ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕೋದು ಸಮಂತಾ ಅಲ್ಲ ಶ್ರೀಲೀಲಾ: ಊ ಅಂಟವಾ..ಊಹೂಂ ಅಂಟವಾ..?

Sreeleela in Pushpa 2 Item Song : ಪುಷ್ಪ ಸಿನಿಮಾದ ಅಲ್ಲು ಅರ್ಜುನ್‌ ಗೆಟಪ್‌, ಲುಕ್‌, ಸ್ಟೈಲ್‌ ಎಲ್ಲವೂ ಪುಷ್ಪ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿದ್ದವು. ಜೊತೆಗೆ ಈ ಸಿನಿಮಾದಲ್ಲಿ ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ಅಷ್ಟೇ ಸೌಂಡ್ ಮಾಡಿತ್ತು.‌ ಇದೀಗ 'ಪುಷ್ಪ 2'ನಲ್ಲೂ ಸಮಂತಾ ಹೆಜ್ಜೆ ಹಾಕಬಹುದು ಅನ್ನೋದ ನಿರೀಕ್ಷೆಯಿತ್ತು, ಆದರೆ ಆ ಜಾಗಕ್ಕೆ ಶ್ರೀಲೀಲಾ ಹೆಸರು ಕೇಳಿ ಬರುತ್ತಿದೆ.   

Written by - Savita M B | Last Updated : Jul 29, 2023, 08:52 AM IST
  • ನಟಿ ಸಮಂತಾ ಮೊದಲ ಬಾರಿಗೆ ಐಟಂ ಸಾಂಗ್‌ ಗೆ ಹೆಜ್ಜೆ ಹಾಕಿದ್ದು ಪುಷ್ಪ ಸಿನಿಮಾದಲ್ಲಿ.
  • ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ಗೆ ಇದೀಗ ಶ್ರೀಲೀಲಾ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗುತ್ತಿದೆ.
  • 'ಪುಷ್ಪ 2'ನಲ್ಲೂ ಇಂತಹದ್ದೇ ಒಂದು ಐಟಂ ಸಾಂಗ್ ನೀಡುವ ಬಗ್ಗೆ ಚಿತ್ರತಂಡ ಯೋಚಿನೆ ಮಾಡಿದೆ
ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕೋದು ಸಮಂತಾ ಅಲ್ಲ ಶ್ರೀಲೀಲಾ: ಊ ಅಂಟವಾ..ಊಹೂಂ ಅಂಟವಾ..? title=

Pushpa-2 : ನಟಿ ಸಮಂತಾ ಮೊದಲ ಬಾರಿಗೆ ಐಟಂ ಸಾಂಗ್‌ ಗೆ ಹೆಜ್ಜೆ ಹಾಕಿದ್ದು ಪುಷ್ಪ ಸಿನಿಮಾದಲ್ಲಿ. ಆಗತಾನೇ ನಾಗಚೈತನ್ಯರಿಂದ ದೂರ ಆಗಿದ್ದ ನಟಿ ಇಂತಹದ್ದೊಂದು ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಊ ಅಂಟಾವಾ.. ಊಹೂಂ ಅಂಟಾವಾ ಅಂತಾ ಹೆಜ್ಜೆ ಹಾಕಿದ ಸ್ಯಾಮ್‌ಗೆ ಥಿಯೇಟರ್‌ನಲ್ಲಿ ಶಿಳ್ಳೆಯಗಳ ಸುರಿಮಳೆಯೇ ಸುರಿದಿತ್ತು ಜೊತೆಗೆ ಒನ್ಸ್‌ ಮೋರ್‌ ಅಂತ ಕೂಗಿರುವ ನಿದರ್ಶನಗಳೂ ಉಂಟು.

ಇನ್ನು ಪುಷ್ಪ ಸಿನಿಮಾದ ನಂತರ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಿದ್ದ ನಟ ಅಲ್ಲು ಅರ್ಜುನ್‌ ಇದೀಗ ಮತ್ತೇ ಪುಷ್ಪ 2 ಸಿನಿಮಾ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ. ಸಿನಿಮಾ ಬಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ಗೆ ಇದೀಗ ಶ್ರೀಲೀಲಾ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೆ ಅದು ನಿಜಾನಾ..? ಸುಳ್ಳಾ..? ಏನಿದು ವಿಷಯ ತಿಳಿಯಲು ಮುಂದೆ ಓದಿ...

ಇದನ್ನೂ ಓದಿ-ರಕ್ತದಲ್ಲಿ ಕಿಚ್ಚನ ಚಿತ್ರ ಬಿಡಿಸಿದ ಅಭಿಮಾನಿ..! ಸುದೀಪ್ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಪುಷ್ಪ ಸಿನಿಮಾದ  ಭರ್ಜರಿ ಯಶಸ್ಸಿಗೆ "ಊ ಅಂಟಾವಾ.. ಊಹೂಂ ಅಂಟಾವಾ" ಸಾಂಗ್‌ ಕೂಡ ಪ್ರಮುಖ ಕಾರಣವಾಗಿತ್ತು. 2021 ರಲ್ಲಿ ತೆರೆಕಂಡ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುವುದರ ಜೊತೆಗೆ ಸಖತ್‌ ಮಜಾ ಕೊಟ್ಟಿತ್ತು. ಹೀಗಾಗಿ 'ಪುಷ್ಪ 2'ನಲ್ಲೂ ಇಂತಹದ್ದೇ ಒಂದು ಐಟಂ ಸಾಂಗ್ ನೀಡುವ ಬಗ್ಗೆ ಚಿತ್ರತಂಡ ಯೋಚಿನೆ ಮಾಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

'ಪುಷ್ಪ 2' ಚಿತ್ರವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುವುದಕ್ಕೆ ಚಿತ್ರತಂಡ ಭರ್ಜರಿ ತಯಾರಿ ನಡೆಸುತ್ತಿದೆ. ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಊ ಅಂಟಾವಾದಂತಹ ಐಟಂ ಸಾಂಗ್ ಕೂಡ ಇರುತ್ತೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ. 

ಈಗಾಗಲೇ ಸದ್ದು ಮಾಡಿರುವ ಸಮಂತಾ ಮತ್ತೆ ಹೆಜ್ಜೆ ಹಾಕೋದು ಕಷ್ಟ ಎಂದು ಚಿತ್ರತಂಡ ಊಹಿಸಿರಬಹದು. ಅಲ್ಲದೇ ಸಮಂತಾ ತನ್ನ ಅನಾರೋಗ್ಯದ ವಿಚಾರವಾಗಿ ಸಾಂಗ್‌ಗೆ ಹೆಜ್ಜೆ ಹಾಕಲು ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಪುಷ್ಪ 2 ಸಿನಿಮಾದಲ್ಲಿ ಶ್ರೀಲೀಲಾ ಹೆಜ್ಜೆ ಹಾಕಲಿದ್ದಾರೆ ಅನ್ನೋ ಗುಸು ಗುಸು ಕೇಳಿ ಬರುತ್ತಿವೆ. 

ಇದನ್ನೂ ಓದಿ-Ranjani Raghavan: ಹಸಿರ ನಿಸರ್ಗ ಮಡಿಲಲ್ಲಿ ʼಕನ್ನಡತಿʼ ನಟಿ ರಂಜನಿ ರಾಘವನ್; ಫೋಟೊಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News