Puneeth Parva : ಈ ನಟಿಯ ಕೈ ಮೇಲಿದೆ ಅಪ್ಪು ಹೆಸರಿನ ಟ್ಯಾಟೂ.! ಇದಕ್ಕಿದೆ ವಿಶೇಷ ನಂಟು

Puneeth Parva : ತನ್ನ ನೆಚ್ಚಿನ ನಟನನ್ನು ನೆನಪಿಸಿಕೊಂಡು ಪುನೀತ್ ರಾಜ್‌ಕುಮಾರ್ ಹೆಸರನ್ನು ಕೈಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

Written by - Chetana Devarmani | Last Updated : Oct 23, 2022, 02:04 PM IST
  • ಈ ನಟಿಯ ಕೈ ಮೇಲಿದೆ ಅಪ್ಪು ಹೆಸರಿನ ಟ್ಯಾಟೂ
  • ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ ನಟಿ
Puneeth Parva : ಈ ನಟಿಯ ಕೈ ಮೇಲಿದೆ ಅಪ್ಪು ಹೆಸರಿನ ಟ್ಯಾಟೂ.! ಇದಕ್ಕಿದೆ ವಿಶೇಷ ನಂಟು title=
ಅಪ್ಪು ಹೆಸರಿನ ಟ್ಯಾಟೂ

Puneeth Tattoo : ನಾಗಿಣಿ 2 ನಟಿ ನಮ್ರತಾ ಗೌಡಾ ಅವರು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಂತೆ. ತನ್ನ ನೆಚ್ಚಿನ ನಟನನ್ನು ನೆನಪಿಸಿಕೊಂಡು ಪುನೀತ್ ರಾಜ್‌ಕುಮಾರ್ ಹೆಸರನ್ನು ಕೈಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಮ್ರತಾ ಗೌಡ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿ, ತಮ್ಮ ನೆಚ್ಚಿನ ನಟನಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಚಿತ್ರದಲ್ಲಿ, ಅವರು ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡಬಹುದು. 

ಇದನ್ನೂ ಓದಿ : ʼಕಾಂತಾರʼ ವಾಹ್! ಅದ್ಭುತ : ರಿಷಬ್‌ ‘ಮಾಸ್ಟರ್‌ ಪೀಸ್’ಎಂದ ʼದಿ ಕಾಶ್ಮೀರ್‌ ಫೈಲ್ಸ್‌ʼ ಡೈರೆಕ್ಟರ್‌..!

ನಮ್ರತಾ ಈ ಪ್ರಕ್ರಿಯೆಯ ವಿವರವಾದ  ವಿಡಿಯೋವನ್ನು ಸಹ ಮಾಡಿದ್ದಾರೆ ಮತ್ತು ಅದನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಹಚ್ಚೆ ಹಾಕಿಸಿಕೊಳ್ಳಲು ಬೆಂಗಳೂರಿನ ಜನಪ್ರಿಯ ಟ್ಯಾಟೂ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಯೂಟ್ಯೂಬ್‌ನಲ್ಲಿ ಅವರ ಈ ವಿಡಿಯೋ 5.2 ಕೆ ಲೈಕ್ಸ್ ಮತ್ತು 139 ಕೆ ವೀಕ್ಷಣೆಗಳನ್ನು ಪಡೆದುಕೊಂಡಿದೆ. 

 

 

ಪುನೀತ್‌ ರಾಜ್‌ಕುಮಾರ್‌ ಇಹಲೋಕ ತ್ಯಜಿಸಿ ಇದೇ ತಿಂಗಳ 29ಕ್ಕೆ ಒಂದು ವರ್ಷ ಕಳೆಯಲಿದೆ. ಈ ಹಿನ್ನೆಲೆ ಕನ್ನಡ ಕಿರುತೆರೆ ಗಣ್ಯರು ಪುನೀತ್ ರಾಜ್ ಕುಮಾರ್ ಅವರಿಗೆ ಹಲವು ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಲ್ಲದೇ ಅ.28 ರಂದು ಅಪ್ಪು ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿ ಸಿನಿಮಾ ಬಿಡುಗಡೆಯಾಲಿದ್ದು, ಶುಕ್ರವಾರ ಪುನೀತ್‌ ಪರ್ವ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನೆರವೇರಿತು. 

ಇದನ್ನೂ ಓದಿ : Puneeth Parva : ʼಕನ್ನಡ ಇರೋವರೆಗೂ ಕನ್ನಡಾಭಿಮಾನಿಗಳ ಹೃದಯದಲ್ಲಿ ಅಪ್ಪು ಅಮರʼ

2007 ರಲ್ಲಿ, ನಮ್ರತಾ ಪುನೀತ್ ರಾಜ್‌ಕುಮಾರ್ ಅವರ ಮಿಲನ ಚಿತ್ರದಲ್ಲಿ ನಟಿಸಿದ್ದರು. ಅವರು ಬಾಲ ಕಲಾವಿದೆಯಾಗಿ ಚಿತ್ರದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಚಿತ್ರದಲ್ಲಿ ಜನಪ್ರಿಯ ನಟ ಸಿಹಿ ಕಹಿ ಚಂದ್ರು ಅವರ ಮಗಳಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಕನ್ನಡ ಧಾರವಾಹಿ ನಾಗಿಣಿ 2 ನಲ್ಲಿ ಶಿವಾನಿ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸಿದ ನಂತರ ಅವರು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಪುಟ್ಟ ಗೌರಿ ಮದುವೆ ಮತ್ತು ಕೃಷ್ಣ ರುಕ್ಮಿಣಿ ಸೀರಿಯಲ್‌ಗಳಲ್ಲಿಯೂ ನಟಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News