕಾ DeepFake ವಿಡಿಯೋ ವೈರಲ್‌! ನ್ಯಾಷನಲ್‌ ಕ್ರಶ್‌ಗೆ ನಾಗ ಚೈತನ್ಯ ಬೆಂಬಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News