ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌ವರೆಗೆ Rajinikanth ಬಗೆಗಿನ ಗೊತ್ತಿರದ ವಿಷಯಗಳಿವು

Rajinikanth Birthday: ಜನ್ಮದಿನದ ವಿಶೇಷ ಸಂದರ್ಭದಲ್ಲಿ, ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಸಂಬಂಧಿಸಿದ ಕೆಲವು ವಿಶೇಷ ಮತ್ತು ಕೇಳದ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯಿರಿ.

Written by - Yashaswini V | Last Updated : Dec 12, 2020, 03:10 PM IST
  • 1950 ರ ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಜನಿಸಿದ ರಜನಿಕಾಂತ್
  • ರಜನಿಕಾಂತ್ ಅವರ ಬಾಲ್ಯದ ಹೆಸರು ಶಿವಾಜಿ ರಾವ್ ಗಾಯಕ್ವಾಡ್
  • ಅವರ ತಂದೆ ರಾಮೋಜಿ ರಾವ್ ಗಾಯಕ್ವಾಡ್. ತಾಯಿ ಜಿಜಾಬಾಯಿ
ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌ವರೆಗೆ Rajinikanth ಬಗೆಗಿನ ಗೊತ್ತಿರದ ವಿಷಯಗಳಿವು title=
Pic Courtesy: Twitter/@arrahman

ಬೆಂಗಳೂರು: ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲೇ ತಮ್ಮದೇ ಆದ ಛಾಪು ಮೂಡಿಸಿರುವ ಖ್ಯಾತ ತಾರೆಯರಲ್ಲಿ ಒಬ್ಬರು ಸೂಪರ್ ಸ್ಟಾರ್ ರಜನೀಕಾಂತ್. ಇವರು ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಚಲನಚಿತ್ರ ತಾರೆಯರಲ್ಲಿ ಒಬ್ಬರು. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವ  ರಜನಿಕಾಂತ್ (Rajinikanth) ಅವರನ್ನು ಇಡೀ ಜಗತ್ತೇ ಸೂಪರ್‌ಸ್ಟಾರ್‌ ಎಂದು ಕರೆಯುತ್ತದೆ. ಇಂದು ಈ ಮಹಾನ್ ನಟನ ಜನ್ಮದಿನ.‌

1950 ರ ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಜನಿಸಿದ ರಜನಿಕಾಂತ್ ಅವರ ಜೀವನ ಸ್ಪೂರ್ತಿದಾಯಕವಾಗಿದೆ. ಜನ್ಮದಿನದ ವಿಶೇಷ ಸಂದರ್ಭದಲ್ಲಿ, ಸೂಪರ್ ಸ್ಟಾರ್ ರಜನಿಕಾಂತ್‌ (Superstar Rajinikanth) ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ಮತ್ತು ಈವರೆಗೆ ಬಹುತೇಕರಿಗೆ ಗೊತ್ತಿರದ ಕೆಲ ವಿಷಯಗಳನ್ನು ನಿಮ್ಮ ಮುಂದಿಡಲಾಗುತ್ತಿದೆ.

Birthday: 8 की उम्र में मां को खो दिया, फिर कंडक्टर से बन गया सुपरस्टार, जानिए Rajinikanth के Unknown Facts

- ರಜನಿಕಾಂತ್ ಅವರ ಬಾಲ್ಯದ ಹೆಸರು ಶಿವಾಜಿ ರಾವ್ ಗಾಯಕ್ವಾಡ್. 

- ಅವರ ತಂದೆ ರಾಮೋಜಿ ರಾವ್ ಗಾಯಕ್ವಾಡ್. ತಾಯಿ ಜಿಜಾಬಾಯಿ.

- ಪೊಲೀಸ್ ಕಾನ್ಸ್ಟೇಬಲ್ ರಾಮೋಜಿರಾವ್ ಗಾಯಕ್ವಾಡ್ ಅವರ ನಾಲ್ಕನೇ ಮಗು ರಜನಿಕಾಂತ್.

- ಎಂಟನೆಯ ವಯಸ್ಸಿನಲ್ಲಿ ರಜನಿಕಾಂತ್ ತಮ್ಮ ತಾಯಿಯನ್ನು ಕಳೆದುಕೊಂಡರು. 

- ರಜನಿಕಾಂತ್ ಬೆಂಗಳೂರು ಸಾರಿಗೆ ಸೇವೆಯ (ಬಿಟಿಎಸ್) ಮೈನರ್ ಬಸ್ ಕಂಡಕ್ಟರ್ ಮತ್ತು ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರು.

- ರಜನಿಕಾಂತ್ ಕಂಡಕ್ಟರ್ ಕೆಲಸವನ್ನು ತ್ಯಜಿಸಿ ಚೆನ್ನೈನ ಅಡ್ಯಾರ್ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿಕೊಂಡು ಚಲನಚಿತ್ರಗಳಲ್ಲಿ ಕೆಲಸ ಮಾಡಿದರು.

- ರಜನಿಕಾಂತ್ ಅವರ ಚಿತ್ರರಂಗ ಪ್ರವೇಶಿಸಿದ್ದು ಬಾಲಚಂದರ್ ನಿರ್ದೇಶನದ ತಮಿಳು ಚಿತ್ರ ಅಪೂರ್ವಾ ರಾಗಂಗಲ್ (1975) ಮೂಲಕ.

- ಮೊದಲ ಸಿನಿಮಾದಲ್ಲಿ‌ ರಜನಿಕಾಂತ್ ಅವರದು ಖಳನಾಯಕನ ಪಾತ್ರ. ಈ ಚಿತ್ರದ ಅಭಿನಯಕ್ಕಾಗಿ ರಜನಿಕಾಂತ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ  ಬಂತು.

- ತೆಲುಗು ಚಿತ್ರ 'ಚಿಲಕಮ್ಮ ಚೆಪ್ಪಿನಾಡಿ' (1975) ನಲ್ಲಿ ರಜನಿಕಾಂತ್ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡರು.

ಮುಖ್ಯಮಂತ್ರಿಯಾಗಲು ಎಂದಿಗೂ ಬಯಸಿಲ್ಲ, ಆದರೆ ಬದಲಾವಣೆ ಬಯಸಿರುವೆ- ರಜನಿಕಾಂತ್

- ರಜನಿಕಾಂತ್ ಬಾಲಿವುಡ್, ಹಾಲಿವುಡ್ ಸೇರಿದಂತೆ ಹಲವು ವಿದೇಶಗಳ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

rajinikanth fans wants to hire helicopter to showered flower on the ARR theatre for darbar release

- ರಜನಿಕಾಂತ್ ಅವರಿಗೆ 2000ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು ಮತ್ತು 2014ರಲ್ಲಿ ಆರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲಾಯಿತು.

ತಮಿಳುನಾಡಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ರಜನಿಕಾಂತ್ ಪಕ್ಷದ ಸ್ಪರ್ಧೆ..!

- ಬಾಲಿವುಡ್‌ನಲ್ಲಿ ಅವರು 'ಮೇರಿ ಅದಾಲತ್', 'ಜಾನ್ ಜಾನಿ ಜನಾರ್ದನ್', 'ಭಗವಾನ್ ದಾದಾ', 'ದೋಸ್ತಿ ದುಷ್ಮಾನಿ', 'ಇನ್ಸಾಫ್ ಕೌನ್ ಕರೇಗಾ', 'ಅಸಲಿ ನಕಲಿ', 'ಹಮ್', 'ಖೂನ್ ಕರ್ಜ್', 'ಕ್ರಾಂತಿಕಾರಿ', ಹಿಂದಿ ಚಿತ್ರಗಳಾದ 'ಆಂಧಾ ಕನೂನ್', 'ಚಲ್ಬಾಜ್', 'ಗಾಡ್ ಆಫ್ ಇನ್ಸಾನಿಯತ್' ವಿಶೇಷ ಸ್ಥಾನ ಪಡೆದಿವೆ.

- ರಜನಿಕಾಂತ್ ನಟ ವೈ.ಜಿ. ಮಹೇಂದ್ರನ್ ಅವರ ಪತ್ನಿ ಲತಾ ಪಾರ್ಥಸಾರಥಿಯನ್ನು 1981ರ ಫೆಬ್ರವರಿ 26ರಂದು  ಆಂಧ್ರಪ್ರದೇಶದ ತಿರುಪತಿಯಲ್ಲಿ ಮದುವೆಯಾದರು. ಆಗ ಅವರ ವಯಸ್ಸು 31 ವರ್ಷ.

- ರಜನಿಕಾಂತ್ ಅವರಿಗೆ ಐಶ್ವರ್ಯ ರಜನಿಕಾಂತ್ ಮತ್ತು ಸೌಂದರ್ಯ ರಜನಿಕಾಂತ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Trending News