Samantha: ಮುಖ ಕಿತ್ತೋಗಿದೆ, ಹಣಕ್ಕಾಗಿ ಅರೆಬೆತ್ತಲೆ ಕುಣಿತಾಳೆ.. ಸಮಂತಾಳನ್ನು ಹೀಯಾಳಿಸಿದ ನಿರ್ಮಾಪಕ

Producer Chittibabu on Samantha : ಟಾಲಿವುಡ್‌ ನಿರ್ಮಾಪಕರೊಬ್ಬರು ಸಮಂತಾ ವಿಚಾರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಸಮಂತಾ ಅನಾರೋಗ್ಯ, ಅಳು ಎಲ್ಲವೂ ಪ್ರಚಾರದ ಗಿಮಿಕ್‌ ಎಂದಿದ್ದಾರೆ. ಸಮಂತಾ ವೃತ್ತಿಜೀವನ ಮುಗಿದು ಹೋಗಿದೆ ಎಂದಿದ್ದಾರೆ.  

Written by - Chetana Devarmani | Last Updated : Apr 15, 2023, 12:59 PM IST
  • ಸಮಂತಾ ವೃತ್ತಿಜೀವನ ಮುಗಿದು ಹೋಗಿದೆ
  • ಮುಖ ಕಿತ್ತೋಗಿದೆ, ಹಣಕ್ಕಾಗಿ ಅರೆಬೆತ್ತಲೆ ಕುಣಿತಾಳೆ
  • ಸಮಂತಾಳನ್ನು ಹೀಯಾಳಿಸಿದ ನಿರ್ಮಾಪಕ
Samantha: ಮುಖ ಕಿತ್ತೋಗಿದೆ, ಹಣಕ್ಕಾಗಿ ಅರೆಬೆತ್ತಲೆ ಕುಣಿತಾಳೆ.. ಸಮಂತಾಳನ್ನು ಹೀಯಾಳಿಸಿದ ನಿರ್ಮಾಪಕ    title=
Samantha

Samantha: ಶಾಕುಂತಲಂ ಚಿತ್ರದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗುಣಶೇಖರ್ ನಿರ್ದೇಶನದ ಈ ಚಿತ್ರ ನಿನ್ನೆ (ಏಪ್ರಿಲ್ 14) ತೆರೆಗೆ ಅಪ್ಪಳಿಸಲಿದೆ. ಶಾಕುಂತಲಂ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸಮಂತಾ ತಮ್ಮ ಅನಾರೋಗ್ಯದಿಂದ ಒಟ್ಟ ಕಷ್ಟ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದರು. ತನಗೆ ಜ್ವರವಿದೆ ಮತ್ತು ಧ್ವನಿಯೂ ಕಳೆದುಹೋಗಿದೆ ಎಂದು ಟ್ವಿಟರ್‌ನಲ್ಲಿ ಹೇಳಿದ್ದರು. ಈ ಕಾರಣದಿಂದ ಅಭಿಮಾನಿಗಳು ಆಕೆ ಶೀಘ್ರ ಗುಣಮುಖರಾಗಲಿ ಎಂದು ಆಶಿಸಿದ್ದರು. 

ಇದೆಲ್ಲ ನಾಟಕ ಎಂದು ಜನಪ್ರಿಯ ನಿರ್ಮಾಪಕ ಚಿಟ್ಟಿಬಾಬು ಸಮಂತಾ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಪ್ರತಿ ಬಾರಿಯೂ ಡ್ರಾಮಾ ವರ್ಕೌಟ್ ಆಗಿಲ್ಲ ಎಂದಿದ್ದಾರೆ. "ವಿಚ್ಛೇದನದ ನಂತರ ಸಮಂತಾ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ದಾರೆ. ಬದುಕಿಗಾಗಿ ನಟಿಸಿದ್ದಾರೆ. ನಾಯಕಿಯ ಮಟ್ಟದಿಂದ ಕೆಳಗಿಳಿದ ನಂತರ ಕೈಲಾದಷ್ಟು ಮಾಡುತ್ತಾ ಮುಂದೆ ಸಾಗುತ್ತಿದ್ದಾಳೆ. ಆದರೆ, ನಾಯಕಿಯಾಗಿ ಸಮಂತಾ ವೃತ್ತಿಜೀವನ ಮುಗಿದು ಹೋಗಿದೆ. ಆಕೆಗೆ ಇನ್ನೆಂದೂ ಸ್ಟಾರ್ ಪಟ್ಟ ಸಿಗಲ್ಲ" ಎಂದು ಕುಟುಕಿದ್ದಾರೆ. 

ಇದನ್ನೂ ಓದಿ : Manvita Kamath : ನಟಿ ಮಾನ್ವಿತಾ ಕಾಮತ್‌ ತಾಯಿ ನಿಧನ

ನಾನು ಸಾಯುವ ಮೊದಲು ಈ ಯೋಜನೆಯನ್ನು ಪೂರ್ಣಗೊಳಿಸಲು ಬಯಸುತ್ತೇನೆ ಎಂದು ಸಮಂತಾ ಹೇಳಿದ್ದಳು. ಈ ನಾಟಕಗಳೇಕೆ? ಪ್ರತಿ ಬಾರಿಯೂ ಸೆಂಟಿಮೆಂಟ್ ವರ್ಕೌಟ್ ಆಗಲ್ಲ. ನಿಮಗೆ ಕಥೆ ಮತ್ತು ಅಭಿನಯ ಇಷ್ಟವಾದಲ್ಲಿ ಸಿನಿಮಾ ನೋಡಿ. ಆದರೆ ಅಯ್ಯೋ, ಅವಳ ಕೊನೆಯ ಆಸೆಯಂತೆ ಎಂದು ಅವಳು ಮಾತನಾಡುವುದನ್ನು ಕೇಳಿ ಯಾರೂ ಸಿನಿಮಾ ನೋಡುವುದಿಲ್ಲ. ಇವೆಲ್ಲ ಹುಚ್ಚುತನ. ಸಮಂತಾ ಪ್ರತಿ ಬಾರಿಯೂ ಸೆಂಟಿಮೆಂಟ್ ಡ್ರಾಮಾ ಮಾಡುತ್ತಾರೆ. ಆದರೆ, ನಾಯಕಿಯ ಮಟ್ಟದಿಂದ ಕೆಳಗೆ ಬಿದ್ದ ಹುಡುಗಿ ಶಾಕುಂತಲಂ ಚಿತ್ರಕ್ಕೆ ಹೇಗೆ ಸೆಟ್ಟೇರುತ್ತಾಳೆ ಎಂಬುದು ದೊಡ್ಡ ಪ್ರಶ್ನೆ. ಈ ಚಿತ್ರದ ಬಗ್ಗೆ ನನಗೆ ಮಾತ್ರ ಆಸಕ್ತಿ ಇಲ್ಲ ಎಂದಿದ್ದಾರೆ ಚಿಟ್ಟಿಬಾಬು.

ಶಾಕುಂತಲೆ ಅಪ್ರತಿಮ ಸುಂದರಿ. ಆ ಪಾತ್ರಕ್ಕೆ ಸಮಂತಾ ಸೂಟ್‌ ಆಗಲ್ಲ. ಸಮಂತಾ ಮುಖ ಕಿತ್ತುಹೋಗಿದೆ. ಜನರನ್ನು ಸೆಳೆಯಲು ನಾನು ಸತ್ತುಹೋಗುತ್ತೇನೆ ಎಂದು ಎಮೋಷನಲ್‌ ಹೈ ಡ್ರಾಮಾ ಮಾಡ್ತಿದ್ದಾರೆ. ಈ ಹಿಂದೆ ಯಾವುದೋ ಸಿನಿಮಾಕ್ಕೆ ಬೆಡ್ ಮೇಲೆ ಮಲಗಿ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದಿದ್ದಳು. ಇದೆಲ್ಲಾ ಪ್ರಚಾರದ ಗಿಮಿಕ್ ಅಷ್ಟೇ. ಸಮಂತಾ ಟಾಪ್ ಹೀರೋಯಿನ್ ಪಟ್ಟದಿಂದ ಕೆಳಗೆ ಬಿದ್ದು ತುಂಬಾ ದಿನ ಕಳೆದಿದೆ. ಅದಕ್ಕೆ ಪುಷ್ಪ ಸಿನಿಮಾದಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣಕ್ಕಾಗಿ ಹೀಗೆ ಮಾಡಿದ್ದಾಳೆ ಎಂದು ಹೀಯಾಳಿಸಿದ್ದಾರೆ. 

ಇದನ್ನೂ ಓದಿ : ಈ ಖ್ಯಾತ ನಟನೊಂದಿಗೆ ನಿಶ್ಚಯವಾಗಿತ್ತು ಹೇಮಾ ಮಾಲಿನಿ ಮದುವೆ! ಸಂಬಂಧ ಮುರಿದು ಬಿದ್ದಿದ್ಯಾಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News