ರಜನಿ 170ನೇ ಸಿನಿಮಾದ ಫಸ್ಟ್ ಲುಕ್‌ ಔಟ್‌ : ತಲೈವಾ ಹೊಸ ಅವತಾರಕ್ಕೆ ಫ್ಯಾನ್ಸ್‌ ಫಿದಾ

Thalaiver 170 : ʼಜೈಲರ್‌ʼ ಸಿನಿಮಾ ನಂತರ ರಜನಿಕಾಂತ್‌ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼತಲೈವರ್ 170ʼ. ಸಧ್ಯ ಈ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ತಲೈವಾ ರಜನಿ ನ್ಯೂ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Written by - Krishna N K | Last Updated : Oct 5, 2023, 01:15 PM IST
  • ರಜನಿಕಾಂತ್‌ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼತಲೈವರ್ 170ʼ.
  • ತಲೈವಾ 170ನೇ ಚಿತ್ರದ ಮೊದಲ ನೋಟವನ್ನು ಚಿತ್ರತಂಡ ಹಂಚಿಕೊಂಡಿದೆ.
  • ಈ ಚಿತ್ರವನ್ನು 'ಜೈ ಭೀಮ್' ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ.
ರಜನಿ 170ನೇ ಸಿನಿಮಾದ ಫಸ್ಟ್ ಲುಕ್‌ ಔಟ್‌ : ತಲೈವಾ ಹೊಸ ಅವತಾರಕ್ಕೆ ಫ್ಯಾನ್ಸ್‌ ಫಿದಾ title=

Rajinikanth : ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಅವರ ಮುಂಬರುವ ʼತಲೈವರ್‌ 170ʼ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಲೈಕಾ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಶೂಟಿಂಗ್‌ ಪ್ರಾರಂಭವಾಗಿದೆ. ಸಧ್ಯ ತಲೈವಾ 170ನೇ ಚಿತ್ರದ ಮೊದಲ ನೋಟವನ್ನು ಚಿತ್ರತಂಡ ಹಂಚಿಕೊಂಡಿದೆ.

ಪೋಸ್ಟರ್‌ನಲ್ಲಿ, ರಜನಿ ಕಪ್ಪು ಶರ್ಟ್ ಜೊತೆಗೆ ಕಪ್ಪು ಸನ್‌ಗ್ಲಾಸ್‌ನಲ್ಲಿ ಧರಿಸಿ ಖಡಕ್‌ ಲುಕ್‌ ಕೊಟ್ಟಿದ್ದಾರೆ. 'ತಲೈವರ್ 170' ರಜನಿಕಾಂತ್ ಅವರ 170ನೇ ಚಿತ್ರದ ತಾತ್ಕಾಲಿಕ ಶೀರ್ಷಿಕೆಯಾಗಿದೆ. ಈ ಚಿತ್ರವನ್ನು 'ಜೈ ಭೀಮ್' ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್, ತುಷಾರ ವಿಜಯನ್ ನಟಿಸಿದ್ದಾರೆ.

ಇದನ್ನೂ ಓದಿ: ನಟ ಪ್ರಭಾಸ್‌ ಕೆನ್ನೆಗೆ ಹೊಡೆದ ಯುವತಿ..! ವಿಡಿಯೋ ವೈರಲ್‌

ಇನ್ನು ವಿಶೇಷ ಅಂದ್ರೆ ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಸುಮಾರು 32 ವರ್ಷಗಳ ನಂತರ ಈ ಸಿನಿಮಾದ ಮೂಲಕ ಒಂದಾಗುತ್ತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.  ವರದಿಗಳ ಪ್ರಕಾರ, ಈ ಚಿತ್ರ ನಕಲಿ ಎನ್ಕೌಂಟರ್ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ. 

ಈ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಸಧ್ಯ ರಜನಿಕಾಂತ್ ಅವರು ತಮ್ಮ ಮಗಳು ಐಶ್ವರ್ಯಾ ರಜನಿಕಾಂತ್ ಅವರೊಂದಿಗೆ 'ಲಾಲ್ ಸಲಾಮ್' ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. 'ವಿಕ್ರಮ್' ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ರಜನಿ ನಟಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News