10 ವರ್ಷದ ಬಳಿಕ ತಂದೆಯಾಗಲಿದ್ದಾರೆ ರಾಮ್‌ಚರಣ್‌ : ಮೇಗಾ ಫ್ಯಾನ್ಸ್‌ ಫುಲ್‌ ಖುಷ್‌..!

ಟಾಲಿವುಡ್‌ ಸ್ಟಾರ್‌ ರಾಮ್ ಚರಣ್ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ರಾಮ್ ಚರಣ್ ತಂದೆಯಾಗಲಿದ್ದಾರೆ. ಅಲ್ಲದೆ, ಮೆಗಾಸ್ಟಾರ್ ಚಿರಂಜೀವಿ ಈ ಸಂತೋಷದ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಫ್ಯಾನ್ಸ್‌ ಜೊತೆ ಹಂಚಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ ಉತ್ತರಾಧಿಕಾರಿ ಅಗಮನ ಇಬ್ಬರ ಸ್ಟಾರ್‌ಗಳ ಫಾಲೋವರ್ಸ್‌ ಖುಷಿಗೆ ಕಾರಣವಾಗಿದೆ.

Written by - Krishna N K | Last Updated : Dec 12, 2022, 04:40 PM IST
  • ಟಾಲಿವುಡ್‌ ಸ್ಟಾರ್‌ ರಾಮ್ ಚರಣ್ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿ
  • ರಾಮ್ ಚರಣ್ ತಂದೆಯಾಗಲಿದ್ದು, ಚಿರಂಜೀವಿ ತಾತ ಅಗಲಿದ್ದಾರೆ
  • ಈ ಸಿಹಿ ಸುದ್ದಿಯನ್ನು ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ
 10 ವರ್ಷದ ಬಳಿಕ ತಂದೆಯಾಗಲಿದ್ದಾರೆ ರಾಮ್‌ಚರಣ್‌ : ಮೇಗಾ ಫ್ಯಾನ್ಸ್‌ ಫುಲ್‌ ಖುಷ್‌..! title=

Ram Charan upasana Parents : ಟಾಲಿವುಡ್‌ ಸ್ಟಾರ್‌ ರಾಮ್ ಚರಣ್ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ರಾಮ್ ಚರಣ್ ತಂದೆಯಾಗಲಿದ್ದಾರೆ. ಅಲ್ಲದೆ, ಮೆಗಾಸ್ಟಾರ್ ಚಿರಂಜೀವಿ ಈ ಸಂತೋಷದ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಫ್ಯಾನ್ಸ್‌ ಜೊತೆ ಹಂಚಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ ಉತ್ತರಾಧಿಕಾರಿ ಅಗಮನ ಇಬ್ಬರ ಸ್ಟಾರ್‌ಗಳ ಫಾಲೋವರ್ಸ್‌ ಖುಷಿಗೆ ಕಾರಣವಾಗಿದೆ.

ಚಿರಂಜೀವಿ ಮತ್ತು ರಾಮ್‌ಚರಣ್‌ ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ, ಆಂಜನೇಯಸ್ವಾಮಿಯ ಆಶೀರ್ವಾದದಿಂದ ತಮ್ಮ ಮನೆಗೆ ಉತ್ತರಾಧಿಕಾರಿ ಬರಲಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಸುದ್ದಿ ಮೆಗಾ ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಿದೆ. ಈ ಸುಂದರ ಸಮಯಕ್ಕಾಗಿ ಮೆಗಾ ಅಭಿಮಾನಿಗಳು ಹಲವು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದರು.

ಇದನ್ನೂ ಓದಿ: Kantara 2 : ಕಾಂತಾರ 2 ಸಿನಿಮಾಕ್ಕೆ ಅಣ್ಣಪ್ಪ ಪಂಜುರ್ಲಿ ದೈವದಿಂದ ಅನುಮತಿ

ಇನ್ನು ರಾಮ್ ಚರಣ್, ಎನ್‌ಟಿಆರ್‌, ಅಲ್ಲು ಅರ್ಜುನ್ ಎಲ್ಲರೂ ಒಂದೇ ಸಮಯದಲ್ಲಿ  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಎಲ್ಲರಿಗೂ ಮಕ್ಕಳಿದ್ದಾರೆ. ಬನ್ನಿ ಹಾಗೂ ಎನ್‌ಟಿಆರ್‌ ಮಕ್ಕಳ ಸೋಷಿಯಲ್‌ ಮೀಡಿಯಾದ ಮೂಲಕ ಸದ್ದು ಮಾಡುತ್ತಿದ್ದಾರೆ. ಆದ್ರೆ ರಾಮ್‌ ಚರಣ್‌ ಅಭಿಮಾನಿಗಳು ತಮ್ಮ ಮೇಗಾ ಪವರ್‌ ಸ್ಟಾರ್‌ ಉತ್ತರಾಧಿಕಾರಿಗಾಗಿ ಕಾತರದಿಂದ ಕಾಯುತ್ತಿದ್ದರು. ಉಪಾಸನಾ ಕೂಡ ತನ್ನ ತಾಯ್ತನದ ಬಗ್ಗೆ ಪದೇ ಪದೇ ಪ್ರಶ್ನೆಗಳಿಂದ ಅಸಹನೆ ಕಳೆದುಕೊಂಡಿದ್ದರು.

ಉಪಾಸನಾ ಗರ್ಭದ ಬಗ್ಗೆ ಹಲವು ರೀತಿಯ ಗಾಸಿಪ್ ಗಳು ಹರಿದಾಡಿದ್ದವು. ಆದರೆ ಒಮ್ಮೆ ಅವರು ಸದ್ಗುರುಗಳೊಂದಿಗೆ ಮಾತನಾಡುವಾಗ ಗರ್ಭಾವಸ್ಥೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಮಕ್ಕಳಿಲ್ಲದವರೇ ದೊಡ್ಡವರು ಎಂಬ ಸದ್ಗುರುಗಳ ಮಾತಿಗೆ ಉಪಾಸನಾ ಎದಿರೇಟು ನೀಡಿದರು. ಇದೇ ಮಾತನ್ನು ನಮ್ಮ ಮನೆಯಲ್ಲಿ ಹೇಳಿದರೆ ಬೈಯುತ್ತಾರೆ.. ತನಗೆ ಮಕ್ಕಳೆಂದರೆ ತುಂಬಾ ಇಷ್ಟ ಎಂದು ಹೇಳಿದ್ದರು.

ಇದನ್ನೂ ಓದಿ: Rajinikanth Birthday : ರಜಿನಿಗಾಗಿ 7 ದಿನ ಉಪವಾಸ ಇದ್ರು ಶ್ರೀದೇವಿ.. ಕಾರಣ ಗೊತ್ತೇ..!

ಈ ಮಧ್ಯ ಉಪಾಸನಾ ಅವರು ಯಾವಾಗ ಮಕ್ಕಳಾಗಬೇಕು ಎಂಬುದು ಅವರವರ ಆಯ್ಕೆ. ಎಲ್ಲವನ್ನು ಸಾರ್ವಜನಿಕವಾಗಿ ಹೇಳುವ ಅಗತ್ಯವಿಲ್ಲ, ಅವರು ಬಯಸಿದಾಗ ಹೇಳುತ್ತಾರೆ ಎಂದು ಹೇಳಿದ್ದರು. ಅಂತಿಮವಾಗಿ ಇಂದು ಆ ಶುಭ ಗಳಿಗೆ ಕೂಡಿ ಬಂದಿದೆ. ಉಪಾಸನಾ ತಾಯಿಯಾಗಲಿದ್ದಾರೆ ಮತ್ತು ರಾಮ್ ಚರಣ್ ತಂದೆಯಾಗಲಿದ್ದಾರೆ ಎಂದು ಚಿರಂಜೀವಿ ಘೋಷಿಸಿದರು. ಅವರು ಮೆಗಾ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಜೂನಿಯರ್ ರಾಮ್ ಚರಣ್ ಆಗಮನಕ್ಕೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News