ಸಲಾರ್ ಸಿನಿಮಾದಲ್ಲಿ ಪ್ರಭಾಸ್‌ ಬಳಸಿದ ಬೈಕ್‌ ಬೇಕಾ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ

Prabhas Salaar bike : ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ಗೆ ಸಲಾರ್ ಚಿತ್ರ ಉತ್ತಮ ಯಶಸ್ಸನ್ನು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ಪ್ರಭಾಸ್ ಓಡಿಸಿದ ಬೈಕ್ ತುಂಬಾ ಹೈಲೆಟ್‌ ಆಗಿತ್ತು. ಇದೀಗ ಈ ಬೈಕ್‌ ಅನ್ನು ಅಭಿಮಾನಿಗಳು ತಮ್ಮದಾಗಿಸಿಕೊಳ್ಳಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ..

Written by - Krishna N K | Last Updated : Apr 21, 2024, 10:16 AM IST
    • ಪ್ರಭಾಸ್ ಗೆ ಸಲಾರ್ ಚಿತ್ರ ಉತ್ತಮ ಯಶಸ್ಸನ್ನು ತಂದುಕೊಟ್ಟಿತ್ತು.
    • ಈ ಚಿತ್ರದಲ್ಲಿ ಪ್ರಭಾಸ್ ಓಡಿಸಿದ ಬೈಕ್ ತುಂಬಾ ಹೈಲೆಟ್‌ ಆಗಿತ್ತು.
    • ಇದೀಗ ಈ ಬೈಕ್‌ ಅನ್ನು ಅಭಿಮಾನಿಗಳು ತಮ್ಮದಾಗಿಸಿಕೊಳ್ಳಬಹುದು.
ಸಲಾರ್ ಸಿನಿಮಾದಲ್ಲಿ ಪ್ರಭಾಸ್‌ ಬಳಸಿದ ಬೈಕ್‌ ಬೇಕಾ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ title=

Salaar bike contest : ʼಬಾಹುಬಲಿʼ ಸಿನಿಮಾದ ನಂತರ ಪ್ರಭಾಸ್‌ ಸತತ ಫ್ಲಾಪ್‌ಗಳಿಂದ ಕಂಗೆಟ್ಟಿದ್ದರು. ಪ್ರಶಾಂತ್‌ ನೀಲ್‌ ನಿರ್ದೇಶನದ ʼಸಲಾರ್ʼ ಡಾರ್ಲಿಂಗ್‌ಗೆ ಉತ್ತಮ ಯಶಸ್ಸು ತಂದುಕೊಟ್ಟಿತು. ಅಲ್ಲದೆ, ಈ ಸಿನಿಮಾ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ಸಹ ಗಳಿಸಿತು. ಆದ್ರೆ ಸಾಮಾನ್ಯ ಪ್ರೇಕ್ಷಕನಿಗೆ ನಿರಾಸೆ ಮೂಡಿಸಿತ್ತು.

ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಅಭಿನಯದ ಸಲಾರ್ ಮೊದಲ ಭಾಗ 'ಸಲಾರ್- ಸೀಜ್ ಫೈರ್' ತೆಲುಗು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್‌ಗಳ ಸುನಾಮಿ ಸೃಷ್ಟಿಸಿದೆ. ಸದ್ಯ ಈ ಚಿತ್ರದ ಎರಡನೇ ಭಾಗಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಹೈ ಆಕ್ಷನ್ ವೋಲ್ಟೇಜ್ ಎಂಟರ್‌ಟೈನರ್‌ನಲ್ಲಿ ಪ್ರಭಾಸ್ ಅವರ ನಟನೆ ಮತ್ತು ನಿರ್ದೇಶಕರು ಚಿತ್ರವನ್ನು ನಿರ್ದೇಶಿಸಿದ ರೀತಿ ಪ್ರೇಕ್ಷಕರನ್ನು ಮೆಚ್ಚಿದೆ. 

ಇದನ್ನೂ ಓದಿ:69ನೇ ವಯಸ್ಸಿನಲ್ಲಿ ತನ್ನ ಸ್ವಂತ ಮಗನಿಂದಲೇ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ..!

ನಿರ್ದೇಶಕರು ಖಾನ್ಸಾರ್ ಎಂಬ ಸಾಮ್ರಾಜ್ಯವನ್ನು ರಚಿಸಿ, ಆ ಸ್ಥಳದಲ್ಲಿ ನಡೆಯುವ ಘಟನೆಗಳನ್ನು ತುಂಬಾ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಓಡಿಸುವ ಬೈಕ್ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು. ಇದೀಗ ಈ ಬೈಕ್ ಅನ್ನು ತಮ್ಮದಾಗಿಸಿಕೊಳ್ಳಲು ಸಲಾರ್ ಸಿನಿಮಾ ಯೂನಿಟ್ ಪ್ಯಾನ್ಸ್‌ಗೆ ಅವಕಾಶ ನೀಡುತ್ತಿದೆ.

ಸಲಾರ್‌ ಸಿನಿಮಾ ಏಪ್ರಿಲ್ 21 ರಂದು MATTV ನಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದೆ. ಇನ್ನು ಇದೇ ವೇಳೆ, ಚಲನಚಿತ್ರ ತಯಾರಕರು ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಿಗ್‌ ಆಫರ್‌ ನೀಡಿದ್ದಾರೆ. ಒಬ್ಬ ಅದೃಷ್ಟಶಾಲಿಗೆ ಈ ಐಕಾನಿಕ್ ಮೋಟಾರ್ ಸೈಕಲ್ ಅನ್ನು ನೀಡುವುದಾಗಿ ಪ್ರಭಾಸ್ ಹೇಳಿದ್ದಾರೆ. ಈ ಬಗ್ಗೆ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲಂಸ್ ಕೂಡ ಗುರುವಾರ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದೆ. 

ಇದನ್ನೂ ಓದಿ:ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ಗಿಲ್ಲಿ ನಟಿ: ತಾಳಿ ಭಾರವಾಯ್ತಾ ಎಂದ ನೆಟ್ಟಿಗರು!

ಪೋಸ್ಟ್‌ನಲ್ಲಿ ʼSalaarCeaseFireʼ ನಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಸವಾರಿ ಮಾಡಿದ ಅದೇ ಐಕಾನಿಕ್ ಬೈಕ್ ಗೆಲ್ಲಲು ನಿಮಗೆ ಸೂಪರ್ ಆಫರ್. ನೀವು ಮಾಡಬೇಕಾಗಿರುವುದು ಇಷ್ಟೇ.. ಸಲಾರ್ ಮೂವೀಟೈಮ್ ಏಪ್ರಿಲ್‌ನಲ್ಲಿ ಸ್ಟಾರ್ ಮಾದಲ್ಲಿ ಪ್ರಸಾರವಾಗಲಿದ್ದು, ಈ ಸಮಯದಲ್ಲಿ ಪರದೆಯ ಎಡಭಾಗದಲ್ಲಿ ಬೈಕ್ ಚಿತ್ರ ಎಷ್ಟು ಬಾರಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಎಣಿಕೆ ಮಾಡಬೇಕು.. ನಂತರ ನಿಮ್ಮ ಉತ್ತರವನ್ನು, 21 ಸಂಜೆ 5:30 ರಿಂದ ರಾತ್ರಿ 8 ರ ಒಳಗೆ, SALAAR <ಸ್ಪೇಸ್> ಎಂದು ಟೈಪ್ ಮಾಡಿ ಮತ್ತು 9222211199 ಗೆ SMS ಕಳುಹಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News