ವೈರಲ್ ವಿಂಕ್ 'ಪ್ರಿಯಾ ವಾರಿಯರ್' ಗೆ ಈ ಕ್ರಿಕೆಟರ ಬಲು ಇಷ್ಟವಂತೆ!

    

Last Updated : Feb 20, 2018, 06:19 PM IST
ವೈರಲ್ ವಿಂಕ್ 'ಪ್ರಿಯಾ ವಾರಿಯರ್' ಗೆ ಈ ಕ್ರಿಕೆಟರ ಬಲು ಇಷ್ಟವಂತೆ!  title=

ನವದೆಹಲಿ: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ 'ಒರು ಅದಾರ್ ಲವ್ ಫಿಲಂ ಟಿಸರ್' ನಲ್ಲಿ ತನ್ನ ಹುಬ್ಬೆರಿಸುವುದಕ್ಕೆ ಕೋಟ್ಯಾಂತರ ಜನರ ಮನ ಗೆದ್ದಿದ್ದ ಈ ಮಲಿಯಾಳಿ ಪೋರಿ, ಕೇವಲ ಒಂದೇ ದಿನದಲ್ಲಿ ಇನ್ಸ್ತಾಗ್ರಾಂ ನಲ್ಲಿ ಆರು ಲಕ್ಷಕ್ಕೂ ಅಧಿಕ ಫಾಲೋವರ್ ಗಳನ್ನು ಗಳಿಸಿದ್ದಳು. 

ಆ ಮೂಲಕ ರಿಯಾಲಿಟಿ ಸ್ಟಾರ್ ಕೈಲಿ ಜೆನ್ನರ್ ಮತ್ತು ಪುಟ್ಬಾಲ್ ಆಟಗಾರರ ಕ್ರಿಸ್ಟಿಯಾನೋ ರೋನಾಲ್ಡೋ ನಂತರ ಜಾಗತಿಕವಾಗಿ ಒಂದೇ ದಿನದಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿದ ಖ್ಯಾತಿ ಪ್ರಿಯಾ ವಾರಿಯರದ್ದು.

ಈಗ ಸೋಶಿಯಲ್ ಮೀಡಿಯಾದಲ್ಲಿ 'ವೈರಲ್ ವಿಂಕ್' ಎಂದು ಖ್ಯಾತಿ ಪಡೆದಿರುವ  ಪ್ರಿಯಾ ವಾರಿಯರ್ ಇಂಡಿಯಾ ಟಿವಿ ಗೆ ನೀಡಿರುವ ಸಂದರ್ಶನದಲ್ಲಿ ತನ್ನ ಇಷ್ಟವಾದ ಕ್ರಿಕೆಟ್ ಆಟಗಾರ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯಂತೆ ! ಎಂದು ಉತ್ತರಿಸಿದ್ದಾಳೆ.

Trending News