Bollywood News: ರೇಖಾಗೆ ಹಿಂದಿ ಚಿತ್ರೋದ್ಯಮದಲ್ಲಿ ಬ್ರೇಕ್ ನೀಡಿದ ಚಿತ್ರ ನಿರ್ಮಾಪಕ ಕುಲ್ಜೀತ್ ಪಾಲ್ ಇನ್ನಿಲ್ಲ

Kuljit Pal Passed Away: ರೇಖಾಳ ಪ್ರತಿಭೆಯನ್ನು ಗುರುತಿಸಿ ಆಕೆಗೆ ಹಿಂದಿ ಚಿತ್ರರಂಗದಲ್ಲಿ ಬ್ರೇಕ್ ನೀಡಿದವರಲ್ಲಿ ಕುಲ್ಜೀತ್ ಕೂಡ ಒಬ್ಬರು.  

Written by - Nitin Tabib | Last Updated : Jun 25, 2023, 04:26 PM IST
  • ಕುಲ್ಜಿತ್ ಪಾಲ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಮಧ್ಯಾಹ್ನ ಸಾಂತಾಕ್ರೂಜ್ ಸ್ಮಶಾನದಲ್ಲಿ ನೆರವೇರಿಸಲಾಗುವುದು.
  • ಈ ಹಿರಿಯ ಚಲನಚಿತ್ರ ನಿರ್ಮಾಪಕ ಜಗತ್ತಿಗೆ ವಿದಾಯ ಹೇಳಿದ ನಂತರ ಚಿತ್ರರಂಗದಲ್ಲಿ ಶೋಕದ ಅಲೆ ಎದ್ದಿದೆ,
  • ಅನೇಕ ದೊಡ್ಡ ಹಿರಿಯ ತಾರೆಯರು ಕುಲ್ಜೀತ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
Bollywood News: ರೇಖಾಗೆ ಹಿಂದಿ ಚಿತ್ರೋದ್ಯಮದಲ್ಲಿ ಬ್ರೇಕ್ ನೀಡಿದ ಚಿತ್ರ ನಿರ್ಮಾಪಕ ಕುಲ್ಜೀತ್ ಪಾಲ್ ಇನ್ನಿಲ್ಲ title=

Kuljit Pal Passed Away: ಖ್ಯಾತ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕುಲ್ಜಿತ್ ಪಾಲ್ ಅವರು ಶನಿವಾರ 90 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕುಲ್ಜೀತ್ ದೀರ್ಘಕಾಲದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಅವರು ಜೂನ್ 24 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದೇ ಕುಲ್ಜೀತ್ ಪಾಲ್, ಬಾಲಿವುಡ್ ಹಿರಿಯ ನಟಿ ರೇಖಾ ಅವರಿಗೆ ತಮ್ಮ ಚಿತ್ರದಲ್ಲಿ ಬ್ರೇಕ್ ಕೊಟ್ಟಿದ್ದರು.

ಇದನ್ನೂ ಓದಿ-Virushka Net Worth: ಅನುಷ್ಕಾ ಶರ್ಮಾ - ವಿರಾಟ್ ಕೊಹ್ಲಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಕುಲ್ಜಿತ್ ಪಾಲ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಮಧ್ಯಾಹ್ನ ಸಾಂತಾಕ್ರೂಜ್ ಸ್ಮಶಾನದಲ್ಲಿ ನೆರವೇರಿಸಲಾಗುವುದು. ಈ ಹಿರಿಯ ಚಲನಚಿತ್ರ ನಿರ್ಮಾಪಕ ಜಗತ್ತಿಗೆ ವಿದಾಯ ಹೇಳಿದ ನಂತರ ಚಿತ್ರರಂಗದಲ್ಲಿ ಶೋಕದ ಅಲೆ ಎದ್ದಿದೆ, ಅನೇಕ ದೊಡ್ಡ ಹಿರಿಯ ತಾರೆಯರು ಕುಲ್ಜೀತ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಅವರು ಪರಮಾತ್ಮ (1978), ದೋ ಶಿಕಾರಿ (1979), ಅರ್ಥ್ (1982), ಆಜ್ (1987), ಮತ್ತು ಆಶಿಯಾನ (1986) ಮುಂತಾದ ಹಿಟ್ ಚಲನಚಿತ್ರಗಳನ್ನು ನಿರ್ಮಿಸಿದ್ದರು.

ಇದನ್ನೂ ಓದಿ-AAP ಅನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದ ವರಿಷ್ಠ ಕಾಂಗ್ರೆಸ್ ಮುಖಂಡ

ಆಂಗ್ಲ ಮಾಧ್ಯಮದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಕುಲ್ಜೀತ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರು ವಯೋಸಹಜ ಕಾಯಿಲೆಗೆ ಗುರಿಯಾಗಿದ್ದರು ಎನ್ನಲಾಗಿದೆ. ವರದಿಯ ಪ್ರಕಾರ, ರೇಖಾಳ ಪ್ರತಿಭೆಯನ್ನು ಗುರುತಿಸಿದ ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಅವಳಿಗೆ ಬ್ರೇಕ್ ನೀಡಿದವರಲ್ಲಿ ಕುಲ್ಜೀತ್ ಕೂಡ ಒಬ್ಬರು. ಆದರೆ, ಚಿತ್ರ ಪೂರ್ಣಗೊಳ್ಳದೆ ಮಧ್ಯದಲ್ಲಿಯೇ ನಿಲ್ಲಿಸಲಾಯಿತು. ಪಾಲ್ ತಮ್ಮ  ಮಗಳು ಅನು ಪಾಲ್ ಗೂ ಕೂಡ ಚಿತ್ರರಂಗಕ್ಕೆ ಪರಿಚಯಿಸಿದರು ಮತ್ತು ಅವರು 'ಆಜ್' ಚಿತ್ರದಲ್ಲಿ ನಟಿಸಿದರು ಎಂದು ಹೇಳಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News