ಜೈಲಿನಿಂದ ಹೊರ ಬಂದ ಇಷ್ಟು ದಿನಗಳ ನಂತರ ತನ್ನ ಬಹುದೊಡ್ಡ ನಿರ್ಧಾರ ಹೇಳಿದ ರಾಜ್ ಕುಂದ್ರಾ

ರಾಜ್ ಕುಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿದ್ದರು. ರಾಜ್ ಆಗಾಗ ತಮ್ಮ ಪತ್ನಿ ಶಿಲ್ಪಾ ಶೆಟ್ಟಿ  ಜೊತೆಗಿನ ವಿಡಿಯೋ ಮತ್ತು ಚಿತ್ರಗಳನ್ನು ಶೇರ್ ಮಾಡುತ್ತಿದ್ದರು.   

Written by - Ranjitha R K | Last Updated : Nov 2, 2021, 04:38 PM IST
  • ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದ ರಾಜ್ ಕುಂದ್ರಾ
  • ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದ ರಾಜ್ ಕುಂದ್ರಾ
  • Instagram, Twitter ಖಾತೆಗಳನ್ನು ಡಿಲೀಟ್ ಮಾಡಿರುವ ರಾಜ್ ಕುಂದ್ರಾ
ಜೈಲಿನಿಂದ ಹೊರ ಬಂದ ಇಷ್ಟು ದಿನಗಳ ನಂತರ ತನ್ನ ಬಹುದೊಡ್ಡ ನಿರ್ಧಾರ ಹೇಳಿದ ರಾಜ್ ಕುಂದ್ರಾ title=
ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದ ರಾಜ್ ಕುಂದ್ರಾ (file photo)

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ (Raj Kundra) ಅಶ್ಲೀಲ ಪ್ರಕರಣದಲ್ಲಿ ಜೈಲಿನಿಂದ ಹೊರಬಂದ ನಂತರ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಿಗೆ (Social media) ರಾಜ್ ಕುಂದ್ರಾ ವಿದಾಯ ಹೇಳಿದ್ದಾರೆ. ರಾಜ್ ಕುಂದ್ರಾ ತಮ್ಮ Instagram ಮತ್ತು Twitter ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ. ಇದೀಗ ಅವರ ಖಾತೆ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಕಾಣಿಸುವುದಿಲ್ಲ.  

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದ ರಾಜ್ ಕುಂದ್ರಾ : 
ರಾಜ್ ಕುಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ (Social media) ಬಹಳ ಸಕ್ರಿಯರಾಗಿದ್ದರು. ರಾಜ್ ಆಗಾಗ ತಮ್ಮ ಪತ್ನಿ ಶಿಲ್ಪಾ ಶೆಟ್ಟಿ (Shilpa Shetty) ಜೊತೆಗಿನ ವಿಡಿಯೋ ಮತ್ತು ಚಿತ್ರಗಳನ್ನು ಶೇರ್ ಮಾಡುತ್ತಿದ್ದರು. ಅವರ ಪೋಸ್ಟ್ ಅನ್ನು ಅಭಿಮಾನಿಗಳು ಕೂಡಾ ತುಂಬಾ ಇಷ್ಟಪಟ್ಟಿದ್ದಾರೆ. ಆದರೆ ಇದೀಗ ರಾಜ್ ಕುಂದ್ರಾ ತಮ್ಮ ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ. 

ಇದನ್ನೂ ಓದಿ : Puneeth RajKumar: ಅಪ್ಪು ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಕಿಡಿಗೇಡಿ ಬಂಧನ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನ : 
ಈ ವರ್ಷದ ಜುಲೈನಲ್ಲಿ, ಅಶ್ಲೀಲ ಚಿತ್ರ (Pornography Case) ನಿರ್ಮಾಣ ಪ್ರಕರಣದಲ್ಲಿ ಬಂಧಿತರಾದ ರಾಜ್ ಕುಂದ್ರಾ (Raj Kundra)  ಸುಮಾರು ಎರಡು ತಿಂಗಳು ಜೈಲುವಾಸ ಅನುಭವಿಸಬೇಕಾಯಿತು. ಜೈಲಿನಿಂದ ಹೊರಬಂದ ಬಳಿಕ, ರಾಜ್ ಕುಂದ್ರಾ ಇದೀಗ ನಿಧಾನವಾಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಸದ್ಯ, ರಾಜ್ ಯಾವುದೇ ರೀತಿಯ ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಇನ್ನು ರಾಜ್ ಕುಂದ್ರಾ ಅವರ ಕುಟುಂಬದೊಂದಿಗೆ ಕೂಡಾ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ, ಶಿಲ್ಪಾ ತನ್ನ ಮಕ್ಕಳಾದ ವಿಯಾನ್ ಮತ್ತು ಶಮಿಶಾ ಅವರೊಂದಿಗೆ ಅಲಿಬಾಗ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಂದರ್ಭದಲ್ಲಿಯೂ ರಾಜ್ ಕುಂದ್ರಾ ಅಲ್ಲಿರಲಿಲ್ಲ. 

 ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಜ್ ಕುಂದ್ರಾ :
 ರಾಜ್ ಕುಂದ್ರಾ ಎರಡು ತಿಂಗಳು ಜೈಲಿನಲ್ಲಿ ಕಳೆದ ನಂತರ 50,000 ರೂ.ಗಳ ವೈಯಕ್ತಿಕ ಬಾಂಡ್‌ ಮೇಲೆ ಜಾಮೀನು ಪಡೆದಿದ್ದಾರೆ. ಜುಲೈ 19 ರಂದು ಅವರನ್ನು ಬಂಧಿಸಲಾಗಿತ್ತು. 

ಇದನ್ನೂ ಓದಿ : RRR Glimpse Teaser OUT: ಮತ್ತೆ ನೆತ್ತರು ಹರಿಯಲಿದೆ, ಆಕ್ಷನ್-ಇಮೊಶನ್ ನ ಡಬಲ್ ಡೋಸ್, Bahubali ಹಿಂದೆ ಬೀಳಲಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News