ʼಚಂದ್ರಮುಖಿ 2ʼ ಟ್ರೈಲರ್ ರಿಲೀಸ್‌..! ನಿಜವಾದ ʼನಾಗವಲ್ಲಿʼ ಇವಳೆ...

Chandramukhi 2 update : ಚಂದ್ರಮುಖಿ 2 ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಈ ಸಿನಿಮಾ ರಜನಿಕಾಂತ್‌ ನಟನೆಯ ಚಂದ್ರಮುಖಿ ಸಿನಿಮಾದ ಮುಂದುವರೆದ ಭಾಗವಾಗಿದೆ. ಕನ್ನಡದಲ್ಲಿ ʼಆಪ್ತಮಿತ್ರʼ ʼಆಪ್ತರಕ್ಷಕʼ ಎಂಬ ಎರಡು ಸಿನಿಮಾಗಳು ಬಿಡುಗಡೆಯಾಗಿದ್ದವು. ಇದೀಗ ತಮಿಳು ಚಂದ್ರಮುಖಿ 2 ತೆರೆಗೆ ಬರಲು ಸಿದ್ದವಾಗಿದೆ.

Written by - Krishna N K | Last Updated : Sep 3, 2023, 06:29 PM IST
  • ಪಿ ವಾಸು ನಿರ್ದೇಶನದ ʼಚಂದ್ರಮುಖಿ 2ʼ ಟ್ರೈಲರ್ ರಿಲೀಸ್‌
  • ರಜನಿಕಾಂತ್‌ ನಟನೆಯ ಚಂದ್ರಮುಖಿ ಸಿನಿಮಾದ ಮುಂದುವರೆದ ಭಾಗ
  • ರಜನಿಕಾಂತ್‌ ಅವರ ಬದಲಿಗೆ ರಾಘವ ಲಾರೆನ್ಸ್ ನಟಿಸಿದ್ದಾರೆ.
 ʼಚಂದ್ರಮುಖಿ 2ʼ ಟ್ರೈಲರ್ ರಿಲೀಸ್‌..! ನಿಜವಾದ ʼನಾಗವಲ್ಲಿʼ ಇವಳೆ... title=

Chandramukhi 2 Trailer : ಬಹುನಿರೀಕ್ಷಿತ ಚಂದ್ರಮುಖಿ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುತ್ತಿದೆ. ಈ ಕಥೆಯು 2005 ರಲ್ಲಿ ಬಿಡುಗಡೆಯಾದ ಚಂದ್ರಮುಖಿ ಕಥೆಯ ಮುಂದುವರಿಕೆಯಾಗಲಿದೆ. ಆದರೆ, ವಡಿವೇಲು ಬಿಟ್ಟರೆ ಉಳಿದ ಪಾತ್ರವರ್ಗವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ರಜನಿಕಾಂತ್‌ ಅವರ ಬದಲಿಗೆ ರಾಘವ ಲಾರೆನ್ಸ್ ನಟಿಸಿದ್ದಾರೆ.

ಇಂದು ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಚಂದ್ರಮುಖಿ ಮೊದಲ ಭಾಗದಲ್ಲಿ ಕಾಣಿಸಿಕೊಂಡಂತೆ ಹಾವೊಂದು ಕಾಣಿಸಿಕೊಂಡಿದೆ. ಲಕ್ಷ್ಮಿ ಮೆನನ್, ರಾಧಿಕಾ, ವಡಿವೇಲು, ಸುರೇಶ್ ಚಂದ್ರ, ಸೃಷ್ಟಿ ಡಾಂಗೆ ಸೇರಿದಂತೆ ಇತರರು ಈ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಧ್ಯ ಟ್ರೈಲರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

 

ಇದನ್ನೂ ಓದಿ: ‘ಖುಷಿ’ಯ ಅಲೆಯ ಮದ್ಯ ರಕ್ಷಿತ್‌ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಗಲ್ಲಾಪೆಟ್ಟಿಗೆಗೆ ಬಂದ ಹಣವೆಷ್ಟು?  

ಚಂದ್ರಮುಖಿ ಚಿತ್ರವು 1993 ರ ಮಲಯಾಳಂನಲ್ಲಿ ಬಿಡುಗಡೆಯಾದ 'ಮಣಿಚಿತ್ರತಾರ'ದ ತಮಿಳು ರೀ-ಮೇಕ್ ಆಗಿದೆ. ಇದರಲ್ಲಿ ಚಂದ್ರಮುಖಿ ಪಾತ್ರದಲ್ಲಿ ಶೋಬನಾ ನಟಿಸಿದ್ದರು. 2005 ರ ಚಂದ್ರಮುಖಿ ಚಿತ್ರವು ಸೈಕಲಾಜಿಕಲ್ ಥ್ರಿಲ್ಲರ್ ಆಗಿತ್ತು. ಇದೀಗ ಅದರ ಎರಡನೇ ಭಾಗ ನಿಜವಾದ ಭೂತದ ಕಥೆಯಾಗಲಿದೆ ಎನ್ನಲಾಗಿದೆ.

ಆಸ್ಕರ್‌ ವಿಜೇತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕೆಲವು ವಾರಗಳ ಹಿಂದೆ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿತ್ತು. ಸಾಂಗ್‌ನಲ್ಲಿ ಕಂಗನಾ ರಣಾವತ್ ನರ್ತಕಿಯಾಗಿ ಕಾಣಿಸಿಕೊಂಡಿದ್ದರು, ಅಲ್ಲದೆ, ಬೇಟೆಗಾರ ರಾಜನಂತೆ ರಾಘವ ಲಾರೆನ್ಸ್ ಕಂಡು ಬಂದಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News