'ಕಾಶ್ಮೀರದ ಮಕ್ಕಳ ದುಃಸ್ಥಿತಿ ಆತಂಕಕಾರಿ': ನಟಿ ತ್ರಿಶಾ ಕೃಷ್ಣನ್ ಕಳವಳ

ಕಳೆದ ಕೆಲವು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದ ಶಾಲೆಗಳು ಸ್ಥಗಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಟಿ ಹಾಗೂ ಯುನಿಸೆಫ್‌ನ ರಾಯಭಾರಿ ತ್ರಿಶಾ ಕೃಷ್ಣನ್, ಕಾಶ್ಮೀರದ ಮಕ್ಕಳ ದುಃಸ್ಥಿತಿ ಆತಂಕಕಾರಿ ಎಂದು ಹೇಳಿದ್ದಾರೆ.

Last Updated : Aug 29, 2019, 07:53 PM IST
'ಕಾಶ್ಮೀರದ ಮಕ್ಕಳ ದುಃಸ್ಥಿತಿ ಆತಂಕಕಾರಿ': ನಟಿ ತ್ರಿಶಾ ಕೃಷ್ಣನ್ ಕಳವಳ  title=
Photo courtesy: Instagram

ಚೆನ್ನೈ: ಕಳೆದ ಕೆಲವು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದ ಶಾಲೆಗಳು ಸ್ಥಗಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಟಿ ಹಾಗೂ ಯುನಿಸೆಫ್‌ನ ರಾಯಭಾರಿ ತ್ರಿಶಾ ಕೃಷ್ಣನ್, ಕಾಶ್ಮೀರದ ಮಕ್ಕಳ ದುಃಸ್ಥಿತಿ ಆತಂಕಕಾರಿ ಎಂದು ಹೇಳಿದ್ದಾರೆ.

ಹಲವಾರು ದಿನಗಳಿಂದ ಶಾಲೆಗಳು ಸ್ಥಗಿತಗೊಂಡಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ತ್ರಿಶಾ ಶಾಲೆಗಳನ್ನು ಸ್ಥಗಿತಗೊಳಿಸುವುದು ಮಕ್ಕಳ ಮೇಲೆ ಉಂಟಾಗುವ ಮತ್ತೊಂದು ರೀತಿಯ ಹಿಂಸಾಚಾರ ಎಂದು ಹೇಳಿದ್ದಾರೆ. 'ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯ ಅದು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದರು.'ಮಗುವಿಗೆ ಉತ್ತಮ ಶಿಕ್ಷಣ ದೊರೆತರೆ ಬಹಳಷ್ಟು ವಿಷಯಗಳನ್ನು ನಿಲ್ಲಿಸಬಹುದು ಮತ್ತು ನಿರ್ಮೂಲನೆ ಮಾಡಬಹುದು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ ಕಾಲೇಜುಗಳನ್ನು ಬಂದ್ ಮಾಡಲಾಯಿತು. ಕೇಂದ್ರವು ಸಂವಿಧಾನದ 370 ನೇ ಪರಿಚ್ಛೇಧದ ಅಡಿಯಲ್ಲಿ ತನ್ನ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಕಾಶ್ಮೀರವನ್ನು ಎರಡು ವಿಭಿನ್ನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಕಣಿವೆಯ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಸೋಮವಾರ ತಿಳಿಸಿದೆ. ನಿರ್ಬಂಧಗಳನ್ನು ಸಡಿಲಿಸಿರುವ ಪ್ರದೇಶಗಳಲ್ಲಿರುವ ಕೆಲವು ಶಿಕ್ಷಣ ಸಂಸ್ಥೆಗಳನ್ನು ಬುಧವಾರ ಮತ್ತೆ ತೆರೆಯಲಾಗುವುದು ಎಂದು ಹೇಳಿತ್ತು.

ಯುನಿಸೆಫ್ ರಾಯಭಾರಿಯಾಗಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ತ್ರಿಶಾ, ವಿಶೇಷವಾಗಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಜನರಲ್ಲಿ ಮನವಿ ಮಾಡಿದರು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ದಾಖಲಾದ ಪ್ರಕರಣಗಳು 2014 ರಲ್ಲಿ 9,000 ದಿಂದ 2016 ರಲ್ಲಿ 36,000 ಕ್ಕೆ ಏರಿದೆ.ಆದ್ದರಿಂದ ಗೆಳೆಯರೊಂದಿಗೆ ಸಂವಹನ ನಡೆಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಬಹುದು ಎಂದು ಅವರು ಹೇಳಿದರು.

Trending News