ಫಿಲಂಫೇರ್ ನಲ್ಲಿ ಮತ್ತೆ 'ಪುನೀತ'ರಾದ 'ರಾಜಕುಮಾರ'

     

Last Updated : Jun 17, 2018, 03:42 PM IST
ಫಿಲಂಫೇರ್ ನಲ್ಲಿ ಮತ್ತೆ 'ಪುನೀತ'ರಾದ 'ರಾಜಕುಮಾರ'   title=
video grab

ಬೆಂಗಳೂರು: ಪುನೀತ್ ಅಂದ್ರೆ ಸುಮ್ನೆನಾ, ಅದು ನಟನೆಯಾಗಿರಲಿ ,ಡ್ಯಾನ್ಸ್ ಆಗಿರಲಿ, ಅಥವಾ ಹಾಡಾಗಿರಲಿ ಎಲ್ಲದರಲ್ಲಿಯೂ ಸೈನಿಕೊಂಡಿರುವ ಇವರು ದಕ್ಷಿಣ ಭಾರತದ ನಟರಲ್ಲಿ ಇವರದೇ ಆದ ಇಮೇಜ್ ನ್ನು ಸೃಷ್ಟಿಕೊಂಡಿದ್ದಾರೆ. ಪವರ್ ಸ್ಟಾರ್ ಅನಿಸಿಕೊಂಡಿರುವ ಇವರು ಎಲ್ಲ ವಿಭಾಗದಲ್ಲಿಯೂ ಕೂಡ ತಮ್ಮ ಪವರ್ ರೇಂಜ್ ಮೂಲಕ ಹೆಚ್ಚಿಸಿಕೊಳ್ಳುತ್ತಲೇ ಸಾಗಿದ್ದಾರೆ.

ಹಾಗಾದ್ರೆ ಈಗ ಇವರ ಹೊಸ ಪವರ್ ಗೆ ಕಿರೀಟವೆನ್ನುವಂತೆ 2017 ರಲ್ಲಿ ಕನ್ನಡದ ಬಾಕ್ಸ್ ಆಫಿಸ್ ನಲ್ಲಿ ಕೊಳ್ಳೆಹೊಡೆದ ಚಿತ್ರ ರಾಜಕುಮಾರ ಚಿತ್ರಕ್ಕೆ ಅತ್ಯುತ್ತಮ ನಟ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಆ ಮೂಲಕ ಒಟ್ಟು ಐದನೇ ಬಾರಿಗೆ ಫಿಲಂ ಫೇರ್ ಅವಾರ್ಡ್ ಪಡೆದ ಖ್ಯಾತಿಯನ್ನು ಪಡೆದಿದ್ದಾರೆ.

ಇದಕ್ಕೂ ಮೊದಲು 1985 ರಲ್ಲಿ  ಬೆಟ್ಟದ ಹೂ ಚಿತ್ರಕ್ಕೆ  ಉತ್ತಮ ಬಾಲನಟ ಪ್ರಶಸ್ತಿ ಪಡೆದಿದ್ದ ಪುನೀತ್ ಮುಂದೆ ನಾಯಕ ನಟನಾಗಿ ಅರಸು(2006) ಹುಡುಗರು (2011) ರಣವಿಕ್ರಮ(2015) ಈಗ ರಾಜಕುಮಾರ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.

Trending News