ಕನ್ನಡ ಸಿನಿರಂಗಕ್ಕೆ ಯಂಗ್‌ ಟೈಗರ್‌ ಎಂಟ್ರಿ : ಪ್ರಶಾಂತ್‌ ನೀಲ್‌ NTR31ನಲ್ಲಿ ಬಾದ್ ಶಾ..! 

ಕೆಜಿಎಫ್‌ ಚಾಪ್ಟರ್‌ 2 ಸಕ್ಸಸ್‌ ಬೆನ್ನಲ್ಲೆ ಸಾಲು ಸಾಲು ಸಿನಿಮಾಗಳಲ್ಲಿ ಸ್ಟಾರ್‌ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಬ್ಯುಸಿಯಾಗಿದ್ದಾರೆ. ಪ್ರಭಾಸ್‌ ನಟನೆಯ ಸಲಾರ್‌ ಸಿನಿಮಾ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿದೆ. ಇದರ ಬೆನ್ನಲ್ಲೆ ಪ್ರಶಾಂತ್‌ ನೀಲ್‌ ಟಾಲಿವುಡ್‌ ಯಂಗ್‌ ಟೈಗರ್‌ ಜ್ಯೂ.ಎನ್‌ಟಿಆರ್‌ ಜೊತೆ ಹೊಸ ಸಿನಿಮಾ  ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಕನ್ನಡದ ಸಿನಿಮಾದಲ್ಲಿ ತಾರಕ್‌ ಅಭಿನಯಿಸಲಿದ್ದಾರೆ ಎನ್ನುವುದು ತುಂಬಾ ಕುತೂಹಲ ಮೂಡಿಸಿದೆ.

Written by - Krishna N K | Last Updated : Nov 19, 2022, 11:30 AM IST
  • ಕನ್ನಡ ಸಿನಿರಂಗಕ್ಕೆ ಯಂಗ್‌ ಟೈಗರ್‌ ಎನ್‌ಟಿಆರ್‌ ಪ್ರವೇಶ
  • ಕೆಜಿಎಫ್‌ ಮಾಂತ್ರಿಕ ಪ್ರಶಾಂತ್‌ ನೀಲ್‌ ಸಿನಿಮಾದಲ್ಲಿ ತಾರಕ್‌
  • ಕನ್ನಡ ಮತ್ತು ತೆಲುಗುನಲ್ಲಿ ಏಕಕಾಲಕ್ಕೆ ಸಿನಿಮಾ ಶೂಟಿಂಗ್‌
ಕನ್ನಡ ಸಿನಿರಂಗಕ್ಕೆ ಯಂಗ್‌ ಟೈಗರ್‌ ಎಂಟ್ರಿ : ಪ್ರಶಾಂತ್‌ ನೀಲ್‌ NTR31ನಲ್ಲಿ ಬಾದ್ ಶಾ..!  title=

NTR31 : ಕೆಜಿಎಫ್‌ ಚಾಪ್ಟರ್‌ 2 ಸಕ್ಸಸ್‌ ಬೆನ್ನಲ್ಲೆ ಸಾಲು ಸಾಲು ಸಿನಿಮಾಗಳಲ್ಲಿ ಸ್ಟಾರ್‌ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಬ್ಯುಸಿಯಾಗಿದ್ದಾರೆ. ಪ್ರಭಾಸ್‌ ನಟನೆಯ ಸಲಾರ್‌ ಸಿನಿಮಾ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿದೆ. ಇದರ ಬೆನ್ನಲ್ಲೆ ಪ್ರಶಾಂತ್‌ ನೀಲ್‌ ಟಾಲಿವುಡ್‌ ಯಂಗ್‌ ಟೈಗರ್‌ ಜ್ಯೂ.ಎನ್‌ಟಿಆರ್‌ ಜೊತೆ ಹೊಸ ಸಿನಿಮಾ  ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಕನ್ನಡದ ಸಿನಿಮಾದಲ್ಲಿ ತಾರಕ್‌ ಅಭಿನಯಿಸಲಿದ್ದಾರೆ ಎನ್ನುವುದು ತುಂಬಾ ಕುತೂಹಲ ಮೂಡಿಸಿದೆ.

ಹೌದು... ತೆಲುಗು ನಟ ಕನ್ನಡ ಸಿನಿಮಾದಲ್ಲಿ ಎನ್ನುವುದು ಎಲ್ಲರಿಗೂ ಅಚ್ಚರಿ ಮೂಡಿಸಬಹುದು ಆದ್ರೆ ಜ್ಯೂ.ಎನ್‌ಟಿಆರ್ ಅವರಿಗೆ ಕರ್ನಾಟಕದಲ್ಲೂ ತುಂಬಾ ಜನ ಅಭಿಮಾನಿಗಳಿದ್ದಾರೆ. ಮೊದಲಿನಿಂದಲೂ ಅವರ ಸಿನಿಮಾಗಳು ಕರ್ನಾಟಕದಲ್ಲಿಯೂ ಹೆಚ್ಚು ಪ್ರದರ್ಶನ ಕಂಡಿವೆ. ತಾಕರ್‌ ಗಡಿದಾಟಿ ಪ್ರೀತಿಗಳಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್‌ಟಿಆರ್ ಕನ್ನಡದ ಭಾಷಣ ಅದ್ಭುತವಾಗಿತ್ತು.

ಇದನ್ನೂ ಓದಿ: Ira Khan engagement : ಅದ್ಧೂರಿಯಾಗಿ ನಡೆದ ಅಮೀರ್ ಖಾನ್ ಪುತ್ರಿ ಇರಾ ಖಾನ್ ನಿಶ್ಚಿತಾರ್ಥ!

ಅಲ್ಲದೆ, ಕನ್ನಡಿಗರ ಪ್ರೀತಿಗೆ ತಾರಕ್‌ ತುಂಬಾ ಖುಷಿಪಟ್ಟಿದ್ದಾರೆ. ಇನ್ನು ಗೆಳೆಯ ಪುನೀತ್‌ ರಾಜಕುಮಾರ್‌ ಅವರ ಸಿನಿಮಾಗೆ ಗೆಳೆಯ ಗೆಳೆಯ ಅಂತ ಹಾಡು ಹಾಡಿ ಕನ್ನಡಿಗರ ಮನಗೆದ್ದಿದ್ದರು. ಸದ್ಯ ಸ್ಟಾರ್‌ ಡೈರೆಕ್ಟರ್‌ ಅದು ಕನ್ನಡಿಗರೇ ಆದ ಪ್ರಶಾಂತ್‌ ನೀಲ್‌ ಅವರ ನಿರ್ದೇಶನದಲ್ಲಿ ಕನ್ನಡ ಸಿನಿಮಾದಲ್ಲಿ ಎನ್‌ಟಿಆರ್‌ ಅಭಿನಿಯಿಸುತ್ತಿರುವುದು ಖುಷಿ ತಂದಿದೆ. ಎನ್‌ಟಿಆರ್‌ ಅವರ ತಾಯಿ ಕೂಡ ಕುಂದಾಪುರದವರು ಅಂತ ಎಲ್ಲರಿಗೂ ತಿಳಿದ ವಿಚಾರ. 

ಈಗಾಗಲೇ ತಾರಕ್ ಆರ್‌ಆರ್‌ಆರ್‌ ಸಿನಿಮಾದ ಯಶಸ್ಸುನ್ನು ಕಂಡಿದ್ದಾರೆ. ಕೊರಟಾಲ ಶಿವ ನಿರ್ದೇಶನದಲ್ಲಿ NTR30 ಸಿನಿಮಾ ಬರಲಿದೆ. NTR31 ಚಿತ್ರ ಕನ್ನಡದಲ್ಲಿ ತೆರೆಗೆ ಬರಲಿದ್ದು ಕೆಜಿಎಫ್‌ ಮಾಂತ್ರಿಕ ಪ್ರಶಾಂತ್ ನೀಲ್ ಆ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಈ ಸಿನಿಮಾ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗುನಲ್ಲಿ ಏಕಕಾಲದಲ್ಲಿ ಸಿನಿಮಾ ಚಿತ್ರೀಕರಣವಾಗಲಿದ್ದು, ಸ್ವತಃ ಎನ್‌ಟಿಆರ್‌ ತಮ್ಮ ಪಾತ್ರಕ್ಕೆ ಕನ್ನಡದಲ್ಲೇ ಧ್ವನಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News