priyanka chopra : ಮಗಳ ಜೊತೆ ಕ್ರಿಸ್‌ಮಸ್ ಸೆಲೆಬ್ರೇಟ್‌ ಮಾಡಲು ವಿದೇಶಕ್ಕೆ ಹೊರಟ ಪ್ರಿಯಾಂಕ..!

Priyanka Chopra : ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಯೂನಿವರ್ಸ್‌ ಲೆವೆಲ್‌ನಲ್ಲಿ ಮಿಂಚುತ್ತಿದ್ದಾಳೆ. ನಿಕ್ಕಿ ಜೊನಸ್‌ ಜೊತೆ ಮದುವೆ ಆದ್ಮೇಲೆ ಇಂಡಿಯಾ ಬಿಟ್ಟು ವಿದೇಶದಲ್ಲಿ ಹೆಚ್ಚಾಗಿ ಕಾಣುತ್ತಿರುವ ನಟಿ ಸಾಲು ಸಾಲು ಹಾಲಿವುಡ್‌, ಬಾಲಿವುಡ್‌ ಸಿನಿಮಾಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಆ ವಿಚಾರ ಬಿಡಿ ಸದ್ಯ ಪಿಂಕಿ ತಮ್ಮ ಮಗಳ ಜೊತೆ ಕಾಲ ಕಳೆಯುತ್ತಿದ್ದು ಕ್ರಿಸ್‌ಮಸ್‌ ಸೆಲೆಬ್ರೇಟ್‌ ಮಾಡೋಕೆ ಅಂತ ವಿಮಾನದಲ್ಲಿ ಮಗಳ ಜೊತೆ ಪ್ರಯಾಣ ಬೆಳೆಸಿದ್ದಾರೆ.

Written by - Krishna N K | Last Updated : Dec 18, 2022, 06:53 PM IST
  • ಪ್ರಿಯಾಂಕ ನಿಕ್ಕಿ ಜೊನಸ್‌ ಜೊತೆ ಮದುವೆ ಆದ್ಮೇಲೆ ಇಂಡಿಯಾ ಬಿಟ್ಟು ವಿದೇಶದಲ್ಲಿ ಹೆಚ್ಚಾಗಿ ಕಾಣುತ್ತಿದ್ದಾರೆ.
  • ನಟಿ ಪಿಂಕಿ ಬಾಲಿವುಡ್‌ ಮತ್ತು ಹಾಲಿವುಡ್‌ ಸಿನಿಮಾಗಳಲ್ಲಿಯೂ ಸಕ್ರಿಯರಾಗಿದ್ದಾರೆ.
  • ಸದ್ಯ ಪಿಂಕಿ ತಮ್ಮ ಮಗಳ ಜೊತೆ ಕಾಲ ಕಳೆಯುತ್ತಿದ್ದು ಕ್ರಿಸ್‌ಮಸ್‌ ಸೆಲೆಬ್ರೇಟ್‌ ಮಾಡೋಕೆ ಅಂತ ವಿಮಾನದಲ್ಲಿ ಮಗಳ ಜೊತೆ ಪ್ರಯಾಣ ಬೆಳೆಸಿದ್ದಾರೆ.
priyanka chopra : ಮಗಳ ಜೊತೆ ಕ್ರಿಸ್‌ಮಸ್ ಸೆಲೆಬ್ರೇಟ್‌ ಮಾಡಲು ವಿದೇಶಕ್ಕೆ ಹೊರಟ ಪ್ರಿಯಾಂಕ..! title=

Priyanka Chopra Daughter : ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಯೂನಿವರ್ಸ್‌ ಲೆವೆಲ್‌ನಲ್ಲಿ ಮಿಂಚುತ್ತಿದ್ದಾಳೆ. ನಿಕ್ಕಿ ಜೊನಸ್‌ ಜೊತೆ ಮದುವೆ ಆದ್ಮೇಲೆ ಇಂಡಿಯಾ ಬಿಟ್ಟು ವಿದೇಶದಲ್ಲಿ ಹೆಚ್ಚಾಗಿ ಕಾಣುತ್ತಿರುವ ನಟಿ ಸಾಲು ಸಾಲು ಹಾಲಿವುಡ್‌, ಬಾಲಿವುಡ್‌ ಸಿನಿಮಾಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಆ ವಿಚಾರ ಬಿಡಿ ಸದ್ಯ ಪಿಂಕಿ ತಮ್ಮ ಮಗಳ ಜೊತೆ ಕಾಲ ಕಳೆಯುತ್ತಿದ್ದು ಕ್ರಿಸ್‌ಮಸ್‌ ಸೆಲೆಬ್ರೇಟ್‌ ಮಾಡೋಕೆ ಅಂತ ವಿಮಾನದಲ್ಲಿ ಮಗಳ ಜೊತೆ ಪ್ರಯಾಣ ಬೆಳೆಸಿದ್ದಾರೆ.

ಪ್ರಿಯಾಂಕ ಆಗಾಗ ತಮ್ಮ ಮಗಳು ಮಾಲ್ಟಿ ಮೇರಿ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೂ ಇದುವರೆಗೂ ಮಾಲ್ಟಿ ಮುಖವನ್ನು ಬಹಿರಂಗಪಡಿಸಿಲ್ಲ. ಇತ್ತೀಚೆಗೆ, ಕ್ರಿಸ್‌ಮಸ್ ಆಚರಣೆಗೆಂದು ಪ್ರಿಯಾಂಕಾ ಅವರು ತಮ್ಮ ಮಗಳೊಂದಿಗೆ ವಿಮಾನದಲ್ಲಿ ಹೊರಟಿದ್ದ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅಲ್ಲದೆ, "ನಾವು ಹೋಗುತ್ತೇವೆ" ಅಂತ ಶೀರ್ಷಿಕೆ ನೀಡಿದ್ದರು. ಫೋಟೋದಲ್ಲಿ, ಪ್ರಿಯಾಂಕಾ ಕಪ್ಪು ಉಡುಪನ್ನು ಧರಿಸಿದ್ದಾರೆ. ಮಾಲ್ಟಿಮೇರಿ ಬಿಳಿ ಅಂಗಿ ಹಾಕಿಕೊಂಡಿದ್ದಾಳೆ. ಇಬ್ಬರೂ ವಿಮಾನದ ಕಿಟಕಿಯಿಂದ ಹೊರಗೆ ನೋಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ಆದ್ರೆ ಅಮ್ಮ ಮಗಳು ಎಲ್ಲಿಗೆ ಹೋಗ್ತಿದಾರೆ ಅಂತ ಹೇಳಿಲ್ಲ.

ಇದನ್ನೂ ಓದಿ: Deepika Padukone : ಅಸೆಂಬ್ಲಿವರೆಗೂ ಹೊಯ್ತು ದೀಪಿಕಾ ಕೇಸರಿ ಬಿಕಿನಿ.. ಚಳಿಗಾಲ ಅದಿವೇಶನದಲ್ಲಿ ಚರ್ಚೆ..!

ಮಾಲ್ಟಿ ಮೇರಿ ಪ್ರಿಯಾಂಕಾ ಮತ್ತು ಪಾಪ್‌ ಗಾಯಕ ನಿಕ್ ಜೋನಾಸ್ ಅವರ ಮೊದಲ ಮಗು. ಪ್ರಿಯಾಂಕಾ ಮತ್ತು ಗಾಯಕ ನಿಕ್ ಜೋನಾಸ್ 2018 ರ ಡಿಸೆಂಬರ್ 1 ಮತ್ತು 2 ರಂದು ಜೋಧ್‌ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ನಂತರ, ದಂಪತಿಗಳು ದೆಹಲಿ ಮತ್ತು ಮುಂಬೈನಲ್ಲಿ ಎರಡು ಆರತಕ್ಷತೆಗಳನ್ನು ಸಹ ಆಯೋಜಿಸಿದ್ದರು. ಜನವರಿ 2022 ರಲ್ಲಿ, ಮೇರಿಯನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿರುವುದಾಗಿ ಘೋಷಿಸಿದರು.

ಈ ಮಧ್ಯ, ಕೆಲಸದ ಮುಂಭಾಗದಲ್ಲಿ, ಪ್ರಿಯಾಂಕಾ ಅಂತರರಾಷ್ಟ್ರೀಯ ಯೋಜನೆಗಳಾದ ʼಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿʼ ಮತ್ತು ʼಸಿಟಾಡೆಲ್ʼ ಸರಣಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರುಸ್ಸೋ ಬ್ರದರ್ಸ್ ನಿರ್ಮಿಸಿದ ʼಸಿಟಾಡೆಲ್ʼ ಪ್ರೈಮ್ ಒಟಿಟಿಗೆ ಬರಲಿದೆ. ಬಾಲಿವುಡ್‌ನಲ್ಲಿ, ಫರ್ಹಾನ್ ಅಖ್ತರ್‌ನ ʼಜೀ ಲೇ ಜರಾʼದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News