ʼಜೈಲರ್‌ʼ ಸಿನಿಮಾದಲ್ಲಿ ಶಿವಣ್ಣ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ : ಹೇಗಿದೆ ಗೊತ್ತಾ ರಜನಿ ಚಿತ್ರ

Jailer movie review : ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಅವರು ಜೈಲರ್‌ ಸಿನಿಮಾದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ. ನಿರ್ದೇಶಕ ನೆಲ್ಸನ್ ಈ ಸಿನಿಮಾದ ಮೂಲಕ ಮೋಡಿ ಮಾಡಿದ್ದಾರೆ. ಇಂದು ರಿಲೀಸ್‌ ಆದ ಸಿನಿಮಾ ಕುರಿತು ನೆಟ್ಟಿಗರು ಏನ್‌ ಹೇಳಿದಾರೆ ಅಂತ ತಿಳಿಯೋಣ ಬನ್ನಿ.

Written by - Krishna N K | Last Updated : Aug 10, 2023, 11:30 AM IST
  • ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಅವರು ಜೈಲರ್‌ ಸಿನಿಮಾದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ.
  • ಮೋಹನ್‌ ಲಾಲ್‌ ಮತ್ತು ಶಿವರಾಜಕುಮಾರ್‌ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
  • ಇಂದು ರಿಲೀಸ್‌ ಆದ ಜೈಲರ್‌ ಸಿನಿಮಾ ಕುರಿತು ನೆಟ್ಟಿಗರು ಏನ್‌ ಹೇಳಿದಾರೆ ಅಂತ ತಿಳಿಯೋಣ ಬನ್ನಿ.
ʼಜೈಲರ್‌ʼ ಸಿನಿಮಾದಲ್ಲಿ ಶಿವಣ್ಣ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ : ಹೇಗಿದೆ ಗೊತ್ತಾ ರಜನಿ ಚಿತ್ರ title=

Rajinikanth Jailer movie : 'ಸೂಪರ್ ಸ್ಟಾರ್' ರಜನಿಕಾಂತ್ ಅವರ ಮಾಸ್ ಆಂಡ್‌ ಕಾಮಿಡಿ ಚಿತ್ರ ʼಜೈಲರ್ʼ (ಗುರುವಾರ 10) ಬಿಡುಗಡೆಯಾಗಿದೆ. ರಜನಿ ಈ ಸಿನಿಮಾದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದು, ದಾಖಲೆ ಸೃಷ್ಟಿಸಲು ರೆಡಿಯಾಗಿದ್ದಾರೆ. 2 ವರ್ಷಗಳ ನಂತರ ಬಿಡುಗಡೆಯಾದ ರಜನಿ ಅವರ ಮೊದಲ ಚಿತ್ರ ಇದಾಗಿದ್ದು, ತೆರೆ ಮೇಲೆ ತಲೈವಾ ಅವರನ್ನು ನೋಡಲು ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ.

ಇನ್ನು ಜೈಲರ್‌ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ಶಿವ ರಾಜ್ ಕುಮಾರ್, ಸುನೀಲ್, ತಮನ್ನಾ ಭಾಟಿಯಾ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ಮೋಹನ್ ಲಾಲ್ ಅವರು ಅತಿಥಿ ಪಾತ್ರವನ್ನು ಮಾಡಿದ್ದಾರೆ. ಚಿತ್ರವನ್ನು ಸನ್ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ ಮತ್ತು ನೆಲ್ಸನ್ ನಿರ್ದೇಶಿಸಿದ್ದಾರೆ. ಜೈಲರ್‌ ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಮಿಗಳು ಈಗಾಗಲೇ ಟ್ವಿಟರ್‌ನಲ್ಲಿ ತಮ್ಮ ವಿಮರ್ಶೆಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. 

 

 

ಇದನ್ನೂ ಓದಿ: ಪಡ್ಡೆ ಹುಡುಗರ ಹಾರ್ಟ್‌ಬೀಟ್‌ ಹೆಚ್ಚಸಿದ ಜೈ ಜಗದೀಶ್‌ ಪುತ್ರಿ..ಪೋಟೋಸ್‌ ನೋಡಿ

ಜೈಲರ್ ವಿನ್ನರ್ 3.75/5 ಎಂದು ಕೆಲವು ನೆಟ್ಟಿಗರು ರೆಟಿಂಗ್‌ ನೀಡುತ್ತಿದ್ದಾರೆ. ಸಿನಿಮಾ ಸೂಪರ್‌ ಆಗಿದ್ದು, ಕ್ಯೂರಿಯಾಸಿಟಿ ಹುಟ್ಟು ಹಾಕುತ್ತೆ ಅಂತ ಎಲ್ಲಾ ನಟರು ಅತ್ಯುತ್ತಮವಾಗಿ ನಟಿಸಿದ್ದಾರೆ ಅಂತ ಹೇಳುತ್ತಿದ್ದಾರೆ. ಅಲ್ಲದೆ, ಕೆಲವರು ಮೊದಲಾರ್ಧ ಅದ್ಭುತವಾಗಿದ್ದು, ದ್ವಿತೀಯಾರ್ಧದಲ್ಲಿ ಸ್ವಲ್ಪ ಮಂದಗತಿ ಇದೆ ಅಂತ ಹೇಳುತ್ತಿದ್ದಾರೆ. ಸೂಪರ್‌ಸ್ಟಾರ್ ರಜಿನಿಕಾಂತ್ ಒನ್ ಮ್ಯಾನ್ ಶೋ, ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್ ಗೂಸ್ಬಂಪ್ಸ್ ಬರಿಸುತ್ತೆ. ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಪಾತ್ರ ಸೂಪರ್‌ ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

ಅಲ್ಲದೆ, ಅನಿರುದ್ಧ್ ಬಿಜಿಎಂ ಮತ್ತು ಹಾಡುಗಳು ಸಿನಿಮಾದ ಬೆನ್ನೆಲುಬಾಗಿವೆ. ನೆಲ್ಸನ್ ಈ ಬಾರಿ ಬಲವಾಗಿ ಪುಟಿದೇದ್ದಿದ್ದಾರೆ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ಒಟ್ಟಾರೆಯಾಗಿ ಗುರುವಾರ ತೆರೆಕಂಡ ಜೈಲರ್‌ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಸಿನಿ ಪ್ರೇಕ್ಷಕರು ಡಾ. ಶಿವರಾಜಕುಮಾರ್‌ ಮತ್ತು ರಜಿನಿಕಾಂತ್‌ ಅವರನ್ನು ಒಂದೇ ಫ್ರೇಮ್‌ನಲ್ಲಿ ನೋಡಲು ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News