Puneeth Rajkumar: ಭಾನುವಾರದಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನವು ರಾಷ್ಟ್ರದ್ಯಾಂತದ ಚಿತ್ರಪ್ರೇಮಿಗಳಿಗೆ ಆಘಾತ ತಂದಿದೆ.ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿ,ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಾಗೂ ದಕ್ಷಿಣ ಭಾರತದ ಖ್ಯಾತ ದಿಗ್ಗಜರು ಹಾಗೂ ಬಾಲಿವುಡ್ ನ ಖ್ಯಾತ್ಯನಾಮರು ಸೇರಿದಂತೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Last Updated : Oct 30, 2021, 03:57 PM IST
  • ಈಗ ವಿದೇಶದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ಬೆಂಗಳೂರಿಗೆ ತಡವಾಗಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅಂತ್ಯಕ್ರಿಯೆಯನ್ನು ಭಾನುವಾರ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Puneeth Rajkumar: ಭಾನುವಾರದಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ  title=
Photo Courtesy: Twitter

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನವು ರಾಷ್ಟ್ರದ್ಯಾಂತದ ಚಿತ್ರಪ್ರೇಮಿಗಳಿಗೆ ಆಘಾತ ತಂದಿದೆ.ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿ,ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಾಗೂ ದಕ್ಷಿಣ ಭಾರತದ ಖ್ಯಾತ ದಿಗ್ಗಜರು ಹಾಗೂ ಬಾಲಿವುಡ್ ನ ಖ್ಯಾತ್ಯನಾಮರು ಸೇರಿದಂತೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈಗ ವಿದೇಶದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ಬೆಂಗಳೂರಿಗೆ ತಡವಾಗಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅಂತ್ಯಕ್ರಿಯೆಯನ್ನು ಭಾನುವಾರ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Puneeth Rajkumar No More: ‘ಚಂದನವನ’ದಿಂದ ಮರೆಯಾದ 'ದೊಡ್ಮನೆ ಹುಡ್ಗ'

"ನಟ ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ದೆಹಲಿಗೆ (ಯುಎಸ್‌ನಿಂದ) ತಲುಪಿದ್ದಾರೆ ಮತ್ತು ಇಂದು ಸಂಜೆ 7 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.ನಮ್ಮ ಸಂಪ್ರದಾಯದ ಪ್ರಕಾರ, ನಾವು ಸೂರ್ಯಾಸ್ತದ ನಂತರ ಅಂತ್ಯಕ್ರಿಯೆಯನ್ನು ಮಾಡುವುದಿಲ್ಲ. ನಾಳೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ" ಎಂದು ಅವರು ತಿಳಿಸಿದರು.

ಪುನೀತ್ ರಾಜ್‌ಕುಮಾರ್ Puneeth Rajkumar) ಅವರ ಪಾರ್ಥಿವ ಶರೀರವನ್ನು ಅವರ ತಂದೆ, ಕನ್ನಡ ಚಿತ್ರರಂಗದ ಖ್ಯಾತ ನಟ ಡಾ ರಾಜ್‌ಕುಮಾರ್ ಅವರ ಸಮಾಧಿಯ ಪಕ್ಕದಲ್ಲಿ ಇರಿಸಲಾಗುವುದು ಎನ್ನಲಾಗಿದೆ.ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.ತಮ್ಮ ನೆಚ್ಚಿನ ತಾರೆಗೆ ಅಂತಿಮ ನಮನ ಸಲ್ಲಿಸಲು ರಾಜ್ಯಾದ್ಯಂತ ಸಾವಿರಾರು ಜನರು ಹರಿದು ಬರುತ್ತಿದ್ದಾರೆ.ಅವರ ಅಭಿಮಾನಿಗಳ ಸಾಗರವು ಇಂದು ಬೆಳಿಗ್ಗೆ ಅವರ ನೆಚ್ಚಿನ ನಟನಿಗೆ ಕಣ್ಣೀರಿನ ಕಣ್ಣುಗಳ ವಿದಾಯ ಹೇಳಲು ಕ್ರೀಡಾಂಗಣಕ್ಕೆ ನೆರೆದಿದೆ.

ಇದನ್ನೂ ಓದಿ: Puneeth Rajkumar: ಅತಿಯಾದ ‘ವರ್ಕೌಟ್’ ಅಪ್ಪು ಜೀವಕ್ಕೆ ಮಾರಕವಾಯ್ತಾ..?

ಇದೇ ಆವರಣದಲ್ಲಿ ಪುನೀತ್ ರಾಜ್‌ಕುಮಾರ್ ಅವರ ತಾಯಿ ಪಾರ್ವತಮ್ಮ ಅವರ ಅಂತ್ಯಕ್ರಿಯೆ ನಡೆದಿದೆ.ಅವರ ಕುಟುಂಬದವರ ಅಪೇಕ್ಷೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.ಬೆಂಗಳೂರಿನ ನಾಗರಿಕ ಸಂಸ್ಥೆ ಮತ್ತು ಪೊಲೀಸ್ ಇಲಾಖೆ ಅಗತ್ಯ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಎಂ.ಕೆ ಸ್ಟಾಲಿನ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ದಕ್ಷಿಣ ಭಾರತದ ಇತರ ತಾರೆಯರಾದ ಮಮ್ಮುಟ್ಟಿ, ಚಿರಂಜೀವಿ, ಸೋನು ಸೂದ್, ಜೂನಿಯರ್ ಎನ್‌ಟಿಆರ್, ಸುಧೀರ್ ಬಾಬು, ಸಿದ್ಧಾರ್ಥ್ ಸೇರಿದಂತೆ ಅನೇಕ ದಿಗ್ಗಜರು ಪುನೀತ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: RIP Puneeth Rajkumar: ಕನ್ನಡಕ್ಕೊಬ್ಬನೇ ಪ್ರೀತಿಯ ಅಪ್ಪು

ಪುನೀತ್ ರಾಜ್‌ಕುಮಾರ್ ಅವರು 70 ಮತ್ತು 80 ರ ದಶಕದಲ್ಲಿ ಪ್ರೇಮದ ಕಾಣಿಕೆ (1976), ಮತ್ತು ಆರತಿ ಮುಂತಾದ ಚಲನಚಿತ್ರಗಳ ಮೂಲಕ ಬಾಲ ನಟನಾಗಿ ಪಾದಾರ್ಪಣೆ ಮಾಡಿದರು.ವಸಂತ ಗೀತೆ (1980), ಭಾಗ್ಯವಂತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983), ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು(1985) ಚಿತ್ರಗಳು ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ್ದವು. 2002 ರ ಅಪ್ಪು ಚಿತ್ರದ ಮೂಲಕ ಅವರು ನಾಯಕನಾಗಿ ಮತ್ತೊಮ್ಮೆ ಚಲನಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ್ದರು.

ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದ ಪುನೀತ್ ಅವರು ಕನ್ನಡದ ಕೋಟ್ಯಾಧಿಪತಿ ಗೇಮ್ ಶೋ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು, ಇದು ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್? ಅಥವಾ ಕೌನ್ ಬನೇಗಾ ಕರೋಡ್ಪತಿಯ ಕನ್ನಡ ಆವೃತ್ತಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News