ಪುಪ್ಪ 2 ಶೂಟಿಂಗ್‌ ಸ್ಟಾರ್ಟ್‌: ಅಲ್ಲು ಅರ್ಜುನ್‌ ಸಿನಿಮಾದಲ್ಲಿ RRR ಸೀನ್‌ ರಿಪೀಟ್‌..!

ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರ ಮೆಗಾ ಹಿಟ್ ಆಗಿತ್ತು. ಇದೀಗ ಪುಷ್ಪ 2 ಚಿತ್ರದ ಶೂಟಿಂಗ್ ಶುರುವಾಗಿದ್ದು ಚರ್ಚೆಗೆ ಕಾರಣವಾಗಿದೆ. ಹೆಚ್ಚು ಪ್ರಚಾರದಲ್ಲಿರುವ ಪುಷ್ಪ 2 ಚಿತ್ರವು ರಾಮೋಜಿ ಫಿಲ್ಮ್ ಸಿಟಿಯಲ್ಲಿ ತನ್ನ ಸಂಪೂರ್ಣ ಚಿತ್ರೀಕರಣವನ್ನು ಪ್ರಾರಂಭಿಸಿದೆ. ಇದಕ್ಕಾಗಿ ವಿಶೇಷ ಸೆಟ್ ರಚಿಸಲಾಗಿದೆ. ಅದರಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ದೃಶ್ಯಗಳಲ್ಲಿ ಅಲ್ಲು ಅರ್ಜುನ್ ಇರಲಿಲ್ಲ. ಬನ್ನಿ ಡಿಸೆಂಬರ್ ನಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

Written by - Krishna N K | Last Updated : Nov 11, 2022, 01:32 PM IST
  • ಲೀಡಿಂಗ್‌ ಸ್ಟಾರ್‌ ಅಲ್ಲು ಅರ್ಜುನ್‌ ಪುಪ್ಪ 2 ಶೂಟಿಂಗ್‌ ಸ್ಟಾರ್ಟ್‌
  • ಹೈದರಾಬಾದ್‌ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಪ್ರಾರಂಭ
  • ಆರ್‌ಆರ್‌ಆರ್ ಚಿತ್ರದಲ್ಲಿನ ಹುಲಿ ಫೈಟ್‌ ಸೀನ್‌ ಪುಪ್ಪಾದಲ್ಲಿ ರಿಪೀಟ್‌
ಪುಪ್ಪ 2 ಶೂಟಿಂಗ್‌ ಸ್ಟಾರ್ಟ್‌: ಅಲ್ಲು ಅರ್ಜುನ್‌ ಸಿನಿಮಾದಲ್ಲಿ RRR ಸೀನ್‌ ರಿಪೀಟ್‌..! title=

ಬೆಂಗಳೂರು : ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರ ಮೆಗಾ ಹಿಟ್ ಆಗಿತ್ತು. ಇದೀಗ ಪುಷ್ಪ 2 ಚಿತ್ರದ ಶೂಟಿಂಗ್ ಶುರುವಾಗಿದ್ದು ಚರ್ಚೆಗೆ ಕಾರಣವಾಗಿದೆ. ಹೆಚ್ಚು ಪ್ರಚಾರದಲ್ಲಿರುವ ಪುಷ್ಪ 2 ಚಿತ್ರವು ರಾಮೋಜಿ ಫಿಲ್ಮ್ ಸಿಟಿಯಲ್ಲಿ ತನ್ನ ಸಂಪೂರ್ಣ ಚಿತ್ರೀಕರಣವನ್ನು ಪ್ರಾರಂಭಿಸಿದೆ. ಇದಕ್ಕಾಗಿ ವಿಶೇಷ ಸೆಟ್ ರಚಿಸಲಾಗಿದೆ. ಅದರಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ದೃಶ್ಯಗಳಲ್ಲಿ ಅಲ್ಲು ಅರ್ಜುನ್ ಇರಲಿಲ್ಲ. ಬನ್ನಿ ಡಿಸೆಂಬರ್ ನಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಪುಷ್ಪ 2 ಚಿತ್ರದಲ್ಲಿನ ಅದ್ಭುತ ದೃಶ್ಯಕ್ಕಾಗಿ ಚಿತ್ರತಂಡ ಥಾಯ್ಲೆಂಡ್‌ಗೆ ಹೋಗಲಿದೆಯಂತೆ. ಕಾಡಿನಲ್ಲಿ ಹುಲಿಯೊಂದಿಗೆ ಕಾದಾಡುವ ದೃಶ್ಯವನ್ನು ಥಾಯ್ಲೆಂಡ್‌ನ ಕಾಡುಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಈ ದೃಶ್ಯ ಜೂನಿಯರ್ ಎನ್ ಟಿಆರ್‌ರ ಆರ್‌ಆರ್‌ಆರ್ ಚಿತ್ರದಲ್ಲಿ ಹುಲಿ ಜೊತೆಗಿನ ಕಾದಾಟದ ದೃಶ್ಯವನ್ನು ನೆನಪಿಸುತ್ತದೆ. ಪುಷ್ಪ ಮೆಗಾ ಹಿಟ್ ಆಗುತ್ತಿದ್ದಂತೆಯೇ ಪುಷ್ಪ 2 ಅನ್ನು ಇನ್ನಷ್ಟು ದೊಡ್ಡದಾಗಿ ಮಾಡಲು ನಿರ್ದೇಶಕರು ಮತ್ತು ನಿರ್ಮಾಪಕರು ನಿರ್ಧರಿಸಿದ್ದಾರೆ. ಖರ್ಚು ಮಾಡುವ ವಿಚಾರದಲ್ಲೂ ಸುಕುಮಾರ್ ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: 'ದೂರದರ್ಶನ' ದಲ್ಲಿ ವಾಸುಕಿ ವೈಭವ್ ಚಿತ್ರಗೀತೆ.! 'ಕಣ್ಣು ಕಣ್ಣು ಕಾದಾಡುತ ಇರಲಿ' ಹಾಡು ಬಿಡುಗಡೆ

ಪುಷ್ಪ 1 ಚಿತ್ರ 2021 ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದೆ. ಈಗ ಪುಷ್ಪ 2 ಅನ್ನು ಡಿಸೆಂಬರ್ 2023 ರ ವೇಳೆಗೆ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಒಂದಷ್ಟು ಹೊಸ ಪಾತ್ರಗಳು ಸಿನಿಮಾದಲ್ಲಿ ಸೇರಿಕೊಂಡಿವೆ. ಪುಷ್ಪ 2 ಚಿತ್ರದಲ್ಲಿ ಫಹಾದ್ ಫಾಜಿಲ್, ಅನಸೂಯ, ಸುನೀಲ್, ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News