ಶಾರುಖ್ ಖಾನ್ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆ ಆಗಿದ್ರಾ?

Priyanka Chopra: ಶಾರುಖ್ ಖಾನ್ ಒಮ್ಮೆ ಪ್ರಿಯಾಂಕಾ ಚೋಪ್ರಾ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ್ದರು.

Written by - Chetana Devarmani | Last Updated : Dec 6, 2023, 04:54 PM IST
  • ಶಾರುಖ್ ಖಾನ್ ಪ್ರಿಯಾಂಕಾ ಚೋಪ್ರಾ ಮದುವೆ ವದಂತಿ
  • ಶಾರುಖ್ - ಪ್ರಿಯಾಂಕಾ ಮದುವೆ ಆಗಿದ್ದು ನಿಜಾನಾ?
  • ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಸಂಬಂಧ
ಶಾರುಖ್ ಖಾನ್ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆ ಆಗಿದ್ರಾ? title=

Priyanka Chopra: ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಸಂಬಂಧದ ಬಗ್ಗೆ ಅನೇಕ ವದಂತಿಗಳಿವೆ. ಶಾರುಖ್‌ ಖಾನ್ ಮದುವೆಯಾಗಿ 32 ವರ್ಷಗಳು ಕಳೆದಿವೆ. ಇತ್ತ ಪಿಯಾಂಕಾ‌ ಚೋಪ್ರಾ ಸಹ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ನಡುವೆ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಮದುವೆ ಆಗಿದ್ದರು ಎಂಬ ಸುದ್ದಿ ವೈರಲ್‌ ಆಗುತ್ತಿದೆ. 

ಡಾನ್ 2 ಚಿತ್ರೀಕರಣದ ಸಮಯದಲ್ಲಿ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ನಡುವೆ ಆತ್ಮೀಯತೆ ಬೆಳೆಯಿತು ಎನ್ನಲಾಗುತ್ತದೆ. ಇವರಿಬ್ಬರು ಮದುವೆ ಕೂಡ ಆಗಿದ್ರು ಎಂದು ವದಂತಿಗಳಿವೆ. ಇದೇ ವಿಚಾರದ ಜಗಳದಿಂದ ಶಾರುಖ್ ಮತ್ತು ಗೌರಿ ವಿಚ್ಛೇದನ‌ ಪಡೆಯುವವರೆಗೂ ಹೋಗಿದ್ದರಂತೆ ಎಂದು ಸಹ ಹೇಳಲಾಗುತ್ತದೆ. 

'ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ ಪ್ರಿಯಾಂಕಾ ಚೋಪ್ರಾ ಗೆಲುವು ಸಾಧಿಸಿದ್ದರು. ಈ ಸಮಯದಲ್ಲಿ ಪ್ರಿಯಾಂಕಾ ಅವರನ್ನು ಮದುವೆಯಾಗಲು ಶಾರುಖ್ ಖಾನ್ ಪ್ರಪೋಸ್‌ ಮಾಡಿದ್ದರಂತೆ ಎಂದು ಹೇಳಲಾಗುತ್ತದೆ. ಇದಾದ ಬಳಿಕ ಇಬ್ಬರೂ ಮದುವೆಯಾಗಿದ್ದರು ಎನ್ನುವ ದೊಡ್ಡ ವದಂತಿ ಆ ಕಾಲದಲ್ಲಿ ಹಬ್ಬಿತ್ತು. 

ಇದನ್ನೂ ಓದಿ: Aishwarya Rai: ಡಿವೋರ್ಸ್‌ ವದಂತಿ ಬೆನ್ನಲ್ಲೇ ಐಶ್ವರ್ಯಾ - ಅಭಿಷೇಕ್ ಒಂದೇ ವೇದಿಕೆಯಲ್ಲಿ..! 
 
ಆದರೆ ಕೆಲವು ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್‌ ತಲುಪಿದ್ದಾಗ ತೀರ್ಪುಗಾರರಲ್ಲಿ ಶಾರುಖ್‌ ಖಾನ್‌ ಸಹ ಒಬ್ಬರಾಗಿದ್ದರು. ಈ ಕಾರ್ಯಕ್ರಮವನ್ನು ಮಲೈಕಾ ಅರೋರಾ ಹೋಸ್ಟ್‌ ಮಾಡಿದ್ದರು. ಆಗ ಪ್ರಿಯಾಂಕಾ ಚೋಪ್ರಾ ಅವರಿಗೆ ಶಾರುಖ್‌ ಖಾನ್‌ ಒಂದು ಪ್ರಶ್ನೆ ಕೇಳಿದ್ದರು ಎನ್ನಲಾಗುತ್ತದೆ. 

ಅನೇಕ ದಾಖಲೆ ಮಾಡಿದ, ದೇಶದ  ಹೆಮ್ಮೆಯ ಅಜರುದ್ದೀನ್ ಅವರಂತಹ ಶ್ರೇಷ್ಠ ಕ್ರಿಕೆಟಿಗ ಅಥವಾ ನನ್ನಂಥ ಹಿಂದಿ ಚಲನಚಿತ್ರ ತಾರೆ ಇಬ್ಬರಲ್ಲಿ ಯಾರನ್ನು ಮದುವೆಯಾಗಲು ಬಯಸುವಿರಿ ಎಂದು ಪ್ರಿಯಾಂಕಾ ಚೋಪ್ರಾಗೆ ಶಾರುಖ್‌ ಕೇಳಿದ್ದರು. ಅದಕ್ಕೆ ಪ್ರಿಯಾಂಕಾ ಶ್ರೇಷ್ಠ ಕ್ರಿಕೆಟಿಗನನ್ನೇ ಮದುವೆ ಆಗುವೆ ಎಂದು ಉತ್ತರಿಸಿದ್ದರು ಎಂದು ಹೇಳಲಾಗುತ್ತದೆ. 

ಇದಾದ ಬಳಿಕ ಡಾನ್‌ ಸಿನಿಮಾದಲ್ಲಿ ಶಾರುಖ್‌ ಖಾನ್‌ ಮತ್ತು ಪ್ರಿಯಾಂಕಾ ಚೋಪ್ರಾ ಒಟ್ಟಿಗೆ ನಟಿಸಿದರು. ನಂತರ ಇದೇ ಜೋಡಿ ಡಾನ್ -2 ಸಿನಿಮಾದಲ್ಲೂ ನಟಿಸಿತು. ಆ ಬಳಿಕ ಇವರಿಬ್ಬರೂ ಮದುವೆಯಾಗಿದ್ದರು ಎಂಬ ವದಂತಿಗಳು ಇವೆ. ಗೌರಿ ಅವರನ್ನು ಶಾರುಖ್ ಮದುವೆಯಾದ ಮೇಲೂ ಪ್ರಿಯಾಂಕಾ ಜೊತೆ‌ ಡೇಟಿಂಗ್​ ಮುಂದುವರೆಸಿದ್ದರು‌ ಎಂದು ಸಹ ಹೇಳಲಾಗುತ್ತದೆ. 

ಇದನ್ನೂ ಓದಿ: Yash 19: ಯಶ್ ಗೆ ಈ ʻನ್ಯಾಚುರಲ್‌ ಬ್ಯೂಟಿʼನೇ ನಾಯಕಿ.. ಕನ್ನಡಕ್ಕೆ ಸಾಯಿಪಲ್ಲವಿ‌ ಗ್ರ್ಯಾಂಡ್ ಎಂಟ್ರಿ.! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News