ಇಸ್ಲಾಂಗೆ ಮತಾಂತರ ಆದ್ರಾ ಕರ್ನಾಟಕದ ಸೊಸೆ?; ಹಿಜಾಬ್ ಧರಿಸಿದ ರಾಖಿ ಈಗ ಫಾತಿಮಾ..!

ಬಾಲಿವುಡ್ ನಟಿ ರಾಖಿ ಸಾವಂತ್ ಹಿಜಾಬ್‌ ಧರಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ನೆಟಿಜನ್‍ಗಳು ರಾಖಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

Written by - Puttaraj K Alur | Last Updated : Jan 16, 2023, 11:44 AM IST
  • ಮೈಸೂರು ಮೂಲದ ಆದಿಲ್ ಖಾನ್ ಜೊತೆಗೆ ಮದುವೆಯಾದ ರಾಖಿ ಸಾವಂತ್
  • ಫಾತಿಮಾ ಎಂದು ಹೆಸರು ಬದಲಿಸಿಕೊಂಡು ಹಿಜಾಬ್ ಧರಿಸಿದ ಬಾಲಿವುಡ್ ನಟಿ
  • ಆದಿಲ್ ಜೊತೆ ಮದುವೆಯಾಗಿರುವ ಮ್ಯಾರೇಜ್ ಸರ್ಟಿಫಿಕೇಟ್ ಶೇರ್ ಮಾಡಿದ ರಾಖಿ
ಇಸ್ಲಾಂಗೆ ಮತಾಂತರ ಆದ್ರಾ ಕರ್ನಾಟಕದ ಸೊಸೆ?; ಹಿಜಾಬ್ ಧರಿಸಿದ ರಾಖಿ ಈಗ ಫಾತಿಮಾ..! title=
ಇಸ್ಲಾಂಗೆ ಮತಾಂತರ ಆದ್ರಾ ಕರ್ನಾಟಕದ ಸೊಸೆ?

ಬೆಂಗಳೂರು: ಬಾಲಿವುಡ್ ನಟಿ ರಾಖಿ ಸಾವಂತ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಕಾರಣದಿಂದ ರಾಖಿ ಸಖತ್ ಟ್ರೆಂಡಿಂಗ್‍ನಲ್ಲಿದ್ದಾರೆ. ತನ್ನ ಬಾಯ್‌ಫ್ರೆಂಡ್ ಮೈಸೂರು ಮೂಲದ ಆದಿಲ್‌ನನ್ನು ಮದುವೆಯಾಗಿರುವುದಾಗಿ ಆಕೆ ಬಹಿರಂಗಪಡಿಸಿದ್ದಾಳೆ.

ರಾಖಿ ತಾನು ಆದಿಲ್‍ನನ್ನು ಮದುವೆಯಾಗಿದ್ದೇನೆ. ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿರುವುದಾಗಿಯೂ ತಿಳಿಸಿದ್ದಾನೆ. ರಾಖಿ ಅಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ನಟಿ ಹಿಜಾಬ್‌ ಧರಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ನೆಟಿಜನ್‍ಗಳು ರಾಖಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ʼUSAನಲ್ಲಿ ಮೆಗಾಸ್ಟಾರ್‌ ಅಬ್ಬರʼ : 1 ಮಿಲಿಯನ್‌ ಡಾಲರ್‌ ಗಡಿ ದಾಟಿದ ವಾಲ್ಟೇರ್‌ ವೀರಯ್ಯ..!

ಹಿಜಾಬ್‌ನಲ್ಲಿ ಕಾಣಿಸಿಕೊಂಡ ರಾಖಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾಖಿ ಸಾವಂತ್ ಹಿಜಾಬ್ ಧರಿಸಿರುವುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಆಕೆ ಕೇಸರಿ ಬಣ್ಣದ ಹಿಜಾಬ್ ಧರಿಸಿದ್ದಾಳೆ. ಇದರೊಂದಿಗೆ ಆದಿಲ್ ಜೊತೆ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋಗಳನ್ನು ಆಕೆ ಹಂಚಿಕೊಂಡಿದ್ದಾಳೆ. ಆದಿಲ್ ಜೊತೆಗಿನ ತನ್ನ ಮದುವೆ ವಿಷಯವನ್ನು ರಾಖಿ ಈ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದರು.

ರಾಖಿ ಮದುವೆಗೆ ಸಾಕ್ಷಿ  

ಈ ಹಿಂದೆ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಖಿ ತನ್ನ ಮದುವೆಯ ಸಾಕ್ಷಿ ನೀಡಿದ್ದಳು. ‘ನಾನು ಆದಿಲ್ ಜೊತೆಗೆ ಮದುವೆಯಾಗಿರುವ ಸಾಕ್ಷಿಯನ್ನು ನೀಡಿದ್ದೇನೆ. ಇದೆಲ್ಲವೂ ನಿಜ, ಮಾಧ್ಯಮದವರು ಕುರುಡರೇ, ನನ್ನ ಮದುವೆ ಬಗ್ಗೆ ನಿಮಗೆ ಡೌಟ್ ಇದ್ದರೆ ನನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿರುವ ಮ್ಯಾರೇಜ್ ಸರ್ಟಿಫಿಕೇಟ್ ನೋಡಿ. ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಬರೆಯುವ ಮುನ್ನ ಒಂದು ಸಾರಿ ಯೋಚಿಸಿ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.   ‘ನನ್ನ ಮದುವೆಯ ಬಗ್ಗೆ ನನ್ನ ತಾಯಿಗೆ ಇನ್ನೂ ತಿಳಿದಿಲ್ಲ. ನನ್ನ ಸಂಬಂಧಿಕರಿಗೆ ಮಾತ್ರ ಗೊತ್ತು. ಈ ವಿಷಯ ತಾಯಿಗೆ ತಲುಪಬಾರದು. ಈ ವಿಷಯ ನನ್ನ ತಾಯಿಗೆ ತಲುಪಿದರೆ ಏನಾಗುತ್ತೋ ಗೊತ್ತಿಲ್ಲವೆಂದು ರಾಖಿ ಹೇಳಿದ್ದಾರೆ.

ಇದನ್ನೂ ಓದಿ:  "ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೇನೂ ಅಲ್ಲ" ಎಂದು ರಾಜಮೌಳಿ ಹೇಳಿದ್ದೇಕೆ?

ಆದಿಲ್ ಜೊತೆ ಡೇಟಿಂಗ್ ಮತ್ತು ಮದುವೆ

ಮೈಸೂರಿನ ಆದಿಲ್ ಜೊತೆ ಡೇಟಿಂಗ್ ಮಾಡುತ್ತಿದ್ದ ರಾಖಿ ಸಾವಂತ್ ಕಳೆದ ವರ್ಷ ಅವರನ್ನು ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಇದರ ನಂತರ ಬಾಲಿವುಡ್ ನಟಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಜೋಡಿ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಉದ್ಯಮಿಯಾಗಿರುವ ಆದಿಲ್ ಖಾನ್ ರಾಖಿ ಸಾವಂತ್ ಗಿಂತ ತುಂಬಾ ಚಿಕ್ಕವರು. ಈ ಹಿಂದೆ ರಾಖಿ ರಿತೇಶ್ ತಮ್ಮ ಪತಿ ಎಂದು ಹೇಳಿಕೊಂಡಿದ್ದರು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News