ʼ777 ಚಾರ್ಲಿ-2ʼ ಸಿನಿಮಾದಲ್ಲಿ ನಟಿಸಲ್ಲ ಎಂದ ರಕ್ಷಿತ್‌ ಶೆಟ್ಟಿ..! ಅಸಲಿ ಕಾರಣವೇನು.?

777 Charlie 2 : ನಟ ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿದೆ. ಇತ್ತೀಚೆಗೆ 777 ಚಾರ್ಲಿ ಪಾರ್ಟ್‌-2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಸಿಂಪಲ್ ಸ್ಟಾರ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾಗ 2 ರಲ್ಲಿ ನಟಿಸುವುದಿಲ್ಲ ಅಂತ ಹೇಳಿದ್ದು, ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.

Written by - Krishna N K | Last Updated : Oct 14, 2023, 04:31 PM IST
  • ನಟ ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ
  • 777 ಚಾರ್ಲಿ ಪಾರ್ಟ್‌-2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ
  • ನಟ ರಕ್ಷಿತ್‌ ಶೆಟ್ಟಿ ಭಾಗ 2 ರಲ್ಲಿ ನಟಿಸುವುದಿಲ್ಲ ಅಂತ ಹೇಳಿದ್ದಾರೆ
 ʼ777 ಚಾರ್ಲಿ-2ʼ ಸಿನಿಮಾದಲ್ಲಿ ನಟಿಸಲ್ಲ ಎಂದ ರಕ್ಷಿತ್‌ ಶೆಟ್ಟಿ..! ಅಸಲಿ ಕಾರಣವೇನು.? title=

Rakshith Shetty : ಕಳೆದ ವರ್ಷ ತೆರೆಕಂಡ 777 ಚಾರ್ಲಿ ಸಿನಿಮಾ ಚಿತ್ರತಂಡಕ್ಕೆ ದೊಡ್ಡ ಸಕ್ಸಸ್‌ ತಂದು ಕೊಟ್ಟಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿಯಲ್ಲಿ ರಿಲೀಸ್‌ ಆಗಿತ್ತು. ಇದು ರಕ್ಷಿತ್ ಶೆಟ್ಟಿಗೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುವಂತೆ ಮಾಡಿದ ಸಿನಿಮಾ. ಅಲ್ಲದೆ, ಈ ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದಿದೆ. 

ಆಕ್ಟೋಬರ್‌ 12ರಂದು ಇನೋವೇಟಿವ್‌ ಇಂಟರ್‌ ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನಟ ರಕ್ಷಿತ್‌ ಶೆಟ್ಟಿ ಭಾಗಿಯಾಗಿದ್ದರು. ಅವರಿಗೆ ಅಲ್ಲಿ ಐಕಾನಿಕ್‌ ಸ್ಟಾರ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ನಟ ರಕ್ಷಿತ್‌ ಶೆಟ್ಟಿ, 777 ಚಾರ್ಲಿ ನನ್ನ ವೃತ್ತಿ ಜೀವನದಲ್ಲಿ ಸ್ಪೆಷಲ್‌ ಸಿನಿಮಾ, ಈ ಸಿನಿಮಾಗಾಗಿ ನನಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿದಕ್ಕೆ ಧನ್ಯವಾದಗಳು. ಮನುಷ್ಯರ ಜೊತೆ ನಟಿಸಬಹುದು. ಆದರೆ ಚಾರ್ಲಿಯ ಜೊತೆ ನಟಿಸುವುದು ಅಷ್ಟೊಂದು ಸುಲಭದ ಕೆಲಸ ಆಗಿರಲಿಲ್ಲ. 

ಇದನ್ನೂ ಓದಿ: ‘ಗನ್ಸ್ ಆಂಡ್ ರೋಸಸ್’ ಹಿಡಿದು “108ಗೆ ಫೋನ್ ಮಾಡೋ ಶಿಷ್ಯ” ಎಂದ ವಿಜಯ್ ಪ್ರಕಾಶ್!

120 ದಿನಗಳ ಚಿತ್ರೀಕರಣದಲ್ಲಿ, ಪ್ರತಿಬಾರಿಯ 40 ಟೇಕ್‌ ಮಾಡಬೇಕಿತ್ತು. ಯಾಕಂದ್ರೆ ಚಾರ್ಲಿ ಯಾವಾಗ ಚೆನ್ನಾಗಿ ಆಕ್ಟ್‌ ಮಾಡ್ತಾಳೆ ಅನ್ನೋದೆ ದೊಡ್ಡ ಸಮಸ್ಯೆಯಾಗಿತ್ತು. ಹಾಗಾಗಿ ಈ ಕೆಲಸ ತುಂಬಾ ಸವಾಲಿನಿಂದ ಕೂಡಿತ್ತು. 777 ಚಾರ್ಲಿ ಸಿನಿಮಾ ಶೂಟಿಂಗ್‌ ಕೊನೆಯಲ್ಲಿ ನಿರ್ದೇಶಕ ಕಿರಣ್‌ ರಾಜ್‌ ಚಾರ್ಲಿ-2 ಸಿನಿಮಾ ಮಾಡೋಣ ಅಂತ ಹೇಳಿದರು. ಅದಕ್ಕೆ ನಾನು ನೀವು ಪಾರ್ಟ್-2 ಮಾಡಿ ನಾನು ಬರಲ್ಲ ಎಂದು ಹೇಳಿದೆ. 

ಒಬ್ಬ ನಟನ ಜೊತೆ ನಟಿಸುವಾಗ ಎಷ್ಟು ಎಂಜಾಯ್‌ ಮಾಡ್ತೀರೋ ಚಾರ್ಲಿ ಜೊತೆ ನಟಿಸುವಾಗ ಅಷ್ಟು ಕಷ್ಟ ಪಡಬೇಕಾಗುತ್ತದೆ. ಆದರೆ ಆ ಕಷ್ಟಕ್ಕೆ ಮೆಚ್ಚುಗೆ ಬಂದಾಗ ನೋವು ಮರೆತುಹೋಗುತ್ತದೆ. ಪ್ರಾಣಿ ಹಿಂಸೆ ಮಾಡಿ ಯಾವ ಸಿನಿಮಾ ಚಿತ್ರೀಕರಣ ಮಾಡುವ ಸಾಹಸ ಬೇಡ ಎಂದು ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News